BHIM SBI Pay ಪ್ರಾರಂಭ; ಎಸ್ ಬಿಐ ಗ್ರಾಹಕರು ಇನ್ಮುಂದೆ ಕ್ಷಣಾರ್ಧದಲ್ಲಿ ಸಿಂಗಾಪುರಕ್ಕೆ ಹಣ ಕಳುಹಿಸ್ಬಹುದು!

ಇತ್ತೀಚೆಗಷ್ಟೇ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ ಹಾಗೂ ಸಿಂಗಾಪುರದ ಪೇ ನೌ ಲಿಂಕ್ ಮಾಡಲಾಗಿದೆ. ಈಗ ಇದನ್ನು ಬಳಸಿಕೊಂಡು ಎಸ್ ಬಿಐ BHIM SBI Pay ಪರಿಚಯಿಸಿದೆ. ಈ ಅಪ್ಲಿಕೇಷನ್ ಬಳಸಿ ಎಸ್ ಬಿಐ ಗ್ರಾಹಕರು ಸಿಂಗಾಪುರಕ್ಕೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡಬಹುದು. 

SBI launches BHIM SBI Pay enabling simple fund transfers from India to Singapore anu

ನವದೆಹಲಿ (ಫೆ.24): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಭೀಮ್ ಎಸ್ ಬಿಐ ಪೇ ಎಂಬ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಿದೆ. ಈ ಅಪ್ಲಿಕೇಷನ್ ಬಳಸಿ ನೀವು ಕ್ಷಣ ಮಾತ್ರದಲ್ಲಿ ಭಾರತದಿಂದ ಸಿಂಗಾಪುರಕ್ಕೆ ಹಣ ವರ್ಗಾವಣೆ ಮಾಡಬಹುದು. ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಹಾಗೂ ಸಿಂಗಾಪುರದ ಪೇನೌ ಅನ್ನು ಯುಪಿಐ-ಪೇ ನೌ ಲಿಂಕೇಜ್ ಅಡಿಯಲ್ಲಿ ಇತ್ತೀಚೆಗೆ ಲಿಂಕ್ ಮಾಡಿದ ಬಳಿಕ ಈ ಸೌಲಭ್ಯ ಒದಗಿಸಲಾಗಿದೆ. ಈ ಲಿಂಕ್ ಮೂಲಕ ಎಸ್ ಬಿಐ ಗ್ರಾಹಕರು ಯುಪಿಐ ಬಳಸಿ ಭಾರತದಿಂದ ಸಿಂಗಾಪುರಕ್ಕೆ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಮಂಗಳವಾರವಷ್ಟೇ  ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಂಗಾಪುರ ಪ್ರಧಾನಿ ಲಿ ಹಸೀನ್ ಲೂಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಯುಪಿಐ ಪೇನೌ ಲಿಂಕ್ ಗೆ ಚಾಲನೆ ನೀಡಿದ್ದರು. ಅದಾದ ಮರುದಿನ ಎಸ್ ಬಿಐ 'ಭೀಮ್ ಎಸ್ ಬಿಐ ಪೇ ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ನೀಡಿದೆ. ಇದ್ರಿಂದ ಎಸ್ ಬಿಐ ಗ್ರಾಹಕರು ಮೊಬೈಲ್ ಸಂಖ್ಯೆ ಬಳಸಿ ಭಾರತ ಹಾಗೂ ಸಿಂಗಾಪುರದ ನಡುವೆ ಹಣದ ವರ್ಗಾವಣೆ ನಡೆಸಬಹುದು. ಯುಪಿಐ ಪೇ ನೌ ಲಿಂಕ್ ಗಡಿಯಾಚೆಗೆ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೊಸ ಮೈಲಿಗಲ್ಲು ಆಗಿದೆ ಎಂದು ಬ್ಯಾಂಕ್ ಹೇಳಿದೆ. ಅಲ್ಲದೆ, ಇದು ಜನರಿಗೆ ತ್ವರಿತ ಹಾಗೂ ಕಡಿಮೆ ಶುಲ್ಕದಲ್ಲಿ ಬೇರೆ ರಾಷ್ಟ್ರಕ್ಕೆ ಹಣ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿದೆ.

ಭೀಮ್ ಎಸ್ ಬಿಐ ಪೇ (BHIM SBI Pay) ವ್ಯವಸ್ಥೆಗೆ ಚಾಲನೆ ನೀಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎಸ್ ಬಿಐ ಚೇರ್ಮನ್ ದಿನೇಶ್ ಖಾರ, ಇಂಥ ವ್ಯವಸ್ಥೆಯನ್ನು ಪರಿಚಯಿಸುತ್ತಿರುವ ಮೊದಲ ಬ್ಯಾಂಕ್ ಎಸ್ ಬಿಐ ಆಗಿದೆ ಎಂದು ಹೇಳಿದ್ದಾರೆ. ಇದೆಲ್ಲವೂ ಭಾರತ ಸರ್ಕಾರದ ಡಿಜಿಟಲೀಕರಣ ಪ್ರಯತ್ನಗಳ ಫಲವಾಗಿದೆ. ಇದರಿಂದಲೇ ಇಂದು ಬಳಕೆದಾರರಿಗೆ ಗಡಿಯಾಚೆಗಿನ ಪಾವತಿ ಸೌಲಭ್ಯವನ್ನು ಸುಲಭವಾಗಿ ಕಲ್ಪಿಸಲು ಸಾಧ್ಯವಾಗಿದೆ ಎಂದು ದಿನೇಶ್ ಖಾರ ಹೇಳಿದ್ದಾರೆ. 
ಫೆಬ್ರವರಿ 21ರಂದು ಪ್ರಧಾನಿ ನರೇಂದ್ರ ಮೋದಿ ಯುಪಿಐ ಹಾಗೂ ಸಿಂಗಾಪುರದ ಪೇನೌ ಜೋಡಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ‘ಭಾರತದಲ್ಲಿ 2022ರಲ್ಲಿ 74 ಶತಕೋಟಿ ಯುಪಿಐ ವಹಿವಾಟು ನಡೆದಿದ್ದು, ಇದರ ಒಟ್ಟಾರೆ ಮೌಲ್ಯ 126 ಶತಕೋಟಿ ರೂ. ಆಗಿದೆ' ಎಂಬ ಮಾಹಿತಿ ನೀಡಿದ್ದರು.  ಸಿಂಗಾಪುರದ ಜೊತೆಗಿನ ಭಾರತದ ಯುಪಿಐ ವ್ಯವಹಾರದಿಂದ ಉಭಯ ದೇಶಗಳ ಜನರು, ಅದರಲ್ಲೂ ವಿಶೇಷವಾಗಿ ಸಿಂಗಾಪುರದಲ್ಲಿನ ಭಾರತೀಯ ಸಂಜಾತರು ನಿರಾತಂಕವಾಗಿ ಸುರಕ್ಷಿತ ವಿಧಾನ ಬಳಸಿ ಹಣದ ವರ್ಗಾವಣೆ ನಡೆಸಬಹುದು ಎಂದು ಅವರು ಹೇಳಿದ್ದರು. 

ಅಮೃತ್ ಕಲಶ್ ಯೋಜನೆ ಪರಿಚಯಿಸಿದ SBI; ಹಿರಿಯ ನಾಗರಿಕರಿಗೆ ಶೇ.7.6 ಬಡ್ಡಿದರ

ಎಷ್ಟು ವಹಿವಾಟು ನಡೆಸಬಹುದು?
ಆರಂಭದಲ್ಲಿ ಭಾರತೀಯ ಬಳಕೆದಾರರು ಒಂದು ದಿನದಲ್ಲಿ 60,000 ವರೆಗೆ (ಸಿಂಗಾಪುರ ಕರೆನ್ಸಿ ಮೌಲ್ಯ ಸುಮಾರು 1,000) ರವಾನೆ ಮಾಡಬಹುದು. ವಹಿವಾಟು ಮಾಡುವ ಸಮಯದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ಹಾಗೂ ಸಿಂಗಾಪುರ ಕರೆನ್ಸಿಗಳಲ್ಲೆರಡರಲ್ಲೂ ಆ್ಯಪ್‌ನಲ್ಲಿ ಲೆಕ್ಕಾಚಾರ ಸಿಗುತ್ತದೆ.

ಸಾಲದ ಬಡ್ಡಿದರ ಏರಿಕೆ ಮಾಡಿದ SBI;ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಫೋನ್ ಪೇ ಬಳಸಿ ವಿದೇಶಗಳಲ್ಲಿ ಪಾವತಿ ಸಾಧ್ಯ
ಈಗ ಫೋನ್ ಪೇ ಬಳಸಿ ವಿದೇಶಗಳಲ್ಲೂ ಪಾವತಿ ಮಾಡಬಹುದಾಗಿದೆ. ಈ ಮೂಲಕ ವಿದೇಶಗಳಿಗೂ ತನ್ನ ಸೇವೆ ವಿಸ್ತರಿಸಿದ ಭಾರತದ ಮೊದಲ ಫಿನ್ ಟೆಕ್ ಆಪ್ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಈಗ ಫೋನ್ ಪೇ ಮೂಲಕ ಅಲ್ಲಿನ ವ್ಯಾಪಾರಿಗಳಿಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಆರಂಭಿಕ ಹಂತದಲ್ಲಿ ಈ ಸೌಲಭ್ಯ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್ ನಲ್ಲಿ ಲಭಿಸಲಿದೆ. ಈ ರಾಷ್ಟ್ರಗಳಲ್ಲಿ ಸ್ಥಳೀಯ ಕ್ಯುಆರ್ ಕೋಡ್ ಲಭ್ಯವಿದ್ದು, ಫೋನ್ ಪೇ ಪಾವತಿಗೆ ಬೆಂಬಲ ನೀಡಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರಗಳಿಗೆ ಫೋನ್ ಪೇ ತನ್ನ ಸೇವೆ ವಿಸ್ತರಿಸಲಿದೆ.
 

Latest Videos
Follow Us:
Download App:
  • android
  • ios