ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ಮಾ.17ರಿಂದ ಶುಲ್ಕಗಳಲ್ಲಿ ಬದಲಾವಣೆ

ಎಸ್ ಬಿಐ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಮಾ.17ರಿಂದ ಬದಲಾವಣೆ ಆಗಲಿದೆ. ಈ ಬಗ್ಗೆ ಎಸ್ ಬಿಐ ಕಾರ್ಡ್ಸ್ ಹಾಗೂ ಪಾವತಿ ಸೇವೆಗಳು ಮಾಹಿತಿ ನೀಡಿವೆ ಕೂಡ. ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಕೂಡ ಬದಲಾವಣೆ ಆಗಲಿದೆ. 
 

State Bank of India to change credit card charges from March 17 Here is what it means for customers

ನವದೆಹಲಿ (ಫೆ.15): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕ್ರೆಡಿಟ್ ಕಾರ್ಡ್ ಶುಲ್ಕದಲ್ಲಿ ಬದಲಾವಣೆ ಮಾಡಿದೆ.  ಕ್ರೆಡಿಟ್ ಕಾರ್ಡ್ ಶುಲ್ಕದಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಎಸ್ ಬಿಐ ಕಾರ್ಡ್ಸ್ ಹಾಗೂ ಪಾವತಿ ಸೇವೆಗಳು ಮಾಹಿತಿ ನೀಡಿವೆ. ಎಲ್ಲ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಶುಲ್ಕಗಳು 2023ರ ಮಾರ್ಚ್ 17ರಿಂದ ಜಾರಿಗೆ ಬರಲಿವೆ ಎಮದು ಗ್ರಾಹಕರಿಗೆ ಕಳುಹಿಸಿರುವ ಎಸ್ ಎಂಎಸ್ ಹಾಗೂ ಇ-ಮೇಲ್ ನಲ್ಲಿ ತಿಳಿಸಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವ ಗ್ರಾಹಕರಿಗೆ ತೆರಿಗೆಯ ಜೊತೆಗೆ ಹೆಚ್ಚುವರಿ 199 ರೂ. ವಿಧಿಸಲಾಗುತ್ತದೆ. ಈ ಹಿಂದೆ 99ರೂ. ವಿಧಿಸಲಾಗುತ್ತಿತ್ತು. 2022ರ ನವೆಂಬರ್ ನಲ್ಲಿಎಸ್ ಬಿಐ ಕಾರ್ಡ್ಸ್ ಎಸ್ ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ವಹಿವಾಟುಗಳ ಮೇಲಿನ ಶುಲ್ಕವನ್ನು 199 ರೂ.ಗೆ ಹೆಚ್ಚಿಸಿತ್ತು. ಈ ಹೆಚ್ಚಳ  2022ರ ನವೆಂಬರ್ ನಿಂದಲೇ ಜಾರಿಗೆ ಬಂದಿತ್ತು ಕೂಡ. ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಅನ್ನುಕೂಡ  ಜನವರಿ 1ರಿಂದ ಪರಿಷ್ಕರಣೆ ಮಾಡಲಾಗಿದೆ. ಇನ್ನು ಸಿಂಪ್ಲಿ ಕ್ಲಿಕ್ ಕಾರ್ಡ್ ದಾರರಿಗೆ ಸಂಬಂಧಿಸಿದ ಅನೇಕ ನಿರ್ಬಂಧಗಳನ್ನು ಕೂಡ ಎಸ್ ಬಿಐ ಕಾರ್ಡ್ಸ್ ಹಾಗೂ ಪಾವತಿ ಸೇವೆಗಳು ನವೀಕರಿಸಿದ್ದು, ಹೊಸ ನಿಯಮಗಳು ಜ.1ರಿಂದಲೇ ಜಾರಿಗೆ ಬಂದಿವೆ.

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇತ್ತೀಚೆಗೆ ಎಸ್ ಬಿಐ ಕಾರ್ಡ್ಸ್ ಕಳುಹಿಸಿರುವ ಸಂದೇಶ ಹೀಗಿದೆ: 'ಎಸ್ ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ವಹಿವಾಟುಗಳ ಮೇಲಿನ ಶುಲ್ಕಗಳನ್ನು  2023ರ ಮಾರ್ಚ್ 17ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.' ಹೀಗಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೊಸ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯ. ಇಲ್ಲವಾದ್ರೆ ಮಾರ್ಚ್ 17ರ ಬಳಿಕ ಕ್ರೆಡಿಟ್ ಕಾರ್ಡ್ ಬಳಸಿ ಜೇಬಿನ ಹೊರೆ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

HDFC ಗ್ರಾಹಕರಿಗೆ ಶುಭಸುದ್ದಿ; ಇನ್ಮುಂದೆ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಬೇಕಾಗಿಲ್ಲ!

ಬೇರೆ ಬ್ಯಾಂಕ್ ಗಳಲ್ಲಿ ಶುಲ್ಕ ಎಷ್ಟಿದೆ?
ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಗೆ ಎಸ್ ಬಿಐ ಹೊರತುಪಡಿಸಿ ಇತರ ಬ್ಯಾಂಕ್ ಗಳು ಎಷ್ಟು ಶುಲ್ಕ ವಿಧಿಸುತ್ತವೆ? ಇಲ್ಲಿದೆ ಮಾಹಿತಿ.

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಗೆ ಶೇ.1ರಷ್ಟು ಪ್ರೊಸೆಸಿಂಗ್ ಶುಲ್ಕವನ್ನು 2022ರ ಅಕ್ಟೋಬರ್ 20ರಿಂದ ವಿಧಿಸಲಾಗುತ್ತಿದೆ. 

ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ (HDFC Bank) ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಗೆ ಒಟ್ಟು ಮೊತ್ತದ ಮೇಲೆ ಶೇ. 1ರಷ್ಟು ಶುಲ್ಕ ವಿಧಿಸುತ್ತಿದೆ.

ಕೋಟಕ್ ಮಹೀಂದ್ರ ಬ್ಯಾಂಕ್
ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಗೆ ಕೋಟಕ್ ಮಹೀಂದ್ರ ಬ್ಯಾಂಕ್ ಒಟ್ಟು ವಹಿವಾಟಿನ ಮೊತ್ತದ ಮೇಲೆ ಶೇ.1ರಷ್ಟು ಶುಲ್ಕ ಹಾಗೂ ಜಿಎಸ್ ಟಿ ಅನ್ನು 2023ರ ಫೆಬ್ರವರಿ15ರಿಂದ ವಿಧಿಸುತ್ತಿದೆ. ಆದರೆ, ವೈಟ್ ಹಾಗೂ ವೈಟ್ ರಿಸರ್ವ್ ಕ್ರೆಡಿಟ್ ಕಾರ್ಡ್ ಗಳಿಗೆ ಇದು ಅನ್ವಯಿಸೋದಿಲ್ಲ. 

Personal Finance : ತಿಂಗಳ ಇಎಂಐ ಹೊಣೆ ಕಡಿಮೆಯಾಗ್ಬೇಕೆಂದ್ರೆ ಹೀಗೆ ಮಾಡಿ

ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಬಾಡಿಗೆ ಪಾವತಿಗಳ ಮೇಲೆ ಒಟ್ಟು ವಹಿವಾಟಿನ ಶೇ.1ರಷ್ಟು ಶುಲ್ಕವನ್ನು 2023ರ ಫೆಬ್ರವರಿ 1ರಿಂದ ವಿಧಿಸಲಾಗುತ್ತಿದೆ.

ಆ್ಯಪ್ ಗಳಲ್ಲೂ ಬಾಡಿಗೆ ಪಾವತಿಗೆ ಶುಲ್ಕ
ಥರ್ಡ್ ಪಾರ್ಟಿ ಆ್ಯಪ್ ಗಳಾದ ಕ್ರೆಡ್ (Cred), ಪೇಟಿಎಂ (PTM), ಮೈಗೇಟ್ (Mygate) ಮುಂತಾದವು ಕ್ರೆಡಿಟ್ ಕಾರ್ಡ್ ಗಳ (Credit cards) ಮುಖಾಂತರ ಮನೆ ಬಾಡಿಗೆ (Home rent) ಪಾವತಿಸಲು ಅನುವು ಮಾಡಿ ಕೊಡುತ್ತವೆ. ಈ ಆ್ಯಪ್ ಗಳು (Apps) ಬಾಡಿಗೆ ಪಾವತಿಗಳ ಮೇಲೆ ಶುಲ್ಕ ವಿಧಿಸುತ್ತವೆ. ಉದಾಹರಣೆಗೆ ಕ್ರೆಡ್ ನಲ್ಲಿ (Cred) ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಿದ್ರೆ ಶೇ.1ರಿಂದ ಶೇ.1.75 ಶುಲ್ಕವನ್ನು ಸೇವಾ ಶುಲ್ಕದ ರೂಪದಲ್ಲಿ ವಿಧಿಸುತ್ತದೆ. 

Latest Videos
Follow Us:
Download App:
  • android
  • ios