ಮಹಿಳಾ ಸಬಲೀಕರಣಕ್ಕಾಗಿ ಎಸ್‌ಬಿಐ 'ನಾರಿ ಶಕ್ತಿ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್' ಪರಿಚಯಿಸಿದೆ. ಈ ಕಾರ್ಡ್ 10 ಲಕ್ಷ ರೂಪಾಯಿಗಳ ಅಪಘಾತ ವಿಮಾ ರಕ್ಷಣೆ ನೀಡುತ್ತದೆ. ಇದರಲ್ಲಿ ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶದೊಂದಿಗೆ ವಿವಿಧ ಫೀಚರ್ಗಳು ಲಭ್ಯವಿದೆ.

ಮಹಿಳಾ ಸಬಲೀಕರಣಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಹಿಳೆಯರ ಅಗತ್ಯತೆಗಳು, ಶಾಪಿಂಗ್, ಟ್ರಾವೆಲ್, ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾರಿ ಶಕ್ತಿ ರೂಪೇ ಪ್ಲಾಟಿನಂ ಡೇಬಿಟ್ ಕಾರ್ಡ್ ರೂಪಿಡಿಸಿದೆ. ಈ ಒಂದು ಕಾರ್ಡ್ ತೆಗೆದುಕೊಂಡರೆ ವಿವಿಧ ರೀತಿಯ ಬೆನಿಫಿಟ್ಸ್ ಸಿಗುತ್ತದೆ. ಸುಮಾರು 10 ಲಕ್ಷ ರೂಪಾಯಿ ವರೆಗೂ ಅಪಘಾತ ವಿಮೆ ಜೊತೆಗೆ ಶಾಪಿಂಗ್, ಒಟಿಟಿ ಎಂಟರ್ ಟೈನ್ಮೆಂಟ್ ನಂತಹ ವಿಶೇಷ ಪ್ರಯೋಜನಗಳು ಸಿಗುತ್ತದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ನಾರಿ ಶಕ್ತಿ ಪ್ಲಾಟಿನಂ ಡೇಬಿಟ್ ಕಾರ್ಡ್ ಮೂಲಕ ಎಸ್‌ಬಿಐ ಎಟಿಎಂಗಳೊಂದಿಗೆ ಇತರ ಎಟಿಎಂನಲ್ಲಿಯೂ ವಿಶ್ವದಾದ್ಯಂತ ಎಲ್ಲಿ ಆದರೂ ಹಣ ವಿಥ್ ಡ್ರಾ ಮಾಡಬಹುದು. ಇ-ಕಾಮರ್ಸ್ ಟ್ರಾನ್ಸಕ್ಷನ್ ಮೂಲಕ ಸುರಕ್ಷಿತವಾಗಿ ಆನ್‌ಲೈನ್ ಶಾಪಿಂಗ್ ಮಾಡಬಹುದು. ಇದರಲ್ಲಿ ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶದೊಂದಿಗೆ ವಿವಿಧ ಫೀಚರ್ಗಳು ಲಭ್ಯವಿದೆ.

ಏನೆಲ್ಲಾ ಸೌಲಭ್ಯಗಳಿದೆ ಅಂತ ನೋಡುವುದಾದರೆ,

  • ವರ್ಷಕ್ಕೆ ಒಮ್ಮೆ ಡೊಮೆಸ್ಟಿಕ್ ಏರ್‌ಪೋರ್ಟ್ ಲಾಂಜ್ ಪ್ರವೇಶ ಮಾಡಬಹುದು.
  • ಪ್ರತಿ ಮೂರು ತಿಂಗಳಿಗೆ ಒಮ್ಮೆ 250 ರೂಪಾಯಿ ಮೌಲ್ಯದ ಫ್ಲಿಪ್‌ಕಾರ್ಡ್ ವೋಚರ್ ಸಿಗುತ್ತೆ.
  • ವರ್ಷದ ಗಾನಾ ಚಂದಾದಾರಿಕೆ ಸಿಗಲಿದೆ.
  • ಮಹಿಳೆಯರ ಹೆಲ್ತ್ ಪ್ಯಾಕೇಜ್ ನೀಡುತ್ತಾ, ಹೆಲ್ತ್ ಚೆಕಪ್ ಕಲ್ಪಿಸುತ್ತಿದೆ. ವರ್ಷಕ್ಕೊಮ್ಮೆ ಪ್ಯಾಪ್ ಸ್ಮಿಯರ್ (Pap smear) ಪರೀಕ್ಷೆಯನ್ನು ಮಾಡಲಾಗುತ್ತದೆ.
  • ಒಂದು ಬುಕ್ ಮೈ ಶೋ ವೋಚರ್, 2 ಟಿಕೆಟ್ ಮೇಲೆ 250 ರೂಪಾಯಿವರೆಗೂ ಆಫರ್ ಸಿಗುತ್ತದೆ.
  • ವರ್ಷಕ್ಕೆ ಒಮ್ಮೆ 500 ರೂಪಾಯಿ ಮೌಲ್ಯದ ನೈಕಾ ಕೂಪನ್ ಸಿಗುತ್ತದೆ.
  • ವರ್ಷಕ್ಕೆ ಒಮ್ಮೆ 500 ರೂಪಾಯಿ ಮೌಲ್ಯದ ಇಕ್ಸಿಗೋ ಕೂಪನ್ ಪಡೆದುಕೊಳ್ಳಬಹುದು.
  • ಜಿ5 ವರ್ಷದ ಚಂದಾದಾರಿಕೆ ಸಿಗುತ್ತದೆ.
  • ವರ್ಷಕ್ಕೆ ಒಮ್ಮೆ 500 ರೂಪಾಯಿ ಮೌಲ್ಯದ ಗಿವಾ ಕೂಪನ್ ಕೂಡ ಸಿಗುತ್ತದೆ.
  • ಪ್ರತಿ ತಿಂಗಳು 10 ಸಾವಿರ ವರೆಗೂ ಎಸ್‌ಬಿಐ ರಿವಾರ್ಡ್ ಪಾಯಿಂಟ್ಸ್ ಪಡೆದುಕೊಳ್ಳಬಹುದು.
  • ಎಸ್‌ಬಿಐ ಪ್ಲಾಟಿನಂ ಇಂಟರ್ನ್ಯಾಷನಲ್ ಡೇಬಿಟ್ ಕಾರ್ಡ್ ಮೂಲಕ ಪ್ರತಿ 200 ರೂಪಾಯಿ ಖರ್ಚು ಮಾಡಿದರೆ 2 ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ.

ಬುಕ್ ಮೈ ಶೋದಲ್ಲಿ ಈ ವಿವಾರಡ್ ಪಾಯಿಂಟ್ಸ್ ಬಳಕೆ ಮಾಡಿಕೊಂಡು ಸಿನಿಮಾ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಜೊತೆಗೆ ಮೊಬೈಲ್ ರಿಚಾರ್ಜ್, ಕರೆಂಟ್ ಬಿಲ್, ಡಿಟಿಎಚ್, ಗ್ಯಾಸ್, ಫಾಸ್ಟ್ ಟ್ಯಾಗ್ ನಂತಹ ವಿವಿಧ ರೀತಿಯ ಬಿಲ್‌ಗಳನ್ನು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಪಾವತಿ ಮಾಡಬಹುದು.

  • ಜೊತೆಗೆ 10 ಲಕ್ಷ ರೂಪಾಯಿಯ ಅಪಘಾತ ವಿಮೆ ಸಿಗಲಿದೆ.

ಆದರೆ, ಎಚ್‌ಬಿಐ ನಾಯಿ ಶಕ್ತಿ ಪ್ಲಾಟಿನಂ ಕಾರ್ಡ್ ಮೂಲಕ 10 ಲಕ್ಷ ವೈಯುಕ್ತಿಕ ಅಪಘಾತ ವಿಮೆ ಪಡೆದುಕೊಳ್ಳಲು, ಅಪಘಾತ ಸಂಭವಿಸಿದ 30 ದಿನಗಳ ಒಳಗೆ ಈ ಕಾರ್ಡ್ ಮೂಲಕ ಯಾವುದಾದರೂ ಪಿಓಎಸ್ ಮೆಷಿನ್ ವಹಿವಾಟು ಅಥವಾ ಇ ಕಾಮರ್ಸ್ ವಹಿವಾಟು ಮಾಡಿರಬೇಕು. 30 ದಿನಗಳ ಒಳಗೆ ಕಾರ್ಡ್ ಬಳಕೆ ಮಾಡಿಲ್ಲ ಎಂದರೆ, ಅಪಘಾತ ವಿಮೆ ಕವರೇಜ್ ಅನ್ನೊದು ಅನ್ವಯ ಆಗೋದಿಲ್ಲ.

Scroll to load tweet…