ಮತ್ತೊಂದು ಮೈಲಿಗಲ್ಲು ಸಾಧಿಸಿದ ಪಿಎಂ ಜನ್ ಧನ್ ಯೋಜನೆ; 2 ಲಕ್ಷ ಕೋಟಿ ರೂ.ಗಡಿ ದಾಟಿದ ಠೇವಣಿ ಮೊತ್ತ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಭಾರತದ ಆರ್ಥಿಕ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಿರುವಂತಹ ಯೋಜನೆ.ಜನರನ್ನು ಒಳಗೊಂಡ ಆರ್ಥಿಕ ಅಭಿವೃದ್ಧಿಗೆ ನಾಂದಿ ಹಾಡಿದ ಈ ಯೋಜನೆ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಮೊತ್ತ ಇತ್ತೀಚೆಗೆ 2ಲಕ್ಷ ಕೋಟಿ ರೂ.ಗಡಿ ದಾಟುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ. 
 

Rs 2 lakh cr BIG FEAT for Modi Govts ambitious PM Jan Dhan Yojana UP West Bengal are top contributors anu

ನವದೆಹಲಿ (ಏ.19): ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಪ್ರಮುಖ ಮೈಲಿಗಲ್ಲು ದಾಖಲಿಸಿದೆ. ಈ ಯೋಜನೆಯಡಿ ತೆರೆಯಲ್ಪಟ್ಟ ಖಾತೆಗಳಲ್ಲಿನ ಬ್ಯಾಲೆನ್ಸ್ 2ಲಕ್ಷ ಕೋಟಿ ರೂ. ಗಡಿ ದಾಟಿದೆ. ಈ ವರ್ಷದ ಏ.5ರಂದು ಪಿಎಂಜೆಡಿವೈ ಖಾತೆಗಳ ಒಟ್ಟು ಬ್ಯಾಲೆನ್ಸ್ 2,01,598 ಕೋಟಿ ರೂ. ಇತ್ತು. ಹಣಕಾಸು ಸೇವೆಗಳ ಇಲಾಖೆ ಇತ್ತೀಚೆಗೆ ನೀಡಿದ ಅಂಕಿಅಂಶಗಳ ಪ್ರಕಾರ ಜನ್ ಧನ್ ಯೋಜನೆ  ಒಟ್ಟು  48.70 ಕೋಟಿ ಫಲಾನುಭವಿಗಳನ್ನು ಹೊಂದಿದೆ. ಇದರಲ್ಲಿ ಶೇ.55 ಕ್ಕೂ ಅಧಿಕ ಅಂದರೆ 27.08 ಕೋಟಿ ಮಹಿಳಾ ಫಲಾನುಭವಿಗಳಿದ್ದಾರೆ. ಇನ್ನು ಒಟ್ಟು ಫಲಾನುಭವಿಗಳಲ್ಲಿ ಶೇ.66ರಷ್ಟು ಮಂದಿ ಗ್ರಾಮೀಣ ಅಥವಾ ಅರೆಪಟ್ಟಣ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಇನ್ನು ಇಡೀ ದೇಶದಲ್ಲೇ ಉತ್ತರ ಪ್ರದೇಶ ಈ ಯೋಜನೆಗೆ ಅತ್ಯಧಿಕ ಫಲಾನುಭವಿಗಳನ್ನು ನೀಡಿದೆ. ಉತ್ತರ ಪ್ರದೇಶದಲ್ಲಿ ಜನ್ ಧನ್ ಯೋಜನೆಯ 86,771,098 ಫಲಾನುಭವಿ ಖಾತೆಗಳಿದ್ದು, ಇವುಗಳಲ್ಲಿ ಒಟ್ಟು 42,637.01 ಕೋಟಿ ರೂ. ಬ್ಯಾಲೆನ್ಸ್ ಇದೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು.

ಬಿಹಾರ 54,738,466 ಜನ್ ಧನ್ ಫಲಾನುಭವಿ ಖಾತೆಗಳನ್ನು ಹೊಂದಿದ್ದು, ಅದರಲ್ಲಿ 20,740.38 ಕೋಟಿ ರೂ. ಇದೆ. ಇನ್ನು ಪಶ್ಚಿಮ ಬಂಗಾಳ 19,174.83 ಫಲಾನುಭವಿಗಳ ಖಾತೆಗಳನ್ನು ಹೊಂದಿದ್ದು, ಅದರಲ್ಲಿ 19,174.83 ಕೋಟಿ ರೂ. ಇದೆ. ರಾಜಸ್ಥಾನ 33,340,105 ಫಲಾನುಭವಿಗಳ ಬ್ಯಾಂಕ್ ಖಾತೆ ಹೊಂದಿದ್ದು, ಅದರಲ್ಲಿ 16,190.71 ಕೋಟಿ ರೂ. ಇದೆ. ಮಹಾರಾಷ್ಟ್ರ 32,413,477 ಫಲಾನುಭವಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದರಲ್ಲಿ 12,242.32 ಕೋಟಿ ರೂ. ಇದೆ. 

ಈ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದು, ಎಟಿಎಂ ವಹಿವಾಟು ವಿಫಲವಾದ್ರೆ ಮೇ 1ರಿಂದ ಬೀಳುತ್ತೆ ದಂಡ!

ದೇಶದಲ್ಲಿ ಎಲ್ಲರನ್ನೂ ಒಳಗೊಂಡ ಹಣಕಾಸು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಪಿಎಂಜಿಡಿವೈ ಯೋಜನೆ ಕಳೆದ ವರ್ಷ ಆಗಸ್ಟ್ ಗೆ ಎಂಟು ವರ್ಷಗಳನ್ನು ಪೂರೈಸಿದೆ.  2014ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಯೋಜನೆ ಘೋಷಣೆ ಮಾಡಿದ್ದರು. ಇದನ್ನು ಆರ್ಥಿಕತೆಯಲ್ಲಿ ಜನರನ್ನು ತೊಡಗಿಸಿಕೊಂಡ ಜಗತ್ತಿನ ಅತೀದೊಡ್ಡ ಯೋಜನೆ ಎಂದು ಪರಿಗಣಿಸಲಾಗಿದೆ. 

ಜನ್ ಧನ್ ಖಾತೆ 
ಜನ್ ಧನ್ ಯೋಜನೆ ಪ್ರಾರಂಭಗೊಂಡ ಮೊದಲ ವರ್ಷದಲ್ಲಿ 17.90 ಕೋಟಿ ಖಾತೆಗಳನ್ನು ತೆರೆಯಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ ಜನ್ ಧನ್ ಸೇರಿದಂತೆ ಮೂಲ ಬ್ಯಾಂಕಿಂಗ್ ಉಳಿತಾಯ ಠೇವಣಿ (BSBD) ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ. ಜನ್ ಧನ್ ಖಾತೆದಾರರು ಹೇಗೆ ವಹಿವಾಟು ನಡೆಸುತ್ತಾರೆ ಎಂಬ ಆಧಾರದಲ್ಲಿ ಜನ್ ಧನ್ ಖಾತೆಯಲ್ಲಿನ ಬ್ಯಾಲೆನ್ಸ್ ದಿನದಿಂದ ದಿನಕ್ಕೆ ವ್ಯತ್ಯಾಸವಾಗಬಹುದು. ಒಂದು ನಿರ್ದಿಷ್ಟ ದಿನ ಖಾತೆಯ ಬ್ಯಾಲೆನ್ಸ್ ಶೂನ್ಯವಾಗೋ ಸಾಧ್ಯತೆಯೂ ಇರುತ್ತದೆ. 

ಎಚ್ ಡಿಎಫ್ ಸಿ-ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಜುಲೈಗೆ ಪೂರ್ಣ ನಿರೀಕ್ಷೆ; ಏನೆಲ್ಲ ಬದಲಾಗಲಿದೆ?

ಬ್ಯಾಂಕ್ ಖಾತೆಯನ್ನೇ ಹೊಂದಿರದ ಜನರು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ತೆರೆಯಲು ಜನ್ ಧನ್ ಯೋಜನೆ ಅವಕಾಶ ಒದಗಿಸಿತು. ಈ ಮೂಲಕ ಬ್ಯಾಂಕಿಂಗ್ ವ್ಯವಹಾರಗಳಿಂದ ದೂರವಿದ್ದ ಗ್ರಾಮೀಣ ಭಾಗದ ಜನರನ್ನು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿತು. ಇನ್ನು ಜನ್ ಧನ್ ಯೋಜನೆ ಜಾರಿಗಿಂತ ಮುನ್ನ ಸರ್ಕಾರಿ ಯೋಜನೆಗಳ ಸಹಾಯಧನ ಫಲಾನುಭವಿಗಳಿಗೆ ನೇರವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ದುರ್ಬಳಕೆ ಸಾಧ್ಯತೆ ಹೆಚ್ಚಿತ್ತು. ಆದರೆ, ಜನ್ ಧನ್ ಬಳಿಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿರುವ ಕಾರಣ ದುರ್ಬಳಕೆಯಾಗುವ ತೀರಾ ಕಡಿಮೆ.

OD ಸೌಲಭ್ಯ
ಜನ್ ಧನ್ ಖಾತೆಯಿಂದ ಓವರ್ ಡ್ರಾಫ್ಟ್ (OD) ಸೌಲಭ್ಯವನ್ನು ಕೂಡ ಪಡೆಯಬಹುದು. ನಿಮ್ಮ ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ (zero balance)ಇದ್ದರೂ ನೀವು 10 ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಸರ್ಕಾರ  ಅವಕಾಶ ಕಲ್ಪಿಸಿದೆ. 

 

Latest Videos
Follow Us:
Download App:
  • android
  • ios