ಈ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದು, ಎಟಿಎಂ ವಹಿವಾಟು ವಿಫಲವಾದ್ರೆ ಮೇ 1ರಿಂದ ಬೀಳುತ್ತೆ ದಂಡ!

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಮೇ 1ರಿಂದ ಎಟಿಎಂ ವಿತ್ ಡ್ರಾಗೆ ಸಂಬಂಧಿಸಿ ಹೊಸ ನಿಯಮ ಜಾರಿಗೊಳಿಸಲಿದೆ. ಬ್ಯಾಂಕ್ ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ಹಿನ್ನೆಲೆಯಲ್ಲಿ ಎಟಿಎಂ ವಿತ್ ಡ್ರಾ ವಿಫಲವಾದ್ರೆ ಗ್ರಾಹಕರಿಗೆ 10ರೂ. +ಜಿಎಸ್ ಟಿ ದಂಡ ವಿಧಿಸಲಿದೆ. 
 

Punjab National Bank to charge penalty for failed ATM transactions due to low balance starting this date anu

Business Desk:ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಗ್ರಾಹಕರಾಗಿದ್ದರೆ ಮೇ 1ರಿಂದ ಎಟಿಎಂ ಬಳಸುವ ಮುನ್ನ ಈ ಒಂದು ವಿಚಾರ ತಿಳಿದುಕೊಳ್ಳುವುದು ಅಗತ್ಯ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ಕಾರಣಕ್ಕೆ ಎಟಿಎಂ ವಹಿವಾಟುಗಳು ವಿಫಲವಾದರೆ 10ರೂ. +ಜಿಎಸ್ ಟಿ ದಂಡ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕ್ ಈ ಹೊಸ ನಿಯಮದ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಗ್ರಾಹಕರಿಗೆ ಈ ಶುಲ್ಕದ ಬಗ್ಗೆ ಮಾಹಿತಿ ನೀಡಲು ಎಸ್ ಎಂಎಸ್ ಅಲರ್ಟ್ ಕಳುಹಿಸಲು ಪ್ರಾರಂಭಿಸಿದೆ ಕೂಡ. ಹಾಗೆಯೇ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇದ್ದರೂ ಎಟಿಎಂ ವಹಿವಾಟು ವಿಫಲವಾದ್ರೆ ಅದನ್ನು ಪರಿಹರಿಸಲು ಪಿಎನ್ ಬಿ ಮಾರ್ಗಸೂಚಿಗಳನ್ನು ರೂಪಿಸಿದೆ. ಎಟಿಎಂ ವಹಿವಾಟು ವಿಫಲವಾಗಿರುವ ಬಗ್ಗೆ ಗ್ರಾಹಕರು ದೂರು ಸಲ್ಲಿಕೆ ಮಾಡಿದರೆ ಬ್ಯಾಂಕ್ ದೂರು ಸ್ವೀಕರಿಸಿದ ಏಳು ದಿನಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಿದೆ. ಒಂದು ವೇಳೆ ಬ್ಯಾಂಕ್ 30 ದಿನಗಳೊಳಗೆ ಸಮಸ್ಯೆ ಬಗೆಹರಿಸಲು ವಿಫಲವಾದ್ರೆ, ಗ್ರಾಹಕರು ಪ್ರತಿದಿನ 100ರೂ. ದರದಲ್ಲಿ ಪರಿಹಾರ ಪಡೆಯಲಿದ್ದಾರೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.

ಒಂದು ವೇಳೆ ಎಟಿಎಂ ವಹಿವಾಟು ವಿಫಲವಾದರೆ, ಪಿಎನ್ ಬಿ ಗ್ರಾಹಕರು 1800180222 ಹಾಗೂ 18001032222 ಟೋಲ್ ಫ್ರೀ ಸಂಖ್ಯೆ ಮೂಲಕ ಗ್ರಾಹಕ ಸಂಬಂಧ ಕೇಂದ್ರವನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬಹುದು. ಇದರೊಂದಿಗೆ ಬ್ಯಾಂಕ್ ಗ್ರಾಹಕ ಸಂತೃಪ್ತಿ ಸಮೀಕ್ಷೆ ನಡೆಸುತ್ತಿದ್ದು, ಗ್ರಾಹಕರು ಪಿಎನ್ ಬಿ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅದರಲ್ಲಿ ಭಾಗವಹಿಸಬಹುದು. ಬ್ಯಾಂಕ್ ಸೇವೆಗಳ ಕುರಿತ ಅವರ ಅನುಭವಗಳು ಹಾಗೂ ಅದರಿಂದ ಅವರು ಸಂತೃಪ್ತರಾಗಿದ್ದಾರೆಯೇ ಎಂಬ ಬಗ್ಗೆ ಗ್ರಾಹಕರು ಫೀಡ್ ಬ್ಯಾಕ್ ನೀಡಬಹುದು.

ಎಚ್ ಡಿಎಫ್ ಸಿ-ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಜುಲೈಗೆ ಪೂರ್ಣ ನಿರೀಕ್ಷೆ; ಏನೆಲ್ಲ ಬದಲಾಗಲಿದೆ?

ಪಿಎನ್ ಬಿ ಇತ್ತೀಚಿನ ಘೋಷಣೆಗಳು ಅನಿರೀಕ್ಷಿತ ಆಪಾದನೆಗಳನ್ನು ಎದುರಿಸುತ್ತಿರುವ ಕೆಲವು ಗ್ರಾಹಕರಿಗೆ ಬೇಸರ ಮೂಡಿಸಬಹುದು. ಆದರೆ, ಬ್ಯಾಂಕ್ ಗ್ರಾಹಕರಿಗೆ ಸಂತೃಪ್ತಿ ಒದಗಿಸಲು ಹಾಗೂ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸಲು ಒತ್ತು ನೀಡುತ್ತಿದೆ. ಗ್ರಾಹಕ ಸೇವೆ ಮೂಲಸೌಕರ್ಯ ಹಾಗೂ ಸಮೀಕ್ಷೆಗಳ ಮೂಲಕ ಫೀಡ್ ಬ್ಯಾಕ್ ಸಂಗ್ರಹಿಸುವ ಪ್ರಯತ್ನಗಳಲ್ಲಿ ಪಿಎನ್ ಬಿ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. 

ಪಿಎನ್ ಬಿ ಎಟಿಎಂ ವಿತ್ ಡ್ರಾ ಮಿತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್ ಬಿ (PNB) ಪ್ರಮುಖ ನಗರಗಳಲ್ಲಿ ತಿಂಗಳಿಗೆ 3 ಉಚಿತ ಎಟಿಎಂ ವಿತ್ ಡ್ರಾಗಳಿಗೆ ಅವಕಾಶ ಕಲ್ಪಿಸಿದೆ. ಇನ್ನು ಇತರ ಪ್ರದೇಶಗಳಲ್ಲಿ ಎಸ್ ಬಿಐ ಮಾದರಿಯಲ್ಲೇ ಎಟಿಎಂ 3 ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ. ಇದಾದ ಬಳಿಕ ಬ್ಯಾಂಕ್ ಎಟಿಎಂ ವಿತ್ ಡ್ರಾಗಳ ಮೇಲೆ  10ರೂ. ಶುಲ್ಕ ವಿಧಿಸಿದೆ. ಬ್ಯಾಂಕಿನ ನಿತ್ಯದ ವಹಿವಾಟು ಮಿತಿ ಕ್ಲಾಸಿಕ್ ಕಾರ್ಡ್ ಗಳ ಬಳಕೆದಾರರಿಗೆ 25,000ರೂ. ಹಾಗೂ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ಗಳನ್ನು ಹೊಂದಿರೋರಿಗೆ 50,000ರೂ.

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

ಎಟಿಎಂಗಳಲ್ಲಿ 2000ರೂ. ನೋಟು ಬರುತ್ತಿಲ್ಲ
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಟಿಎಂ ಮುಖಾಂತರ 2000ರೂ. ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ಮೇಲೆ ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಯನ್ನು ಲೋಕಸಭೆಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳನ್ನು ತುಂಬದಂತೆ ಬ್ಯಾಂಕುಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಟಿಎಂಗಳಲ್ಲಿ ಎಷ್ಟು ಮೊತ್ತ ಹಾಗೂ ಯಾವ ಮುಖಬೆಲೆಯ ನೋಟುಗಳ ಅಗತ್ಯವಿದೆ ಎಂಬುದನ್ನು ಬ್ಯಾಂಕ್ ಗಳೇ ನಿರ್ಧರಿಸುತ್ತವೆ. ಈ ಹಿಂದಿನ ಬಳಕೆ, ಗ್ರಾಹಕರ ಅಗತ್ಯ, ಆ ಸಮಯದ ಟ್ರೆಂಡ್ ಇತ್ಯಾದಿ ಅಂಶಗಳನ್ನು ಆಧರಿಸಿ ಬ್ಯಾಂಕ್ ಗಳು ಈ ನಿರ್ಣಯ ಕೈಗೊಳ್ಳುತ್ತವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios