ಎಚ್ ಡಿಎಫ್ ಸಿ-ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಜುಲೈಗೆ ಪೂರ್ಣ ನಿರೀಕ್ಷೆ; ಏನೆಲ್ಲ ಬದಲಾಗಲಿದೆ?

ಎಚ್ ಡಿಎಫ್ ಸಿ ಲಿ. ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಜುಲೈಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿಲೀನ ಪ್ರಕ್ರಿಯೆ 2022ರ ಏ.4ರಿಂದಲೇ ಪ್ರಾರಂಭವಾಗಿದೆ. ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಗೆ ಅನೇಕ ಉನ್ನತ ಹಣಕಾಸು ಸಂಸ್ಥೆಗಳು ಅನುಮೋದನೆ ಅಗತ್ಯವಾಗಿದ್ದು, ಪ್ರಸ್ತುತ ಇದೇ ಕಾರ್ಯವನ್ನು ಮಾಡಲಾಗುತ್ತಿದೆ. ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನವಾದ ಬಳಿಕ ಜಗತ್ತಿನ ಅತೀದೊಡ್ಡ ಬ್ಯಾಂಕುಗಳಲ್ಲಿ ಒಂದಾಗಲಿದೆ.
 

HDFC to complete its merger with HDFC Bank by July anu

ನವದೆಹಲಿ (ಏ.18): ಭಾರತದ ಅತೀದೊಡ್ಡ ಗೃಹ ಹಣಕಾಸು ಕಂಪನಿ ಎಚ್ ಡಿಎಫ್ ಸಿ ಲಿ. ದೇಶದ ಅತೀದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ವಿಲೀನಗೊಳ್ಳುತ್ತಿದೆ. ಈ ಪ್ರಕ್ರಿಯೆ 2022ರ ಏ.4ರಿಂದಲೇ ಪ್ರಾರಂಭವಾಗಿದ್ದು, ಇದೇ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಹಣಕಾಸು ಅಧಿಕಾರಿ ಶ್ರೀನಿವಾಸನ್ ವೈದ್ಯನಾಥನ್ ತಿಳಿಸಿದ್ದಾರೆ.  2023ನೇ ಸಾಲಿನ ಬ್ಯಾಂಕಿನ ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ವೈದ್ಯನಾಥನ್ ಈ ಮಾಹಿತಿ ನೀಡಿದ್ದಾರೆ. ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು 8-10 ತಿಂಗಳು ಬೇಕಾಗುತ್ತದೆ ಎಂದು ಎಚ್ ಡಿಎಫ್ ಸಿ ನವೆಂಬರ್ ಕೊನೆಯಲ್ಲಿ ಮಾಹಿತಿ ನೀಡಿತ್ತು. ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಗೆ ಅನೇಕ ಉನ್ನತ ಹಣಕಾಸು ಸಂಸ್ಥೆಗಳು ಅನುಮೋದನೆ ಅಗತ್ಯವಾಗಿದ್ದು, ಪ್ರಸ್ತುತ ಇದೇ ಕಾರ್ಯವನ್ನು ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಪೆನ್ಷನ್ ಫಂಡ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಡ್ ಅಥಾರಿಟಿ (ಪಿಎಫ್‌ಆರ್‌ಡಿಎ), ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಸ್ಪರ್ಧಾತ್ಪಕ ಆಯೋಗ, ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್), ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಈಗಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನಕ್ಕೆ ಅನುಮೋದನೆ ನೀಡಿವೆ.

'ನಮ್ಮ ಪ್ರಕಾರ ವಿಲೀನ ಪ್ರಕ್ರಿಯೆ ಜೂನ್ ಅಥವಾ ಜುಲೈನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿವಿಧ ವಿಚಾರಗಳನ್ನು ಪರಿಗಣಿಸಿ ನಾವು ಅಷ್ಟೇ ಸಮಯ ಮಿತಿಯನ್ನು ನಿಗದಿಪಡಿಸಿಕೊಂಡಿದ್ದೇವೆ' ಎಂದು ವೈದ್ಯನಾಥನ್ ತಿಳಿಸಿದ್ದಾರೆ. 

ಈ ವಿಲೀನ ಪ್ರಕ್ರಿಯೆಯು ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಷನ್  (HDFC) ಅಂಗಸಂಸ್ಥೆಗಳಾದ ಎಚ್ ಡಿಎಫ್ ಸಿ ಹೂಡಿಕೆಗಳು ಹಾಗೂ ಎಚ್ ಡಿಎಫ್ ಸಿ ಹೋಲ್ಡಿಂಗ್ಸ್  ಸಂಸ್ಥೆಗಳನ್ನು ಎಚ್ ಡಿಎಫ್ ಸಿಯೊಂದಿಗೆ ಹಾಗೂ ಎಚ್ ಡಿಎಫ್ ಸಿಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ನೊಂದಿಗೆ ವಿಲೀನಗೊಳಿಸೋದನ್ನು ಒಳಗೊಂಡಿದೆ. ಎಚ್ ಡಿಎಫ್ ಸಿ ಮಾತೃಸಂಸ್ಥೆ ಬ್ಯಾಂಕ್ ಜೊತೆಗೆ ವಿಲೀನವಾಗಲಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಏಪ್ರಿಲ್ 4ರಂದು ಘೋಷಿಸಿತ್ತು. ತಡೆರಹಿತವಾಗಿ ಗೃಹಸಾಲಗಳನ್ನು ಒದಗಿಸಲು ಹಾಗೂ ಎಚ್ ಡಿಎಫ್ ಸಿ ಬ್ಯಾಂಕಿನ 68 ಮಿಲಿಯನ್ ಗ್ರಾಹಕರ ವ್ಯವಹಾರಗಳ ನಿಯಂತ್ರಣಕ್ಕೆ ಈ ವಿಲೀನ ಮಾಡಲಾಗುತ್ತಿದೆ ಎಂದು ಕೂಡ ಅದು ತಿಳಿಸಿತ್ತು. 

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನವಾದ ಬಳಿಕ ಜಗತ್ತಿನ ಅತೀದೊಡ್ಡ ಬ್ಯಾಂಕುಗಳಲ್ಲಿ ಒಂದಾಗಲಿದೆ. ಈ ಒಪ್ಪಂದವು 4.53ಲಕ್ಷ ಕೋಟಿ ರೂ. ಮೌಲ್ಯದಾಗಿದೆ. ಇದು ಈ ವರ್ಷದ ಎರಡನೇ ಅತೀದೊಡ್ಡ ವ್ಯವಹಾರ ಒಪ್ಪಂದವಾಗಿದೆ. ಈ ಒಪ್ಪಂದ ಪೂರ್ಣಗೊಂಡ ಬಳಿಕ ಅಂದ್ರೆ ವಿಲೀನ ಪ್ರಕ್ರಿಯೆ ನಂತರ ಬ್ಯಾಂಕಿನ ಮಾರ್ಕೆಟ್ ಕ್ಯಾಪ್ 15.12 ಲಕ್ಷ ಕೋಟಿ ರೂ. ತಲುಪಲಿದೆ. 

7th Pay Commission:ಈ ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ

ವಿಲೀನದ ಬಳಿಕ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಶೇ.100ರಷ್ಟು ಸಾರ್ವಜನಿಕ ಷೇರುದಾರರ ಸ್ವಾಮ್ಯದ ಬ್ಯಾಂಕ್ ಆಗಲಿದೆ. ಪ್ರಸ್ತುತ ಇರುವ ಎಚ್ ಡಿಎಫ್ ಸಿ ಷೇರುದಾರರು ಎಚ್ ಡಿ ಎಫ್ ಸಿ ಬ್ಯಾಂಕಿನ ಶೇ.41ರಷ್ಟು ಷೇರುಗಳನ್ನು ಹೊಂದಲಿದ್ದಾರೆ. ಇನ್ನು ಎಚ್ ಡಿ ಎಫ್ ಸಿ ಅಂಗಸಂಸ್ಥೆಗಳು ಹಾಗೂ ಸಹವರ್ತಿ ಸಂಸ್ಥೆಗಳು ಎಚ್ ಡಿಎಫ್ ಸಿ ಬ್ಯಾಂಕಿಗೆ ವರ್ಗವಾಗಲಿವೆ. ಇದರರ್ಥ ಎಚ್ ಡಿಎಫ್ ಸಿಯು ಎಚ್ ಡಿಎಫ್ ಸಿ ಬ್ಯಾಂಕಿನ ಶೇ. 41ರಷ್ಟು ಷೇರುಗಳನ್ನು ಪರಿವರ್ತನೆಯ ವಿಲೀನದ ಮೂಲಕ ಸ್ವಾಧೀನಪಡಿಸಿಕೊಳ್ಳಲಿದೆ. ಎಚ್ ಡಿಎಫ್ ಸಿ ಷೇರುದಾರರು ಹೊಂದಿರುವ ಪ್ರತಿ 25 ಷೇರುಗಳಿಗೆ ಬ್ಯಾಂಕಿನ 42  ಷೇರುಗಳು ಸಿಗಲಿವೆ. ಈ ವಿಲೀನ 12.8ಲಕ್ಷ ಕೋಟಿ ರೂ. ಮಾರ್ಕೆಟ್ ಕ್ಯಾಪಿಟಲ್ ಹಾಗೂ 17.9ಲಕ್ಷ ಕೋಟಿ ರೂ. ಬ್ಯಾಲೆನ್ಸ್ ಶೀಟ್ ಸೃಷ್ಟಿಸಲಿವೆ.

Latest Videos
Follow Us:
Download App:
  • android
  • ios