Asianet Suvarna News Asianet Suvarna News

ಸೆಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್ ರಜೆ, ವಹಿವಾಟು ನಡೆಸುವ ಮುನ್ನ ದಿನಾಂಕ ಗಮನದಲ್ಲಿಡಿ!

  • ಸೆಪ್ಬೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನ ವಿವರ ಪ್ರಕಟ
  • 12 ದಿನ ಬ್ಯಾಂಕ್ ರಜೆ, ಬ್ಯಾಂಕ್‌ಗೆ ತೆರಳುವ ಮುನ್ನ ದಿನಾಂಕ ನೋಡಿ
  • ವಾರದ ರಜೆ, ಗಣೇಶ ಚತುರ್ಥಿ ಸೇರಿ ಸಾಲು ಸಾಲು ರಜೆ
Reserve Bank of India calendar 12 holidays for banks in September ckm
Author
Bengaluru, First Published Aug 26, 2021, 5:38 PM IST

ನವದೆಹಲಿ(ಆ.26): ದೇಶ ಡಿಜಿಟಲೀಕರಣಗೊಂಡ ಬಳಿಕ ಬಹುತೇಕ ಬ್ಯಾಂಕ್ ವ್ಯವಾಹರಗಳು ಆನ್‌‌ಲೈನ್ ಮೂಲಕವೇ ನಡೆಯುತ್ತಿದೆ. ಆದರೆ ಕೆಲ ವಹಿವಾಟುಗಳಿಗೆ ಬ್ಯಾಂಕ್ ಕಚೇರಿಗೆ ತೆರಳಲೇ ಬೇಕು. ಹೀಗೆ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ತೆರಳಿ ತಮ್ಮ ವಹಿವಾಟು ನಡೆಸಲು ನಿರ್ಧರಿಸಿರುವವರು ರಜಾ ದಿನಗಳನ್ನು ಪರಿಶೀಲಿಸುವುದು ಒಳಿತು.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ((RBI) ಕ್ಯಾಲೆಂಡರ್‌ನಲ್ಲಿ ಭಾರತದ ಬ್ಯಾಂಕ್ ರಜಾ ದಿನ ಉಲ್ಲೇಖಿಸಿದೆ. ಈ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನದ ಸಂಖ್ಯೆ 12. ಆದರೆ ಈ ಎಲ್ಲಾ ರಜೆಗಳು ಎಲ್ಲಾ ರಾಜ್ಯದಲ್ಲಿ ಅನ್ವಯವಾಗುವುದಿಲ್ಲ. ಹೀಗಾಗಿ ಬ್ಯಾಂಕ್ ವಹಿವಾಟು ನಡೆಸುವವರು ದಿನಾಂಕ ಗಮನದಲ್ಲಿಡುವುದು ಅತ್ಯವಶ್ಯಕವಾಗಿದೆ.

ಹೊಸ ಕ್ರೆಡಿಟ್‌ ಕಾರ್ಡ್‌: HDFC ಮೇಲಿನ 8 ತಿಂಗಳ ನಿಷೇಧ ತೆರವು!

ವಾರದ ರಜೆ ಹೊರತು ಪಡಿಸಿದರೆ ಗಣೇಶ ಹಬ್ಬ ಸೇರಿದಂತೆ ಹಬ್ಬಗಳಿಂದ ಒಟ್ಟು 12 ದಿನ ಬ್ಯಾಂಕ್‌ಗೆ ರಜೆ. ಈ ರಜೆಗಳು ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಹಾಲಿಡೇ ಮತ್ತು ಬ್ಯಾಂಕುಗಳ ಅಕೌಂಟ್ಸ್ ಕ್ಲೋಸಿಂಗ್ ಹಾಲಿಡೆ ನಿಬಂಧನಗಳಿಗೆ ಒಳಪಟ್ಟಿದೆ.

ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ದಿನದ ವಿವರ:
ಸೆಪ್ಟೆಂಬರ್ 8: ಶ್ರೀಮಂತ ಶಂಕರದೇವ ತಿಥಿ 
ಸೆಪ್ಟೆಂಬರ್ 9: ತೀಜ್ (ಹರಿತಲಿತಾ),
ಸೆಪ್ಟೆಂಬರ್ 10: ಗಣೇಶ ಚತುರ್ಥಿ
ಸೆಪ್ಟೆಂಬರ್ 11: ಗಣೇಶ ಚತುರ್ಥಿ (2ನೇ ದಿನ)
ಸೆಪ್ಟೆಂಬರ್ 17: ಕರ್ಮಾ ಪೂಜಾ 
ಸೆಪ್ಟೆಂಬರ್ 20: ಇಂದ್ರಜಾತ್ರ
ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನ

ಆರ್‌ಬಿಐ ಮಹತ್ವದ ನಿರ್ಧಾರ: ಬ್ಯಾಂಕ್‌ ಗ್ರಾಹಕರಿಗೆ ಕಹಿ ಸುದ್ದಿ!

ಈ ರಜಾದಿನಗಳನ್ನು ಹೊರತು ಪಡಿಸಿ ವಾರದ ರಜೆ, 2ನೇ ಶನಿವಾರ ಹಾಗೂ 4ನೇ ಶನಿವಾರ ರಜಾ ದಿನ ಸೇರಿದರೆ ಒಟ್ಟು 12 ದಿನ ಬ್ಯಾಂಕ್‌ಗೆ ರಜೆ ಇದೆ. ಈ  ರಜೆಗಳು ಕೆಲ ರಾಜ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ.

Follow Us:
Download App:
  • android
  • ios