ಆರ್‌ಬಿಐ ಮಹತ್ವದ ನಿರ್ಧಾರ: ಬ್ಯಾಂಕ್‌ ಗ್ರಾಹಕರಿಗೆ ಕಹಿ ಸುದ್ದಿ!

* ಈ ವರ್ಷ ಜಿಡಿಪಿ ಶೆ.9.5ಕ್ಕೆ ಏರಿಕೆ: ವಿತ್ತ ನೀತಿ

* ಬ್ಯಾಂಕುಗಳ ಬಡ್ಡಿ ದರ ಇನ್ನೂ 2 ತಿಂಗಳು ಏರಲ್ಲ

* ಯಥಾಸ್ಥಿತಿ ಕಾಯ್ದುಕೊಂಡ ರಿಸರ್ವ್‌ ಬ್ಯಾಂಕ್‌

RBI holds rates steady inflation forecast now close to 6pc limit pod

ಮುಂಬೈ(ಆ.07): ಕೋವಿಡ್‌ನಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಬಡ್ಡಿ ದರಗಳನ್ನು ಪರಿಷ್ಕರಿಸದೆ ಇರಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ಧರಿಸಿದೆ. ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ್ದು, ಐತಿಹಾಸಿಕ ಕನಿಷ್ಠ ಮಟ್ಟದಲ್ಲಿರುವ ಬಡ್ಡಿ ದರಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಪ್ರಕಟಿಸಿದೆ.

ಮತ್ತೊಂದೆಡೆ, ಕೋವಿಡ್‌ ಬಳಿಕ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದ ಮಾಚ್‌ರ್‍ ಅಂತ್ಯದ ವೇಳೆಗೆ ದೇಶದ ಜಿಡಿಪಿ ದರ ಶೇ.9.5ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.

ರಿಸವ್‌ರ್‍ ಬ್ಯಾಂಕ್‌ ಕೊನೆಯ ಬಾರಿಗೆ ಬಡ್ಡಿ ದರ ಪರಿಷ್ಕರಣೆ ಮಾಡಿದ್ದು 2020ರ ಮೇ 22ರಂದು. ಅದಾದ ಬಳಿಕ 7 ದ್ವೈಮಾಸಿಕ ವಿತ್ತ ನೀತಿಗಳು ಪ್ರಕಟವಾಗಿವೆಯಾದರೂ ಬಡ್ಡಿ ದರದ ತಂಟೆಗೇ ಹೋಗಿಲ್ಲ. ಆರು ಮಂದಿಯ ಹಣಕಾಸು ನೀತಿ ಸಮಿತಿಯ ಪೈಕಿ ಐವರು ಈಗಿರುವ ಬಡ್ಡಿ ದರವನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರೆ, ಒಬ್ಬರು ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಮುಂದಿನ ಹಣಕಾಸು ನೀತಿ ಸಭೆ ಅ.6ರಿಂದ 8ರವರೆಗೆ ನಡೆಯಲಿದೆ. ಅಲ್ಲಿವರೆಗೂ ಬಡ್ಡಿ ದರ ಯಥಾಸ್ಥಿತಿಯಲ್ಲೇ ಇರಲಿದೆ.

ನೀತಿಯಲ್ಲೇನಿದೆ?

- ರೆಪೋ ದರ ಶೇ.4ರ ದರದಲ್ಲೇ ಮುಂದುವರಿಕೆ

- ರಿವರ್ಸ್‌ ರೆಪೋ ದರ ಶೇ.3.35 ಇದ್ದು ಬದಲಾವಣೆ ಇಲ್ಲ

- ಚಿಲ್ಲರೆ ಹಣದುಬ್ಬರ ಶೇ.5.7 ಇದ್ದು, ಶೇ.5.1ಕ್ಕೆ ಇಳಿವ ಸಂಭವ

- ಈ ವರ್ಷ ಜಿಡಿಪಿ ದರ ಶೇ.9.5ಕ್ಕೆ ಏರುವ ನಿರೀಕ್ಷೆ

Latest Videos
Follow Us:
Download App:
  • android
  • ios