* ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ HDFCಗೆ ನಿಷೇಧ* ಹೇರಿದ್ದ ನಿರ್ಬಂಧ  8 ತಿಂಗಳ ಬಳಿಕ ಆರ್‌ಬಿಐ * ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ

ನವದೆಹಲಿ(ಆ.18): ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು 8 ತಿಂಗಳಗಳ ಬಳಿಕ ಆರ್‌ಬಿಐ ತೆರವು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ. ಡಿಜಿಟಲ್‌ ಪಾವತಿ ಸೇವೆಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಆರ್‌ಬಿಐ ಈ ನಿರ್ಬಂಧ ಹೇರಿತ್ತು.

ಆದಾಗ್ಯೂ, ಡಿಜಿಟಲ್‌ ವೇದಿಕೆ ಮುಖಾಂತರ ಸಾಲಗಾರರಿಗೆ ನೀಡಲಾಗುವ ನೂತನ ಯೋಜನೆಗಳ ಮೇಲಿನ ತಾತ್ಕಾಲಿಕ ನಿಷೇಧವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.