10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!

Multibagger Stock Hunter ಕಳೆದ 10 ವರ್ಷಗಳಲ್ಲಿ ಫೇಝ್‌ ತ್ರೀ ಷೇರುಗಳು ಹೂಡಿಕೆದಾರರಿಗೆ ಭಾರಿ ಲಾಭವನ್ನು ನೀಡಿವೆ. ಒಂದು ದಶಕದಲ್ಲಿ ಈ ಷೇರುಗಳ ಮೌಲ್ಯ ಸುಮಾರು 5,700% ಏರಿಕೆಯಾಗಿದೆ.

this ashish kacholia owned smallcap turns rs 10 000 to nearly rs 6 lakh in just 10 years ash

ನವದೆಹಲಿ (ಜೂನ್ 25, 2023): ಹಣ ಮಾಡಲು ನಾನಾ ಮಾರ್ಗಗಳಿರುತ್ತದೆ. ಈ ಪೈಕಿ ಷೇರು ಮಾರುಕಟ್ಟೆಯೂ ಒಂದು. ಕೆಲವು ಸಣ್ಣ ಸಣ್ಣ ಕಂಪನಿಗಳೂ ಸಹ ಹೆಚ್ಚು ಲಾಭ ತಂದುಕೊಡಬಹುದು. ಈ ಪೈಕಿ, ಈ ಆಶಿಶ್ ಕಚೋಲಿಯಾ ಒಡೆತನದ ಸ್ಮಾಲ್‌ ಕ್ಯಾಪ್‌ ಷೇರಿನ ಮೌಲ್ಯ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಕೇವಲ 10 ವರ್ಷಗಳಲ್ಲಿ ಷೇರಿನ ಮೌಲ್ಯ 10 ಸಾವಿರ ರೂ. ನಿಂದ ಸುಮಾರು 6 ಲಕ್ಷ ರೂ. ಆಗಿದೆ. ಈ ಷೇರು ಯಾವುದು ಅಂತೀರಾ.. ಮುಂದೆ ಓದಿ..

ಕಳೆದ 10 ವರ್ಷಗಳಲ್ಲಿ ಫೇಝ್‌ ತ್ರೀ  (Faze Three) ಷೇರುಗಳು ಹೂಡಿಕೆದಾರರಿಗೆ ಭಾರಿ ಲಾಭವನ್ನು ನೀಡಿವೆ. ಒಂದು ದಶಕದಲ್ಲಿ ಈ ಷೇರುಗಳ ಮೌಲ್ಯ ಸುಮಾರು 5,700% ಏರಿಕೆಯಾಗಿದೆ. ಅದರಂತೆ, ಹೂಡಿಕೆದಾರರು 10 ವರ್ಷಗಳ ಹಿಂದೆ ಈ ಷೇರಿನಲ್ಲಿ 10,000 ರೂ.ಗಳನ್ನು ಹೂಡಿಕೆ ಮಾಡಿದ್ದರೆ ಮತ್ತು ಆ ಷೇರು ನಿಮ್ಮ ಬಳಿ ಹಾಗೇ ಇದ್ದರೆ, ಈಗ ಈ ಹೂಡಿಕೆಯ ಮೌಲ್ಯ ಸುಮಾರು 6 ಲಕ್ಷ ರೂ. ಆಗುತ್ತಿತ್ತು. ಕಳೆದ 3 ವರ್ಷಗಳಲ್ಲಿ, ಈ ಷೇರಿನ ಮೌಲ್ಯ 1,103% ಏರಿಕೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ 302% ನಷ್ಟು ಆದಾಯ ನೀಡಿದೆ.

ಇದನ್ನು ಓದಿ: ನೀವು ಈ ಸ್ಟಾಕ್‌ನಲ್ಲಿ 10 ವರ್ಷದ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 10 ಲಕ್ಷ ರೂ. ಇರ್ತಿತ್ತು!

933 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಫೇಝ್‌ ತ್ರೀ, ಮನೆಯ ಒಳಾಂಗಣ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ರಫ್ತು ಮಾಡುತ್ತದೆ. ಕಂಪನಿಯ ಉತ್ಪನ್ನಗಳಲ್ಲಿ ವ್ಯಾಪಕ ಶ್ರೇಣಿಯ ಬೆಡ್‌ಸ್ಪ್ರೆಡ್‌, ಅಲಂಕಾರಿಕ ಕುಶನ್‌, ಟೇಬಲ್‌ಟಾಪ್‌, ರಗ್‌, ಬಾತ್‌ಮ್ಯಾಟ್‌ಗಳು ಮತ್ತು ಟಫ್ಟೆಡ್ ಕಾರ್ಪೆಟ್‌ ಸೇರಿವೆ. ಈ ಕಂಪನಿಯ 56.16% ಪಾಲನ್ನು ಬಹುಪಾಲು ಪ್ರೊಮೋಟರ್‌ಗಳು ಹೊಂದಿದ್ದು, ಮತ್ತು ಉಳಿದ 43.84% ಪಾಲನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ.

ಇದು ಹನ್ನೆರಡು ತಿಂಗಳ (ಟಿಟಿಎಂ) ಆಧಾರದ ಮೇಲೆ 23.62 ಇಪಿಎಸ್ ಅನ್ನು ಹೊಂದಿದೆ ಮತ್ತು ಈ ಸ್ಟಾಕ್ ಪ್ರಸ್ತುತ 16.25 ರ ಪಿಇನಲ್ಲಿ ವಹಿವಾಟು ನಡೆಸುತ್ತಿದೆ. ಮೇ ತಿಂಗಳಲ್ಲಿ ದೇಶೀಯ ಫಂಡ್ ಹೌಸ್‌ಗಳ ಟಾಪ್ ಪಿಕ್‌ಗಳಲ್ಲಿ ಫೇಝ್‌ ತ್ರೀ ಸೇರಿದೆ. ಪ್ರಮುಖ ಹೂಡಿಕೆದಾರ ಆಶಿಶ್ ಕಚೋಯಿಲಾ ಅವರು ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯಲ್ಲಿ ಸುಮಾರು 5.23% ಪಾಲನ್ನು ಹೊಂದಿದ್ದಾರೆ.

ಇದನ್ನೂ ಓದಿ: 10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!

ಇನ್ನು, ಕಂಪನಿಯ ಸೇಲ್ಸ್‌ ಆರ್ಥಿಕ ವರ್ಷ 2013 ರಲ್ಲಿ ಕೇವಲ 114 ಕೋಟಿ ರೂ.ಗಳಿಂದ ಆರ್ಥಿಕ ವರ್ಷ 2023 ರಲ್ಲಿ 558 ಕೋಟಿ ರೂ. ಮೌಲ್ಯಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ತೆರಿಗೆಯ ನಂತರದ ಲಾಭ (PAT) ಕೂಡ ಅದೇ ಅವಧಿಯಲ್ಲಿ ಕೇವಲ 4.17 ಕೋಟಿ ರೂ.ಗಳಿಂದ ಸುಮಾರು 58 ಕೋಟಿ ರೂ. ಗೆ ಹೆಚ್ಚಳವಾಗಿದೆ. ಆದರೂ, ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ, ಒಟ್ಟು ಆದಾಯವು 8% ರಷ್ಟು ಕುಸಿದಿದೆ.

ತಾಂತ್ರಿಕವಾಗಿ, ಕಳೆದ ಕೆಲವು ತಿಂಗಳುಗಳಲ್ಲಿ ಈ ಕಂಪನಿಯ ಸ್ಟಾಕ್ ಸ್ಥಿರವಾದ ಮೇಲ್ಮುಖ ಪ್ರವೃತ್ತಿಯನ್ನು ಕಂಡಿದೆ.

ಇದನ್ನೂ ಓದಿ: 10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!

Latest Videos
Follow Us:
Download App:
  • android
  • ios