Asianet Suvarna News Asianet Suvarna News

Recurring Deposit:ಆರ್ ಡಿ ಖಾತೆ ಎಲ್ಲಿ ತೆರೆಯುವುದು ಬೆಸ್ಟ್ ? ಎಸ್ ಬಿಐ ಅಥವಾ ಅಂಚೆ ಕಚೇರಿ?

ಹೂಡಿಕೆಗಿರುವ ಉತ್ತಮ ಆಯ್ಕೆಗಳಲ್ಲಿ ಆರ್ ಡಿ ಕೂಡ ಒಂದು.ಆದ್ರೆ ಬಹುತೇಕರಿಗೆ ಅಂಚೆ ಕಚೇರಿ, ಎಸ್ ಬಿಐ ಇವೆರಡರಲ್ಲಿ ಎಲ್ಲಿ ಆರ್ ಡಿ ಖಾತೆ ತೆರೆದ್ರೆ ಉತ್ತಮ ಎಂಬ ಗೊಂದಲ ಕಾಡುತ್ತಲೇ ಇರುತ್ತದೆ. ಅಂಚೆ ಕಚೇರಿ ಹಾಗೂ ಎಸ್ ಬಿಐ ಆರ್ ಡಿ ಖಾತೆಗಳ ನಡುವಿನ ವ್ಯತ್ಯಾಸ ಏನು? 

Recurring Deposit Post office RD vs SBI RD which one is good
Author
First Published Sep 11, 2022, 6:03 PM IST

Business Desk: ಭವಿಷ್ಯಕ್ಕೆ ಒಂದಿಷ್ಟು ಹೂಡಿಕೆ ಮಾಡೋ ಯೋಚನೆ ಎಲ್ಲರಿಗೂ ಇರುತ್ತದೆ. ಆದರೆ, ಎಲ್ಲಿ ಹೂಡಿಕೆ ಮಾಡೋದು? ಯಾವ ಯೋಜನೆಯಲ್ಲಿ ಮಾಡೋದು ಎಂಬ ಗೊಂದಲ ಇದ್ದೇಇರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರು ಹೂಡಿಕೆಗೆ ಹೆಚ್ಚು ಸುರಕ್ಷಿತವಾದ ಮಾಧ್ಯಮವನ್ನೇ ಆಯ್ದುಕೊಳ್ಳುವ ಕಾರಣ ಅಂಚೆ ಕಚೇರಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ (ಎಸ್ ಬಿಐ) ಲಭ್ಯವಿರುವ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಮಧ್ಯಮ ವರ್ಗದ ಜನರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ರಿಕರಿಂಗ್ ಡೆಫಾಸಿಟ್ ನಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ ಸಿಗುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷತೆಯೆಂದ್ರೆ ಕನಿಷ್ಠ 100 ರೂ. ನಿಂದ ಹೂಡಿಕೆ ಪ್ರಾರಂಭಿಸಬಹುದು. ಹಾಗೆಯೇ ಗರಿಷ್ಠ ಇಷ್ಟೇ ಹೂಡಿಕೆ ಮಾಡಬೇಕೆಂಬ ನಿರ್ಬಂಧವಿಲ್ಲ. ಆರ್ ಡಿ ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ಮೊತ್ತವನ್ನು ಸಂಚಿತ ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ. ಅಂಚೆ ಕಚೇರಿ ಹಾಗೂ ಎಸ್ ಬಿಐ ಎರಡರಲ್ಲೂ ಆರ್ ಡಿ ಖಾತೆ ಲಭ್ಯವಿದೆ. ಇವೆರಡೂ ಕೂಡ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿರುವ ಕಾರಣ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಆದರೂ ಇವೆರಡಲ್ಲಿ ಹೆಚ್ಚಿನ ಬಡ್ಡಿದರ ಎಲ್ಲಿ ಸಿಗುತ್ತದೆ? ಯಾವುದು ಬೆಸ್ಟ್?

ಅಂಚೆ ಕಚೇರಿ ಆರ್ ಡಿ
ಅಂಚೆ ಕಚೇರಿ ಆರ್ ಡಿಯಲ್ಲಿ ಹೂಡಿಕೆ (Inestment) ಮಾಡಿದ ಹಣಕ್ಕೆ ಶೇ. 5.8 ಬಡ್ಡಿ (Interest) ನೀಡಲಾಗುತ್ತದೆ.  ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೆ ನಿಗದಿಪಡಿಸುತ್ತದೆ. ಅಂಚೆ ಕಚೇರಿಯಲ್ಲಿ (Post office) ಆರ್ ಡಿ ಖಾತೆ ತೆರೆದ ಮೇಲೆ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಬೇಕು. ಒಂದು ವೇಳೆ ನೀವು ಒಂದು ತಿಂಗಳ ಪಾವತಿಯನ್ನು ಮಿಸ್ ಮಾಡಿದ್ರೆ ಆಗ ಪ್ರತಿ ತಿಂಗಳು ಶೇ.1ರಷ್ಟು ಹೆಚ್ಚುವರಿ ಮೊತ್ತವನ್ನು ದಂಡವಾಗಿ (Fine) ಪಾವತಿಸಬೇಕು. ಒಂದು ವೇಳೆ ನೀವು ನಿರಂತರ 4 ತಿಂಗಳ ಪಾವತಿ ಕಂತುಗಳನ್ನು ಮಿಸ್ ಮಾಡಿದ್ರೆ ನಿಮ್ಮ ಆರ್ ಡಿ ಖಾತೆ ಮುಚ್ಚಲ್ಪಡುತ್ತದೆ. ಇಲ್ಲೂ ಕೂಡ ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು 2 ತಿಂಗಳ ಕಾಲಾವಕಾಶವಿರುತ್ತದೆ. ಆದ್ರೆ ಈ ಸಮಯಾವಕಾಶದಲ್ಲೂ ಸುಮ್ಮನಿದ್ರೆ ಆರ್ ಡಿ ಖಾತೆ ಕಾಯಂ ಆಗಿ ಮುಚ್ಚಲ್ಪಡುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷ ಏನಂದ್ರೆ ಖಾತೆ (account) ತೆರೆದ ಒಂದು ವರ್ಷದ ಬಳಿಕ ಅದರಲ್ಲಿರೋ ಒಟ್ಟು ಹಣದ ಶೇ.50ರಷ್ಟನ್ನು ವಿತ್ ಡ್ರಾ (Withdraw) ಮಾಡಲು ಖಾತೆದಾರನಿಗೆ (accountholder) ಅವಕಾಶ ನೀಡಲಾಗಿದೆ. 

ಭಾರತದ ಸಾಧನೆ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿರಿ: ನಿರ್ಮಲಾ ಸೀತಾರಾಮನ್

ಎಸ್ ಬಿಐ ಆರ್ ಡಿ
ಎಸ್ ಬಿಐಯಲ್ಲಿ ಗ್ರಾಹಕರ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಒಂದರಿಂದ 10 ವರ್ಷಗಳ ಅವಧಿಯ ಆರ್ ಡಿ ಖಾತೆ ತೆರೆಯಬಹುದು. ಎರಡು ಕೋಟಿ ರೂ.ಗಿಂತ ಕಡಿಮೆ ಮೊತ್ತದ ಬ್ಯಾಂಕ್ ಠೇವಣಿಗೆ ಶೇ.5ರಿಂದ ಶೇ.5.40ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಈ ಸಾಮಾನ್ಯ ಬಡ್ಡಿದರದ ಮೇಲೆ 0.50% ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ. ಇನ್ನು ಆರ್ ಡಿ ಖಾತೆ ಮೇಲೆ ಶೇ.90ರಷ್ಟು ಸಾಲ ಪಡೆಯುವ ಅವಕಾಶವನ್ನು ಕೂಡ ಎಸ್ ಬಿಐ ನೀಡುತ್ತದೆ. ಇನ್ನು ಆರ್ ಡಿ ಖಾತೆಯಲ್ಲಿನ ಹಣದ ಮೇಲೆ ಟಿಡಿಎಸ್ ಕಡಿತಕ್ಕೆ ಕೂಡ ಅವಕಾಶವಿದೆ. ಬ್ಯಾಂಕ್ ಖಾತೆಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಕೂಡ ಆರ್ ಡಿ ಖಾತೆ ತೆರೆಯಬಹುದು. 

Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..

ಅವಧಿಗೂ ಮುನ್ನ ಖಾತೆ ಕ್ಲೋಸ್ ಮಾಡಬಹುದಾ?
ಆರ್ ಡಿ ಖಾತೆಯಲ್ಲಿ ನಿರಂತರ ಠೇವಣಿಯಿಡುತ್ತ ಬಂದಿದ್ದರೆ, ಮೂರು ವರ್ಷಗಳ ಬಳಿಕ ಅವಧಿಗೂ ಮುನ್ನ ಈ ಖಾತೆಯನ್ನು ಕ್ಲೋಸ್ ಮಾಡಬಹುದು. ಹಾಗೆಯೇ ಈ ಖಾತೆಯನ್ನು ನೀವು ಬಯಸಿದರೆ ಮತ್ತೆ 5 ವರ್ಷಗಳ ಅವಧಿಗೆ ವಿಸ್ತರಿಸುವ ಅವಕಾಶವೂ ಇದೆ. 

Follow Us:
Download App:
  • android
  • ios