ಲಂಡನ್‌ನ ಪ್ರತಿಷ್ಠಿತ ಸೆಂಟ್ರಲ್ ಬ್ಯಾಕಿಂಗ್ ಪ್ರಶಸ್ತಿ ಪ್ರಕಟಗೊಂಡಿದೆ. ಆರ್‌ಸಿಬಿ ಗವರ್ನರ್ ಶಕ್ತಿಕಾಂತ್ ದಾಸ್‌ 2023ನೇ ಸಾಲಿನ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಂಡನ್(ಜೂ.14) ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಗರಿ. ಹೌದು, ಇಡೀ ವಿಶ್ವವೇ ಆರ್ಥಿಕ ಹಿಂಜರಿತ, ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ, ಕೋವಿಡ್ ಪರಿಣಾಮ ಸೇರಿದಂತೆ ಹಲವು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿರುವ ಭಾರತ ಆರ್ಥಿಕತೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯತ್ತ ಸಾಗಿತ್ತು. ಹಣದುಬ್ಬರ ನಿಯಂತ್ರಣದಲ್ಲಿತ್ತು. ಬ್ಯಾಂಕಿಂಗ್ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು. ಇದರ ಹಿಂದಿನ ರೂವಾರಿ ಆರ್‌ಸಿಬಿ ಗವರ್ನರ್ ಶಕ್ತಿಕಾಂತ್ ದಾಸ್. ಇದೀಗ ಶಕ್ತಿಕಾಂತ್ ದಾಸ್ ಸಾಧನೆಯನ್ನು ಲಂಡನ್‌ನ ಅಂತಾರಾಷ್ಟ್ರೀಯ ಎಕಾನಾಮಿಕ್ ರಿಸರ್ಚ್ ಜರ್ನಲ್ ಪರಿಗಣಿಸಿ 2023ನೇ ಸಾಲಿನ ಸೆಂಟ್ರಲ್ ಬ್ಯಾಕಿಂಗ್‌ನ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದೆ.

2019ರ ಬಳಿಕ ಭಾರತ ಸೇರಿದಂತೆ ವಿಶ್ವವೇ ಹಲವು ಜಾಗತಿಕ ಸಮಸ್ಯೆಗಳನ್ನು ಎದುರಿಸಿತ್ತು. ಅದರಲ್ಲೂ ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಳೇ ಹಳ್ಳ ಹಿಡಿದಿತ್ತು. ಆರ್ಥಿಕತೆ ಕುಸಿದಿತ್ತು. ದೇಶದ ಪ್ರಗತಿ ಕುಂಠಿತವಾಗಿತ್ತು. ಆರ್ಥಿಕ ಹಿಂಜರಿತ ಆತಂಕ ಆರಂಭಗೊಂಡಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಶಕ್ತಿಕಾಂತ್ ದಾಸ್ ಸಮರ್ಥವಾಗಿ ನಿಭಾಯಿಸಿದ್ದರು. ಹೀಗಾಗಿ ಶಕ್ತಿಕಾಂತ್ ದಾಸ್‌ಗೆ ಈ ಸಾಲಿನ ಗವರ್ನರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗಿದೆ.

2000 ರೂ. ನೋಟು ಖರ್ಚು ಮಾಡೋಕೆ ಜನ ಏನೇನೆಲ್ಲ ಮಾಡ್ತಿದ್ದಾರೆ? ಸಮೀಕ್ಷೆ ವರದಿ ಹೇಳಿದ್ದೀಗೆ..

2023ರ ಮಾರ್ಚ್ ತಿಂಗಳಲ್ಲಿ ಶಕ್ತಿಕಾಂತ ದಾಸ್ ಹೆಸರು ನಾಮನಿರ್ದೇಶನಗೊಂಡಿತ್ತು. ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ 2ನೇ ಆರ್‌ಬಿಐ ಗವರ್ನರ್ ಅನ್ನೋ ಹೆಗ್ಗಳಿಕೆಗೆ ಶಕ್ತಿಕಾಂತ ದಾಸ್ ಪಾತ್ರಾಗಿದ್ದಾರೆ. 2015ರಲ್ಲಿ ಅಂದಿನ ಆರ್‌ಸಿಬಿ ಗವರ್ನರ್ ರಘುರಾಮ್ ರಾಜನ್ ಈ ಗೌರವಕ್ಕೆ ಪಾತ್ರರಾಗಿದ್ದರು.

ಆರ್‌​ಬಿಐ ಅನು​ಮತಿ ಇಲ್ಲದೇ 5 ಶಾಖೆ: ಸಹ​ಕಾರ ಬ್ಯಾಂಕ್‌ಗೆ ಅನು​ಮ​ತಿ

ಇತ್ತೀಚೆಗೆ ಶಕ್ತಿಕಾಂತ ದಾಸ್ ಬಡ್ಡಿದರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಸತತ ಎರಡನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ ಸಾಲದ ಮೇಲಿನ ಬಡ್ಡಿ ದರಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ. ರೆಪೋ ದರವನ್ನು (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ) ಈ ಹಿಂದಿನಂತೆ ಶೇ.6.5ರಲ್ಲೇ ಮುಂದುವರೆಸಲಾಗಿದೆ. ಹೀಗಾಗಿ ಸಾಲ ಮತ್ತು ಠೇವಣಿಗಳ ಬಡ್ಡಿ ದರ ಸ್ಥಿರವಾಗಿರಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಪ್ರಕಟಿಸಿದರು. ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಗುರುವಾರ ತನ್ನ ದ್ವೈಮಾಸಿಕ ಸಾಲನೀತಿ ಪ್ರಕಟಿಸಿದ್ದು, ಸತತ ಎರಡನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ ಸಾಲದ ಮೇಲಿನ ಬಡ್ಡಿ ದರಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ.