2,000 ರೂ. ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು, ಕಡಿಮೆ ಮೌಲ್ಯದ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಹಾಗೂ ತಮ್ಮ ದೈನಂದಿನ ವ್ಯವಹಾರವನ್ನು ಅವುಗಳಿಂದಲೇ ವ್ಯವಹರಿಸಲು ಜನರು ಮುಂದಾಗಿದ್ದು ಈ ಪೈಕಿ ಈ ನೋಟುಗಳನ್ನು ಹೆಚ್ಚಾಗಿ ಇಂಧನಕ್ಕಾಗಿ, ಆಭರಣ ಖರೀದಿಗಾಗಿ ಹಾಗೂ ದಿನಸಿಗಳನ್ನು ಖರೀದಿ ಮಾಡಲು ಬಳಸುತ್ತಿದ್ದಾರೆ.

ನವದೆಹಲಿ (ಜೂನ್ 14, 2023): 2,000 ರೂ ಮುಖಬೆಲೆಯ ನೋಟುಗಳು ಚಲಾವಣೆಯಿಂದ ರದ್ದಾದ ಬಳಿಕ ಇಂಧನ, ಆಭರಣ ಮತ್ತು ದಿನಸಿ ಖರೀದಿ ಮಾರ್ಗಗಳ ಮೂಲಕ ಸಾರ್ವಜನಿಕರು ತಮ್ಮಲ್ಲಿರುವ 2,000 ರೂ. ನೋಟುಗಳನ್ನು ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ವರದಿಯೊಂದು ತಿಳಿಸಿದೆ.

ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗದುಕೊಂಡ ಬಳಿಕ ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು, ಕಡಿಮೆ ಮೌಲ್ಯದ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಹಾಗೂ ತಮ್ಮ ದೈನಂದಿನ ವ್ಯವಹಾರವನ್ನು ಅವುಗಳಿಂದಲೇ ವ್ಯವಹರಿಸಲು ಜನರು ಮುಂದಾಗಿದ್ದು ಈ ಪೈಕಿ ಈ ನೋಟುಗಳನ್ನು ಹೆಚ್ಚಾಗಿ ಇಂಧನಕ್ಕಾಗಿ, ಆಭರಣ ಖರೀದಿಗಾಗಿ ಹಾಗೂ ದಿನಸಿಗಳನ್ನು ಖರೀದಿ ಮಾಡಲು ಬಳಸುತ್ತಿದ್ದಾರೆ.

ಇದನ್ನು ಓದಿ: 2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್‌, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ

ಅಲ್ಲದೇ ಶೇ. 55 ರಷ್ಟು ಜನರು ತಮ್ಮ 2,000 ರೂ. ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು, ಶೇ.23ರಷ್ಟು ಜನರು ವ್ಯವಹಾರದಲ್ಲಿ ಬಳಸಲು ಹಾಗೂ ಶೇ.22ರಷ್ಟು ಜನರು ಬ್ಯಾಂಕ್‌ನಲ್ಲಿ ಬದಲಾಯಿಸಿಕೊಳ್ಳಲು ಯೋಜಿಸಿದ್ದಾರೆ ಎಂದು ಲೋಕೇಶನ್‌ ಆಧಾರಿತ ಸಾಮಾಜಿಕ ಜಾಲತಾಣದ ಸಾರ್ವಜನಿಕ ಅಪ್ಲಿಕೇಶನ್‌ (ಆ್ಯಪ್‌) ವೊಂದು ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

2000 ರು. ನೋಟು ರದ್ದತಿ ಬೆನ್ನಲ್ಲೇ ಚಿನ್ನಕ್ಕೆ ಈ ಹಿಂದಿಗಿಂತ ಹೆಚ್ಚು ಬೇಡಿಕೆ ಬಂದಿದೆ. ಅಂದರೆ 2000 ರು. ನೋಟುಗಳನ್ನು ಇಟ್ಟುಕೊಂಡವರು ಚಿನ್ನದ ಅಂಗಡಿಗಳಿಗೆ ಹೋಗಿ ಆ ನೋಟನ್ನು ನೀಡಿ ಚಿನ್ನ ಖರೀದಿಸುತ್ತಿದ್ದು, ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಸಾಕಷ್ಟು ಚಿನ್ನಾಭರಣ ಅಂಗಡಿಗಳಿಗೆ ಚಿನ್ನ ಖರೀದಿ ಸಂಬಂಧ ದೂರವಾಣಿ ಕರೆಗಳು ಬರುತ್ತಿವೆ ಎಂದು ಚಿನ್ನದ ವ್ಯಾಪಾರಿಗಳೇ ಕಳೆದ ತಿಂಗಳು ತಿಳಿಸಿದ್ದರು.

ನಿಮ್ಮ ಬಳಿ 2000 ರೂ. ನೋಟಿದ್ರೆ ಭಯ ಬೇಡ: ಇಂದಿನಿಂದ 4 ತಿಂಗಳ ಕಾಲ ನೋಟ್‌ ಬದಲಾವಣೆಗೆ ಅವಕಾಶ

ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಗ್ರಾಹಕರೊಬ್ಬರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಬಳೆಗಳನ್ನು ಮಾಡಿಸಲು ಬುಕ್‌ ಮಾಡಿದ್ದಾರೆ. ಅಲ್ಲದೆ, ಈ ಹಣವನ್ನು ಬರೇ 2 ಸಾವಿರ ರೂ. ನೋಟುಗಳಲ್ಲಿ ಪಾವತಿ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. ಚಿನ್ನದ ಬಳೆಯನ್ನು ಆರ್ಡರ್‌ ಮಾಡಿ ತೆಗೆದುಕೊಂಡಿದ್ರು.

ಆರ್‌ಬಿಐ 2,000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದ ಒಂದು ದಿನದ ನಂತರ, ಆಭರಣ ವ್ಯಾಪಾರಿಗಳು 2,000 ರೂಪಾಯಿಗಳ ನೋಟುಗಳೊಂದಿಗೆ ಚಿನ್ನವನ್ನು ಖರೀದಿಸುವ ಗ್ರಾಹಕರ ನಿರಂತರ ಹರಿವನ್ನು ವೀಕ್ಷಿಸಿದರು ಎಂದೂ ವರದಿಗಳು ಹೇಳುತ್ತಿವೆ. ಈ ಹಿನ್ನೆಲೆ ಇದೆಲ್ಲ ಕಪ್ಪು ಹಣ ಇರಬಹುದು ಎಂಬ ಅನುಮಾನವೂ ಮೂಡುತ್ತಿದೆ. ಆದರೂ, ಎಲ್ಲಾ ಹೆಚ್ಚಿನ ಮೌಲ್ಯದ ವಹಿವಾಟುಗಳು ಪ್ಯಾನ್ ಕಾರ್ಡ್ ವಿವರಗಳನ್ನು ಹೊಂದಿರಬೇಕಾಗಿರುವುದರಿಂದ ತೆರಿಗೆ ಅಧಿಕಾರಿಗಳ ಗಮನವನ್ನು ಸೆಳೆಯದೆ, ಆಭರಣಗಳನ್ನು ಖರೀದಿಸಲು 2,000 ರೂಪಾಯಿಗಳ ನೋಟುಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸುವುದು ಗ್ರಾಹಕರಿಗೆ ಕಷ್ಟಕರವಾದ ಕೆಲಸವಾಗಿದೆ.

2000 ರೂ. ನೋಟು ಬದಲಾಯಿಸಿಕೊಳ್ಳೋಕೆ ಪೆಟ್ರೋಲ್‌ ಬಂಕ್‌ಗೆ ಮುಗಿಬಿದ್ದ ಜನ: ಚೇಂಜ್‌ ಇಲ್ಲ ಎಂದು ಹೇಳಿ ಸುಸ್ತಾದ ಸಿಬ್ಬಂದಿ