ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 

ನವದೆಹಲಿ(ಜೂ.10): ದೇಶದಲ್ಲಿರುವ 1,514 ನಗರ ಪ್ರದೇಶ ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆಗಾಗಿ ಪೂರ್ವಾನುಮತಿ ಇಲ್ಲದೇ ಗರಿಷ್ಠ 5 ಶಾಖೆಗಳನ್ನು ತೆರೆಯಲು ಅನುಮತಿ ಸೇರಿದಂತೆ 4 ಪ್ರಮುಖ ಕ್ರಮಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೈಗೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳು, 1 ವರ್ಷ​ದ​ಲ್ಲಿ ಒಟ್ಟಾರೆ ಶಾಖೆಗಳಿಗಿಂತ ಹೆಚ್ಚುವರಿ ಶೇ.10ರಷ್ಟುಶಾಖೆಗಳನ್ನು ಆರ್‌ಬಿಐ ಪೂರ್ವಾನುಮತಿ ಇಲ್ಲದೇ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಗರಿಷ್ಠ 5 ಶಾಖೆಗಳನ್ನಷ್ಟೇ ತೆರೆಯಬಹುದಾಗಿದೆ.

ಇನ್ಮುಂದೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಇ-ರುಪಿ ವೋಚರ್ ವಿತರಿಸಬಹುದು: ಆರ್ ಬಿಐ

ಅದೇ ರೀತಿ ಆದ್ಯತಾ ವಲಯಕ್ಕೆ ಸಾಲ ನೀಡಲು ಈ ಬ್ಯಾಂಕ್‌ಗಳಿಗೆ ವಿಧಿಸಲಾಗಿದ್ದ ಮಿತಿಯನ್ನು 2026ರ ಮಾ.31ರವೆಗೆ ವಿಸ್ತರಿಸಲಾಗಿದೆ. ಆದ್ಯತಾ ವಲಯವನ್ನು ಗುರುತಿಸುವ ಅವಧಿಯನ್ನೂ ಸಹ 2024ರ ಮಾ.31ಕ್ಕೆ ವಿಸ್ತರಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳಿಗೆ ನೀಡಿರುವಂತೆ ಒಂದೇ ಬಾರಿಗೆ ಸೆಟಲ್‌ಮೆಂಟ್‌ ಮಾಡುವ ಅವಕಾಶವನ್ನು ಈ ಸಹಕಾರಿ ಬ್ಯಾಂಕ್‌ಗಳಿಗೂ ಒದಗಿಸಲಾಗಿದೆ.