ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!
ಆರ್ಥಿಕ ಹಿಂಜರಿಕೆ ಪರಿಹಾರಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆಯಂತೆ| ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ದು ಓದಿಕೊಳ್ಳುವಂತೆ ಪ್ರಧಾನಿ ಮೋದಿಗೆ ರಾಹುಲ್ ಸಲಹೆ| ಮೋದಿ ಕಾಂಗ್ರೆಸ್ ಪ್ರಣಾಳಿಕೆ ಕದ್ದು ಓದಿದರೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದ ರಾಹುಲ್| 'ದೇಶದ ಆರ್ಥಿಕತೆ ಹೀನಾಯ ಸ್ಥಿತಿ ತಲುಪಿದ್ದರೂ ಪರಿಹಾರ ಕಂಡುಹಿಡಿಯಲು ಒದ್ದಾಡುತ್ತಿರುವ ಮೋದಿ ಸರ್ಕಾರ'| ಮೋದಿ-ನಿರ್ಮಲಾ ಇಬ್ಬರೂ ಕಾಂಗ್ರೆಸ್ ಪ್ರಣಾಳಿಕೆ ಓದಿದರೆ ದೇಶಕ್ಕೆ ಒಳಿತಾಗಲಿದೆ ಎಂದ ರಾಹುಲ್|
ನವದೆಹಲಿ(ಅ.19): ಆರ್ಥಿಕ ಕುಸಿತಕ್ಕೆ ಪರಿಹಾರ ಹುಡುಕುತ್ತಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ದರೆ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿ ಮೇಲೆ ತರಲು ಅವಶ್ಯವಾಗಿರುವ ಪರಿಹಾರ ಕಾರ್ಯಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದು, ಅದನ್ನು ಪ್ರಧಾನಿ ಮೋದಿ ಕದ್ದೊಯ್ದು ಓದಿಕೊಳ್ಳಲಿ ಎಂದು ರಾಹುಲ್ ಕಿಚಾಯಿಸಿದ್ದಾರೆ.
ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!
ದೇಶದ ಆರ್ಥಿಕತೆ ಹೀನಾಯ ಸ್ಥಿತಿ ತಲುಪಿದ್ದರೂ, ಕೇಂದ್ರದ ಬಿಜೆಪಿ ನೇತೃತ್ವ ಸರ್ಕಾರ ಮಾತ್ರ ಹಾಯಾಗಿ ನಿದ್ರಿಸುತ್ತಿದೆ ಎಂದು ರಾಹುಲ್ ಹರಿಹಾಯ್ದಿದ್ದಾರೆ. ಆರ್ಥಿಕ ಅವ್ಯವಸ್ಥೆಯನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕದ್ದು ಓದಿಕೊಳ್ಳಲಿ ಎಂದು ಅವರು ಟಾಂಗ್ ನೀಡಿದ್ದಾರೆ.
ದುರ್ಬಲ ಆರ್ಥಿಕತೆ ಸುಧಾರಿಸುವುದಿಲ್ಲ: ನೊಬೆಲ್ ಪುರಸ್ಕೃತನ ಮಾತು ಕೇಳೊರಿಲ್ವಾ?
ಆರ್ಥಿಕ ಹಿಂಜರಿತದಿಂದ ಭಾರತದ ಗ್ರಾಮೀಣ ಭಾಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಪರಿಹಾರಕ್ಕಾಗಿ ತಡಕಾಡುತ್ತಿರುವ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್, ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ದು ಓದಿಕೊಳ್ಳಲಿ ಎಂದು ರಾಹುಲ್ ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.
ಸಿಂಗ್-ರಾಜನ್ ಕಾಲದಲ್ಲೇ ವಿನಾಶ: ನಿರ್ಮಲಾ ಹೇಳಿಕೆಗೆ ನಡುಗಿತು ಆಕಾಶ!
ದೇಶದ ಆರ್ಥಿಕ ಸ್ಥಿತಿ ಹದಗಡೆಗಲು ಕಾರಣ ಯಾರು ಎಂಬುದರ ಕುರಿತು ಕಳೆದ ಕೆಲವು ದಿನಗಳಿಂದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡುವೆ ವಾಕ್ಸಮರ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಬ್ಯಾಂಕ್‌ಗಳಿಗೆ ಕೆಟ್ಟಕಾಲ ಅಂದ ಸಚಿವೆ ನಿರ್ಮಲಾಗೆ ಡಾ. ಸಿಂಗ್ ತಿರುಗೇಟು!
ಇಟ್ಸ್ ಸಿಂಗ್ VS ಸೀತಾರಾಮನ್: ಶತಮಾನದ ಟ್ರೆಂಡಿಂಗ್ ಟಾಕ್ ವಾರ್!