Asianet Suvarna News Asianet Suvarna News

ಬಹಿರಂಗವಾಯ್ತು ‘ಆ’ ರಹಸ್ಯ ವರದಿ: ನಿಟ್ಟುಸಿರು ಬಿಟ್ಟರು ಮೋದಿ!

ಪ್ರಧಾನಿ ಮೋದಿಗೆ ಬಿಗ್ ರಿಲೀಫ್! ದೇಶದ ಜಿಡಿಪಿ ಬೆಳವಣಿಗೆ ದಾಖಲೆಯ ಏರಿಕೆ! ರೂಪಾಯಿಯ ಮೌಲ್ಯ ಕುಸಿತದ ನಡುವೆಯೂ ಜಿಡಿಪಿ ವೃದ್ಧಿ! ಭಾರತದ ಆರ್ಥಿಕ ಬೆಳವಣಿಗೆ ಶೇ.8.2ಕ್ಕೆ ಏರಿಕೆ

Q1 GDP growth rate zooms to 8.2%, highest in over two years
Author
Bengaluru, First Published Sep 1, 2018, 6:14 PM IST

ನವದೆಹಲಿ(ಸೆ.1): ರೂಪಾಯಿಯ ಮೌಲ್ಯ ಕುಸಿತದ ನಡುವೆಯೂ, ಭಾರತದ ಆರ್ಥಿಕ ಬೆಳವಣಿಗೆ ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.8.2ಕ್ಕೆ ಏರಿಕೆಯಾಗಿದೆ. ಇದು ಕಳೆದ 15 ತ್ರೈಮಾಸಿಕಗಳಲ್ಲಿಯೇ ಗರಿಷ್ಠ ಜಿಡಿಪಿ ಎಂದು ಮೂಲಗಳು ತಿಳಿಸಿವೆ. ಉತ್ಪಾದನೆ ಹಾಗೂ ಕೃಷಿ ಕ್ಷೇತ್ರದಲ್ಲಿನ ಸುಧಾರಣೆಯ ಪರಿಣಾಮ ಜಿಡಿಪಿ ವೃದ್ಧಿಸಿದೆ. 

ಇದೇ ಅವಧಿಯಲ್ಲಿ ಚೀನಾ ಶೇ.6.7 ಜಿಡಿಪಿ ದಾಖಲಿಸಿದ್ದು, ವಿಶ್ವದಲ್ಲಿಯೇ ಅತಿ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಅರ್ಥವ್ಯವಸ್ಥೆಯಾಗಿ ಮುಂದುವರಿದಿದೆ. 

2018-19ರ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಡಿಪಿ ಮೌಲ್ಯ 33.74 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. 2017-18ರ ಇದೇ ಅವಧಿಯಲ್ಲಿ 31.18 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದರೊಂದಿಗೆ ಶೇ.8.2ರಷ್ಟು ಪ್ರಗತಿ ದಾಖಲಿಸಿದೆ. ಈ ಹಿಂದೆ 2014-15ರ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.8.4ರ ಜಿಡಿಪಿ ದಾಖಲಾಗಿತ್ತು. 

 ಕಳೆದ 2 ವರ್ಷಗಳಲ್ಲಿಯೇ ಇದು ಗರಿಷ್ಠ ತ್ರೈಮಾಸಿಕ ಆರ್ಥಿಕ ಬೆಳವಣಿಗೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ವಿದ್ಯುತ್‌, ಅನಿಲ, ನೀರಿನ ಪೂರೈಕೆ, ನಿರ್ಮಾಣ, ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳಲ್ಲಿ ಶೇ.7ರಷ್ಟು ಜಿಡಿಪಿ ದಾಖಲಾಗಿದೆ. 

ಅದರಂತೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ,ಗಣಿಗಾರಿಕೆ, ಕ್ವಾರೆ ಗಣಿಗಾರಿಕೆ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಸೇವೆ, ರಿಯಲ್‌ ಎಸ್ಟೇಟ್‌, ವೃತ್ತಿಪರ ಸೇವೆ ವಲಯ ಅನುಕ್ರಮವಾಗಿ ಶೇ.5.3, ಶೇ.0.1ರಿಂದ ಶೇ.6.7 ತನಕ ಜಿಡಿಪಿ ಪ್ರಗತಿ ಕಂಡಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಸಕ್ತ ಜಿಡಿಪಿ ವರದಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ನೀಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಇದೊಂದ್ ವಿಷ್ಯದಲ್ಲಿ ಸಿಂಗ್ ಅವರಿಗಿಂತ ಮೋದಿ ಹಿಂದಂತೆ!

ಡೌನ್ ಜಿಡಿಪಿ: ಮೋದಿ ಊದ್ತಿದ್ದಾರಾ ಬರೀ ಪೀಪಿ?

ಮುಂದಿನ ವರ್ಷ ಜಿಡಿಪಿ ಗತಿ?: ಮೋದಿ ಮೂಡ್ ಚೆನ್ನಾಗಿದೆ ಎಂದ ಮೂಡೀಸ್!

ನಿಮ್ಮ ಜೇಬು ಗಟ್ಟಿ ಉಳಿಸಿದ್ದು ಎನ್ ಡಿಎ ನಾ ಯುಪಿಎ ನಾ?

ಆರ್ಥಿಕತೆಯಲ್ಲಿ ಬ್ರಿಟನ್ ಬೀಟ್ ಮಾಡಲಿದೆ ಭಾರತ: ಯಾವಾಗ?

Follow Us:
Download App:
  • android
  • ios