Asianet Suvarna News Asianet Suvarna News

ನಿಮ್ಮ ಜೇಬು ಗಟ್ಟಿ ಉಳಿಸಿದ್ದು ಎನ್ ಡಿಎ ನಾ ಯುಪಿಎ ನಾ?

ಯಾರ ಅವಧಿಯಲ್ಲಿ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿತ್ತು?! ಆರ್ಥಿಕ ಅಭಿವೃದ್ಧಿಯ ಡಾಟಾ ಹೇಳುವ ಕತೆಯೇನು?! ಯುಪಿಎ ವರ್ಸಸ್ ಎನ್ ಡಿಎ ಯುದ್ಧದಲ್ಲಿ ಗೆಲ್ಲೋದು ಯಾರು?! ಮೋದಿ ಆರ್ಥಿಕ ನೀತಿಗಳು ನಿಜಕ್ಕೂ ಕೆಲಸ ಮಾಡುತ್ತಾ?

 

UPA OR NDA: Who's better for the economy?
Author
Bengaluru, First Published Aug 24, 2018, 5:31 PM IST

ನವದೆಹಲಿ(ಆ.24): ಜಿಡಿಪಿ ಬೆಳವಣಿಗೆ ಕಾಯ್ದುಕೊಳ್ಳುವಲ್ಲಿ ಯುಪಿಎ ಸರ್ಕಾರವೇ ಉತ್ತಮ ಎಂಬ ವರದಿ ಬಹಿರಂಗವಾಗುತ್ತಿದ್ದಂತೇ, ಎನ್ ಡಿಎ ಮತ್ತು ಯುಪಿಎ ಸರ್ಕಾರಗಳ ನಡುವಿನ ತುಲನೆಗೆ ಚಾಲನೆ ನೀಡಲಾಗಿದೆ. ದೇಶದ ಆರ್ಥಿಕತೆ ಯಾರ ಕೈಯಲ್ಲಿ ಹೆಚ್ಚು ಸುಭದ್ರ ಎಂಬುದೇ ಈ ಚರ್ಚೆಯ ಸಾರ.

ಪ್ರಸಕ್ತ ಎನ್ ಡಿಎ ಸರ್ಕಾರದಲ್ಲಿ ಜಿಡಿಪಿ ಬೆಳವಣಿಗೆ ಸ್ಥಿತ್ಯಂತರವಾಗಿದ್ದು, ಬೆಳವಣಿಗೆಯಲ್ಲಿ ಬಹಳ ವ್ಯತ್ಯಾಸವೇನೂ ಇಲ್ಲ. ಇದು ಆರ್ಥಿಕತೆ ದೃಷ್ಟಿಯಲ್ಲಿ ಒಳ್ಳೆಯ ನಡೆ ಹೌದಾದರೂ, ಜಿಡಿಪಿ ಬೆಳವಣಿಗೆ ವೃದ್ಧಿಸುವಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ ಎಂಬ ಆರೋಪಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಯುಪಿ ಅವಧಿಯುಲ್ಲಿ ಜಿಡಿಪಿ ಬೆಲವನಿಗೆ ಶೇ. ೮ ರಷ್ಟು ಇದ್ದಿದ್ದು, ಆರ್ಥಿಕತೆ ಅಡಿಪಾಯ ತುಂಬ ಸುಭದ್ರವಾಗಿತ್ತು ಎಂಬ ಆರ್ಥಿಕ ತಜ್ಞರ ಅಭಿಪ್ರಾಯ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅದರಂತೆ ಎನ್ ಡಿಎ ಮತ್ತು ಯುಪಿಎ ಸರ್ಕಾರಗಳ ನಡುವೆ ಇರುವ ಆರ್ಥಿಕ ಸ್ಥಿತಿ ತುಲನೆ ಮಾಡುವುದಾದರೆ..

1. ಜಿಡಿಪಿ:

ಯುಪಿಎ ಅವಧಿಯಲ್ಲಿ ದೇಶದ ರಾಷ್ಟ್ರೀಯ ವರಮಾನ ಶೇ. 8.1 ರಷ್ಟಿತ್ತು. ಎನ್ ಡಿಎ ಅವಧಿಯಲ್ಲಿ ಜಿಡಿಪಿ ಹಿಂದೊಮ್ಮೆ ಶೇ. 6.5ಕ್ಕೆ ಕುಸಿದು, ಸದ್ಯ 7.2 ರಷ್ಟಿದೆ. ಅಲ್ಲದೇ 2018-19ರ ಆರ್ಥಿಕ ವರ್ಷದಲ್ಲಿ ಜಿಡಿಪಿ 7.5 ಕ್ಕೆ ಜಿಗಿಯುವ ಲಕ್ಷಣವೂ ಇದೆ.

2. ಹಣಕಾಸಿನ ಖಾತೆ ಕೊರತೆ:

ಇದರಲ್ಲೂ ಕೂಡ ಎರಡೂ ಸರ್ಕಾರಗಳ ನಡುವೆ ಬಹಳ ವ್ಯತ್ಯಾಸವೇನೂ ಇಲ್ಲ. ಯುಪಿ ಅವಧಿಯಲ್ಲಿ ಶೇ. 4.1 ರಷ್ಟಿದ್ದ ಹಣಕಾಸು ಖಾತೆ ಕೊರತೆ, ಎನ್ ಡಿಎ ಅವಧಿಯಲ್ಲಿ 3.5 ಕ್ಕೆ ಇಳಿದಿತ್ತಾದರೂ, ಇದೀಗ ಮತ್ತೆ 4.1 ಕ್ಕೆ ಬಂದಿದೆ.

3. ಚಾಲ್ತಿ ಖಾತೆ ಕೊರತೆ:

ಯುಪಿಎ ಅವಧಿಯಲ್ಲಿ 0.4 ರಷ್ಟಿದ್ದ ಚಾಲ್ತಿ ಖಾತೆ ಕೊರತೆ, ಎನ್ ಡಿಎ ಅವಧಿಯಲ್ಲಿ 2014-15 ರ ಅವಧಿಯಲ್ಲಿ 1.31 ಮತ್ತು 2017-18ರಲ್ಲಿ 1.87ಕ್ಕೆ ಏರಿದೆ.

4. ರೆಪೋ ದರ:

ಆರ್ ಬಿಐ ರೆಪೋ ದರ ಸದ್ಯ 6.25 ರಷ್ಟಿದ್ದು, ಇದೂ ಕೂಡ ಮೋದಿ ಸರ್ಕಾರದ ಚಿಂತೆಗೆ ಕಾರಣವಾಗಿರುವುದು ಸುಳ್ಳಲ್ಲ.

5. ಸಗಟು ಹಣದುಬ್ಬರ:

ಯುಪಿಎ ಅವಧಿಯಲ್ಲಿ 6.5 ರಿಂದ 8.1 ರಷ್ಟಿದ್ದ ಸಗಟು ಹಣದುಬ್ಬರ ಎನ್ ಡಿಎ ಅವಧಿಯಲ್ಲಿ 1.2 ಮತ್ತು 3.0 ಆಗಿದೆ.

ಹೀಗೆ ವಿವಿಧ ಆರ್ಥಿಕ ಕ್ಷೇತ್ರಗಳಲ್ಲಿ ಎನ್ ಡಿಎ ಮತ್ತು ಯುಪಿಎ ಸರ್ಕಾರಗಳ ತುಲನೆ ಮಾಡಲಾಗುತ್ತಿದ್ದು, ಮೇಲ್ನೋಟಕ್ಕೆ ಯುಪಿ ಅವಧಿಯಲ್ಲಿ ಎಲ್ಲವೂ ಸರಿ ಇತ್ತು ಎಂಬುದು ಕಂಡುಬಂದರೂ ಅಪನಗದೀಕರಣ ಮತ್ತು ಜಿಎಸ್ ಟಿ ಜಾರಿಯಿಂದಾಗಿ ಈ ಕ್ಷೇತ್ರಗಳಲ್ಲಿ ತಾತ್ಕಾಲಿಕ ಹಿನ್ನಡೆಯಾಗಿರುವುದು ಅಷ್ಟೇ ಸತ್ಯ.

ಅದರಂತೆ ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 7.5 ರಷ್ಟು ಹೆಚ್ಚಾಗಲಿದೆ ಎಂಬ ಮೂಡೀಸ್ ವರದಿ ಕೂಡ ಭರವಸೆ ಮೂಡಿಸಿದೆ. ಅದರಂತೆ ಜಿಎಸ್ ಟಿ ಯ ಪರಿಣಾಮಕಾರಿ ಜಾರಿ ಕೂಡ ಸರ್ಕಾರಕ್ಕೆ ಹೆಚ್ಚು ವರಮಾನ ತಂದು ಕೊಡುವಲ್ಲಿ ಅನುಮಾನವಿಲ್ಲ ಎಂಬುದು ಆರ್ಥಿಕ ತಜ್ಞರ ಅಂಬೋಣ.

Follow Us:
Download App:
  • android
  • ios