Deadline extended:ರೈತರಿಗೆ ನೆಮ್ಮದಿಯ ಸುದ್ದಿ; ಪಿಎಂ ಕಿಸಾನ್ ಇ-ಕೆವೈಸಿ ಗಡುವು ಮೇ 22ಕ್ಕೆ ವಿಸ್ತರಣೆ
*ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ
*ಈ ಹಿಂದೆ ಮಾ.31ಕ್ಕೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು
*ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳಿಗೆ ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ
ನವದೆಹಲಿ (ಮಾ.31): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಸಂಪೂರ್ಣ ಪ್ರಯೋಜನ ಪಡೆಯಲು ರೈತರು ಮಾರ್ಚ್ 31ರೊಳಗೆ ಇ-ಕೆವೈಸಿ (eKYC) ಪ್ರಕ್ರಿಯೆ ಪೂರ್ಣಗೊಳಿಸೋದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದ್ರೆ ಈ ಗಡುವನ್ನು (Deadline) ಈಗ 2022ರ ಮೇ 22ಕ್ಕೆ ಮುಂದೂಡಲಾಗಿದೆ. ಹೀಗಾಗಿ ರೈತರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ, ಮೇ 22ರೊಳಗೆ ಇ-ಕೆವೈಸಿ (eKYC) ಪೂರ್ಣಗೊಳಿಸಿದರೆ ಸಾಕು.
ಪಿಎಂ ಕಿಸಾನ್ (PM-KISAN) ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋ ಗಡುವನ್ನು ಮೇ 22ಕ್ಕೆ ಮುಂದೂಡಿರೋ ಬಗ್ಗೆ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು,' ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಗಡುವನ್ನು 2022ರ ಮೇ 22ಕ್ಕೆ ವಿಸ್ತರಿಸಲಾಗಿದೆ' ಎಂದು ತಿಳಿಸಲಾಗಿದೆ.
Varnika ನೋಟಿಗೆ ಬೇಕಾದ ಇಂಕ್ ಇನ್ಮುಂದೆ ನಮ್ಮಲ್ಲೇ ಸಿಗುತ್ತೆ!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. ಈ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2000 ರೂ.ನಂತೆ ಮೂರು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank account) ನೇರವಾಗಿ ಜಮಾ (Deposit) ಮಾಡಲಾಗುತ್ತದೆ. ಒಂದು ಆರ್ಥಿಕ ಸಾಲಿನಲ್ಲಿ ಪಿಎಂ ಕಿಸಾನ್ ಯೋಜನೆ ಕಂತುಗಳನ್ನು ಮೂರು ಬಾರಿ ಪಾವತಿಸಲಾಗುತ್ತದೆ. ಮೊದಲನೇ ಕಂತಿನ ಅವಧಿ ಏಪ್ರಿಲ್-ಜುಲೈ.ಎರಡನೇ ಕಂತಿನ ಅವಧಿ ಆಗಸ್ಟ್-ನವೆಂಬರ್ ಹಾಗೂ ಮೂರನೇ ಕಂತಿನ ಅವಧಿ ಡಿಸೆಂಬರ್ ನಿಂದ ಮಾರ್ಚ್.
ಪಿಎಂ ಕಿಸಾನ್ ಯೋಜನೆ ಪ್ರಾರಂಭಿಸಿದ ದಿನಗಳಲ್ಲಿ ಇದರ ಪ್ರಯೋಜನ ಕೇವಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಕುಟುಂಬಗಳಿಗೆ ಮೀಸಲಾಗಿತ್ತು. ಅಂದ್ರೆ 2 ಹೆಕ್ಟೇರ್ ಭೂಮಿ ಹೊಂದಿರೋರಿಗೆ ಮಾತ್ರ ಈ ಪ್ರಯೋಜನ ಸಿಗುತ್ತಿತ್ತು. ಆದ್ರೆ ಈ ಯೋಜನೆಯನ್ನು 2019ರ ಜೂನ್ ನಲ್ಲಿ ಪರಿಷ್ಕರಿಸಲಾಯಿತು ಹಾಗೂ ಭೂ ಹಿಡುವಳಿ ಗಾತ್ರದ ಹೊರತಾಗಿಯೂ ಎಲ್ಲ ರೈತ ಕುಟುಂಬಗಳಿಗೆ ವಿಸ್ತರಿಸಲಾಯಿತು.
ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ https://pmkisan.gov.in ಭೇಟಿ ನೀಡಿ.
-ಈಗ ಬಲ ಭಾಗದಲ್ಲಿ ಹೋಮ್ ಪೇಜ್ ಕೆಳಗೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.
-ಫಾರ್ಮರ್ಸ್ ಕಾರ್ನರ್ ಕೆಳಗೆ ಒಂದು ಬಾಕ್ಸ್ ಇದ್ದು, ಅದ್ರಲ್ಲಿ ಇ-ಕೆವೈಸಿ ಎಂದಿದೆ.
-ಈಗ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ.
-ಒಂದು ಪುಟ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಇ-ಕೆವೈಸಿ ಭರ್ತಿ ಮಾಡಬಹುದು.
-ಈಗ ನೀವು ಆಧಾರ್ ಸಂಖ್ಯೆ ಹಾಗೂ ಕಾಪ್ಚ ಕೋಡ್ ನಮೂದಿಸಬೇಕು. ಆ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ನೀವು ಆಧಾರ್ ಸಂಖ್ಯೆಗೆ ಲಿಂಕ್ ಆಗಿರೋ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆ ಬಳಿಕ OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.
PAN Aadhaar Link: ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ!
-ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
-OTP ನೋಂದಾಯಿಸಿ ಸಬ್ಮಿಟ್ ಮಾಡಲು Authentication button ಮೇಲೆ ಕ್ಲಿಕ್ ಮಾಡಿ.
- Submit ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ e-KYC ಪೂರ್ಣಗೊಳ್ಳುತ್ತದೆ.