PAN Aadhaar Link: ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ!
*ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾ.31 ಗಡುವು
*ಆಧಾರ್ ಗೆ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯ
*ಪ್ಯಾನ್ ನಿಷ್ಕ್ರಿಗೊಂಡ್ರೆ ಬ್ಯಾಂಕಿಂಗ್ ವ್ಯವಹಾರ, ಹೂಡಿಕೆ ಅಸಾಧ್ಯ
Business Desk: ಪ್ಯಾನ್ (Permanent Account Number-PAN) ಅನ್ನು ಆಧಾರ್ ಗೆ (Aadhaar) ಲಿಂಕ್ (link) ಮಾಡಲು ಇಂದು (ಮಾ.31) ಕೊನೆಯ ದಿನ. ಈ ಹಿಂದೆ ಅನೇಕ ಬಾರಿ ಸರ್ಕಾರ ಈ ಗಡುವನ್ನು ಮುಂದೂಡುತ್ತಲೇ ಬಂದಿತ್ತು. ಹೀಗಾಗಿ ಈ ಬಾರಿಯೂ ಗಡುವು ವಿಸ್ತರಣೆಯಾಗುತ್ತದೆ ಎಂದು ಭಾವಿಸಿ ಪ್ಯಾನ್ ಅನ್ನು ಆಧಾರ್ ಗೆ ಲಿಂಕ್ ಮಾಡದಿದ್ರೆ ತೊಂದರೆ ಕಟ್ಟಿಟ್ಟ ಬುತ್ತಿ.
ಇನ್ನು ಆಧಾರ್ ಗೆ ಲಿಂಕ್ ಆಗದ ಪ್ಯಾನ್ ಅನ್ನು ಆದಾಯ ತೆರಿಗೆ ಇಲಾಖೆ (Income Tax Department) ನಿಷ್ಕ್ರಿಯಗೊಳಿಸಲಿದೆ. ಪ್ಯಾನ್ ನಿಷ್ಕ್ರಿಯಗೊಂಡ್ರೆ ನೀವು ಅನೇಕ ತೊಂದರೆ ಅನುಭವಿಸಬೇಕಾಗುತ್ತದೆ. ದೊಡ್ಡ ಮೊತ್ತದ ಹಣಕಾಸಿನ ವಹಿವಾಟಿಗೆ ಪ್ಯಾನ್ ಅಗತ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು (Banking Services) ಪಡೆಯಲು ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ದೊಡ್ಡ ಮೊತ್ತದ ಪಾವತಿ, ಖರೀದಗೂ ಪ್ಯಾನ್ ಅಗತ್ಯ. ಅಷ್ಟೇ ಅಲ್ಲ, ಆಧಾರ್ ಗೆ ಜೋಡಣೆಗೊಂಡ ಪ್ಯಾನ್ ಹೊಂದಿರೋ ಡಿಮ್ಯಾಟ್ (Dmate) ಖಾತೆಗಳಿಗಷ್ಟೇ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅವಕಾಶ ನೀಡಬೇಕೆಂದು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಹೂಡಿಕೆದಾರರು ಹಾಗೂ ಸೆಕ್ಯುರಿಟೀಸ್ ಮಾರ್ಕೆಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಯಾವುದೇ ಸೆಕ್ಯುರಿಟೀಸ್ ಸಂಸ್ಥೆಯಲ್ಲಿ (ಸ್ಟಾಕ್ ಬ್ರೋಕರೇಜ್ ಸಂಸ್ಥೆ, ಡಿಮ್ಯಾಟ್ ಖಾತೆ, ಮ್ಯೂಚುವಲ್ ಫಂಡ್ ಹೂಡಿಕೆ) ಹೊಸದಾಗಿ ಖಾತೆ ತೆರೆಯಲು ಪ್ಯಾನ್ ಆಧಾರ್ ಗೆ ಲಿಂಕ್ ಆಗಿರೋದು ಕಡ್ಡಾಯ ಎಂದು ಕೂಡ ಸೆಬಿ (SEBI) ತಿಳಿಸಿದೆ.
PAN-Aadhaar Linking:ಇಂದೇ ಕೊನೇ ದಿನ: ತಡಮಾಡಿದರೆ ದಂಡ, ಲಿಂಕ್ ಮಾಡೋದು ಬಲು ಸುಲಭ!
2020ರಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಎಲ್ಲ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡೋದನ್ನು ಕಡ್ಡಾಯಗೊಳಿಸಿತ್ತು. ಈ ಕೆಲಸಕ್ಕೆ 2021ರ ಜೂನ್ 30ರ ಗಡುವು ನೀಡಿತ್ತು. ಆ ಬಳಿಕ ಈ ಗಡುವನ್ನು 2021ರ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಮತ್ತೆ 2022ರ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿತ್ತು.
ಇತ್ತೀಚಿನ ಅಂದಾಜಿನ ಪ್ರಕಾರ ಸುಮಾರು ಮ್ಯೂಚುವಲ್ ಫಂಡ್ (MF) ಹೊಂದಿರೋ 20-30 ಲಕ್ಷ ಪ್ಯಾನ್ (Permanent Account Number) ಕಾರ್ಡ್ ದಾರರು ಇನ್ನೂ ಆಧಾರ್ ಲಿಂಕ್ ಮಾಡಿಲ್ಲ. ಒಂದು ವೇಳೆ ನೀವು ನಿಗದಿತ ಅವಧಿಯೊಳಗೆ ಪ್ಯಾನ್ -ಆಧಾರ್ ಲಿಂಕ್ ಮಾಡದಿದ್ರೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ 10,000ಊ. ದಂಡ ವಿಧಿಸಲಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ.
ಪ್ಯಾನ್ ನಿಷ್ಕ್ರಿಯವಾದ್ರೆ ಹೂಡಿಕೆ ಅಸಾಧ್ಯ?
ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ನೀವು ಎರಡು ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಒಂದು ಕೆವೈಸಿ ನಿಯಮಗಳನ್ನು ಪೂರ್ಣಗೊಳಿಸಬೇಕು. ಇನ್ನೊಂದು ನಿಮ್ಮ ಬಳಿ ಮಾನ್ಯತೆ ಹೊಂದಿರೋ ಪ್ಯಾನ್ ಕಾರ್ಡ್ ಇರಬೇಕು. ಹೀಗಾಗಿ ಆಧಾರ್ ಗೆ ಲಿಂಕ್ ಆಗದ ಕಾರಣ ನಿಮ್ಮ ಪ್ಯಾನ್ ನಿಷ್ಕ್ರಿಯಗೊಂಡ್ರೆ ನಿಮಗೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ನಿಮ್ಮ ಕೆವೈಸಿ ಕೂಡ ಅಮಾನ್ಯಗೊಳ್ಳುತ್ತೆ. ನಿಮಗೆ ಹೊಸದಾಗಿ ಹೂಡಿಕೆ ಮಾಡಲು ಸಾಧ್ಯವಾಗೋದಿಲ್ಲ. ಅಲ್ಲದೆ, ಈಗಾಗಲೇ ಚಾಲ್ತಿಯಲ್ಲಿರೋ ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ಸ್ (SIPs)ಕೂಡ ನಿಲ್ಲಿಸಲ್ಪಡುತ್ತವೆ.
UPI Tap to Pay: ಗೂಗಲ್ ಪೇ ಹೊಸ ಫೀಚರ್: ಹಣ ಪಾವತಿ ಈಗ ಇನ್ನೂ ಸುಲಭ!
ಆಧಾರ್-ಪ್ಯಾನ್ ಜೋಡಣೆ ಹೇಗೆ?
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆಯನ್ನು ಆನ್ ಲೈನ್ ನಲ್ಲೇ ಮಾಡಬಹುದು. ಆದಾಯ ತೆರಿಗೆ ಅಧಿಕೃತ ವೆಬ್ ಸೈಟ್ https://www.incometaxindiaefiling.gov.in/home ಭೇಟಿ ನೀಡಿ. ಕೆಲವೊಂದು ಹಂತಗಳನ್ನು ಅನುಸರಿಸೋ ಮೂಲಕ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಬಹುದು.