Varnika ನೋಟಿಗೆ ಬೇಕಾದ ಇಂಕ್ ಇನ್ಮುಂದೆ ನಮ್ಮಲ್ಲೇ ಸಿಗುತ್ತೆ!

ನೋಟು ಮುದ್ರಣಕ್ಕೆ ಬೇಕಾದ ಇಂಕ್ ಉತ್ಪಾದನಾ ಘಟಕ

ಮೈಸೂರಿನಲ್ಲಿ ಸ್ಥಾಪನೆಯಾದ "ವರ್ಣಿಕಾ" ಯುನಿಟ್

ನೋಟು ಇಂಕ್ ಉತ್ಪಾದನೆಯಲ್ಲಿ ದೇಶದ ಸ್ವಾವಲಂಬನೆ
 

Make In India  RBI Governor Shaktikanta Das Opens Bank Note Ink Unit Varnika In Mysuru san

- ಮಧು.ಎಂ.ಚಿನಕುರಳಿ
ಮೈಸೂರು (ಮಾ. 31):
ಭಾರತದಲ್ಲಿ ಮುದ್ರಣ ಆಗುವ ನೋಟುಗಳಿಗೆ (Note Print) ಬೇಕಾದ ಇಂಕ್  ಉತ್ಪಾದನೆಯಲ್ಲಿ (Ink Manufacturing Unit) ನಮ್ಮ ದೇಶ ಸ್ವಾವಲಂಬನೆ ಕಂಡಿದೆ. ಮೈಸೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಘಟಕಕ್ಕೆ ಭೇಟಿ ನೀಡಿದ ಗವರ್ನರ್ ಶಕ್ತಿಕಾಂತ ದಾಸ್ (Governor Shaktikanta Das ) ಅವರು ಮಾರ್ಚ್ 28ರಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನ (ಬಿಆರ್ ಬಿಎನ್ ಎಂಪಿಎಲ್) ವರ್ಣಿಕಾ (Varnika) ಇಂಕ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ (Bharatiya Reserve Bank Note Mudran Private Limited ) ಬ್ಯಾಂಕ್ ನೋಟುಗಳ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ "ವರ್ಣಿಕಾ' ಇಂಕ್ ಹೊರ ತಂದಿದೆ. ಈ ಘಟಕ ವಾರ್ಷಿಕವಾಗಿ 1500 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅಷ್ಟು ಮಾತ್ರವಲ್ಲದೆ ಇದು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಸ್ಥಾಪನೆಗೊಂಡಿದೆ. ಬ್ಯಾಂಕ್ ನೋಟುಗಳ ಪ್ರಿಂಟಿಂಗ್‌ಗೆ ಅವಶ್ಯಕತೆ ಇರುವ ಇಂಕ್ ಅನ್ನು ಈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಈ ಘಟಕವು ಕಲರ್ ಶಿಫ್ಟ್ ಇಂಟಾಗ್ಲಿಯೋ ಇಂಕ್ ಉತ್ಪಾದಿಸುವುದರೊಂದಿಗೆ ಭಾರತದಲ್ಲಿರುವ ಬ್ಯಾಂಕ್ ನೋಟು ಮುದ್ರಣಗಳಿಗೆ ಪೂರ್ಣ ಅವಶ್ಯಕತೆಯಿರುವ ಇಂಕ್ ಅನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.  ಇದರಿಂದ ಪರಿಣಾಮಕಾರಿ ದಕ್ಷತೆ ಮತ್ತು ಬ್ಯಾಂಕ್ ನೋಟು ಇಂಕ್ ಉತ್ಪಾದನೆಯ ಸ್ವಾವಲಂಬನೆ ಸಾಧಿಸಿದಂತಾಗುತ್ತದೆ.

ಬ್ಯಾಂಕ್ ನೋಟು ತಯಾರಿಕೆಯಲ್ಲಿ ಸ್ವಾವಲಂಬನೆ.
ಇಂಕ್ ತಯಾರಿಕಾ ಘಟಕ ಲೋಕ ಸಮರ್ಪಣೆ ಮಾಡಿ ಮಾತನಾಡಿದ ಆರ್‌ಬಿಐ ಗೌರ್ನರ್ ಶಕ್ತಿಕಾಂತ ದಾಸ್ ತಮ್ಮ ಭಾಷಣದಲ್ಲಿ ದೇಶದ ಬ್ಯಾಂಕ್ ನೋಟು ಉತ್ಪಾದನೆಯಲ್ಲಿ ಶೇ.100ರಷ್ಟು ಸ್ವಾವಲಂಬನೆ ಸಾಮರ್ಥ್ಯವನ್ನು ಸಾಧಿಸುವ ಬಗ್ಗೆ ಒತ್ತಿ ಹೇಳಿದರು. ಸದ್ಯದಲ್ಲಿಯೇ ಬ್ಯಾಂಕ್ ನೋಟು ತಯಾರಿಕಾ ಸ್ವಾವಲಂಬನೆಯಲ್ಲಿ ಶೇ.100ರಷ್ಟು ನಿರಂತರ ಉತ್ಪಾದನಾ ಸಾಮರ್ಥ್ಯ, ಉತ್ಪಾದನಾ ಪರಿಸರ ವ್ಯವಸ್ಥೆ ಮತ್ತು ಪ್ರಾಮುಖ್ಯತೆ ಸಾಧಿಸಲಿದೆ ಎಂದರು.

ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಲಿಕ್ವಿಡಿಟಿ; ಹಣಕಾಸು ನೀತಿ ಬಿಗಿಗೊಳಿಸೋ ಯೋಚನೆಯಿಲ್ಲ: RBI Governor

ಇದೇ ಸಂದರ್ಭದಲ್ಲಿ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್ ಸೆಂಟರ್ (Learning and Development Centre) ಅನ್ನು ಭದ್ರತಾ ಮುದ್ರಣ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ (SPMCIL) ಸಹಯೋಗದೊಂದಿಗೆ ಸಂಪೂರ್ಣ ಸ್ವಾಮ್ಯದ 'ಎ' ಮಿನಿರತ್ನ ವರ್ಗ-1ರ ಭಾರತ ಸರ್ಕಾರದ ಕಂಪನಿ ಮತ್ತು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜಂಟಿ ಉದ್ಯಮದೊಂದಿಗೆ ಸ್ಥಾಪಿಸಲಾಗುತ್ತಿದೆ.

ದೇಶದಲ್ಲಿ Cryptocurrency ಪರಿಚಯಿಸುವ ಗುರಿ ಇಲ್ಲ ಎಂದ ಕೇಂದ್ರ ಸರ್ಕಾರ!

ಕಾರ್ಯಕ್ರಮದಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಜೋಸ್ ಕೆ.ಕಟ್ಟೂರ್, ಬಿಆರ್‌ಬಿಎನ್‌ಎಂಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಾನಸ್ ರಂಜನ್ ಮೊಹಂತಿ, ಬಿಎನ್‌ಪಿಎಂಐಪಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ. ವಿಶ್ವನಾಥನ್, ಸರ್ಕಾರಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳು, ಬಿಆರ್‌ಬಿಎನ್‌ಎಂಪಿಎಲ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Latest Videos
Follow Us:
Download App:
  • android
  • ios