ನವದೆಹಲಿ(ಜ.22): ಸತತ ೬ ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಹೊಸ ವರ್ಷದಲ್ಲಿ ತೈಲದರ ನಿಯಂತ್ರಣಕ್ಕೆ ಬರುತ್ತದೆ ಎಂಬ ಭರವಸೆಗೆ ಮಂಕು ಕವಿಯುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಿದ್ದಾರೆ.

ಪೆಟ್ರೋಲ್ ಬೆಲೆಯಲ್ಲಿ 13-14 ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆಯಲ್ಲಿ 19-21 ಪೈಸೆ ಹೆಚ್ಚಳವಾಗಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲದರದತ್ತ ಗಮನಹರಿಸುವುದಾದರೆ....

ರಾಷ್ಟ್ರ ರಾಜಧಾನಿ ನವದೆಹಲಿ- 
ಪೆಟ್ರೋಲ್- 71.27 ರೂ. 
ಡೀಸೆಲ್- 65.90 ರೂ. 

ವಾಣಿಜ್ಯ ರಾಜಧಾನಿ ಮುಂಬೈ- 
ಪೆಟ್ರೋಲ್- 76.98 ರೂ. 
ಡೀಸೆಲ್-  68.81 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್- 73.36 ರೂ. 
ಡೀಸೆಲ್- 67.68 ರೂ. 

ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್‌- 73.99 ರೂ. 
ಡೀಸೆಲ್- 69.62 ರೂ. 

ರಾಜ್ಯ ರಾಜಧಾನಿ ಬೆಂಗಳೂರು- 
ಪೆಟ್ರೋಲ್- 73.48 ರೂ.
ಡೀಸೆಲ್- 67.87 ರೂ.

ಹೊಸ ವರುಷ, ಪೆಟ್ರೋಲ್ ತಂದಿದೆ ಮನೆ ಮನೆಯಲ್ಲಿ ಹರುಷ!

ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!

ಶತಮಾನದ ಶಾಕ್: ಪೆಟ್ರೋಲ್ ಬೆಲೆ ಬರೋಬ್ಬರಿ ಡಬಲ್!

‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!