ನವದೆಹಲಿ(ಜ.06): ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಭಾನುವಾರ)ಕೂಡ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರ 10 ಪೈಸೆಯಷ್ಟು ಇಳಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳತ್ತ ಗಮನಹರಿಸುವುದದರೆ... 

ರಾಷ್ಟ್ರ ರಾಜಧಾನಿ ನವದೆಹಲಿ- 
ಪೆಟ್ರೋಲ್- 68.29 ರೂ. 
ಡೀಸೆಲ್- 62.16 ರೂ. 

ವಾಣಿಜ್ಯ ರಾಜಧಾನಿ ಮುಂಬೈ- 
ಪೆಟ್ರೋಲ್- 73.95  ರೂ. 
ಡೀಸೆಲ್- 65.05 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್- 70.43 ರೂ. 
ಡೀಸೆಲ್- 63.93 ರೂ. 

ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್‌- 70.85 ರೂ. 
ಡೀಸೆಲ್‌- 65.62 ರೂ. 

ರಾಜ್ಯ ರಾಜಧಾನಿ ಬೆಂಗಳೂರು- 
ಪೆಟ್ರೋಲ್- .70.53 ರೂ.
ಡೀಸೆಲ್- 62.80 ರೂ. 

ಅಂತಾರಾಷ್ಟ್ರೀಯ ಕಚ್ಛಾ ತೈಲ ದರ ಇಳಿಕೆಯೇ ತೈಲದರಗಳ ಇಳಿಕೆಗೆ ಕಾರಣ ಎನ್ನಲಾಗುತ್ತಿದ್ದು, ಮುಂದಿನ ದಿನಗಳ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಮಂದಹಾಸದಲ್ಲಿದ್ದ ವಾಹನ ಸವಾರರಿಗೆ ಶಾಕ್ ಕೊಟ್ಟ ಕುಮಾರಸ್ವಾಮಿ ಸರ್ಕಾರ