ರೆಪೋ ದರ ಏರಿಕೆ: ವೈಯಕ್ತಿಕ ಸಾಲದ ಇಎಂಐ ಎಷ್ಟು ಹೆಚ್ಚುತ್ತೆ? ಇಲ್ಲಿದೆ ಮಾಹಿತಿ

ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳಿಂದ ಸಾಲ ಪಡೆದವರ ಮೇಲಿನ ಇಎಂಐ ಹೊರೆ ಹೆಚ್ಚಿದೆ. ಹಾಗಾದ್ರೆ ವೈಯಕ್ತಿಕ ಸಾಲ ಪಡೆದವರ ಇಎಂಐಯಲ್ಲಿ ಎಷ್ಟು ಹೆಚ್ಚಳವಾಗುತ್ತದೆ? ಇಲ್ಲಿದೆ ಮಾಹಿತಿ. 
 

Personal loan EMIs Borrowers to pay Rs 518 more monthly EMI on Rs 5 lakh loan after repo rate hike check calculations

Business Desk:ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಫೆ.8ರಂದು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದ್ದಾರೆ. ಇದರಿಂದ ಪ್ರಸ್ತುತ ರೆಪೋ ದರ ಶೇ. 6.50ಕ್ಕೆ ಏರಿಕೆಯಾಗಿದೆ. ರೆಪೋ ದರ ಏರಿಕೆ ಬೆನ್ನಲ್ಲೇ ಬ್ಯಾಂಕ್ ಗಳು, ಸಾಲದಾತ ಸಂಸ್ಥೆಗಳು, ಗೃಹ ಹಣಕಾಸು ಕಂಪನಿಗಳು ಹಾಗೂ ಸಾಲ ನೀಡುವ ಇತರ ಸಂಸ್ಥೆಗಳಿಗೆ ಎಲ್ಲ ವಿಧದ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಸಾಲಗಳ ಮೇಲಿನ ಮಾಸಿಕ ಇಎಂಐ ಮೊತ್ತದಲ್ಲಿ ಕೂಡ ಹೆಚ್ಚಳವಾಗಲಿದೆ. ಇದು ಸಾಲಗಾರರ ಮೇಲಿನ ಇಎಂಐ ಹೊರೆಯನ್ನು ಹೆಚ್ಚಿಸಲಿದೆ. ತಿಂಗಳ ಖರ್ಚಿನಲ್ಲಿ ಏರಿಕೆಯಾಗುವ ಕಾರಣ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಕೂಡ ಇದು ಪರಿಣಾಮ ಬೀರಲಿದೆ. ಗೃಹಸಾಲಗಳ ಜೊತೆಗೆ ವೈಯಕ್ತಿಕ ಸಾಲಗಳನ್ನು ಪಡೆದಿರೋರು ಕೂಡ ಬಡ್ಡಿದರ ಹೆಚ್ಚಳದಿಂದ ಜಾಸ್ತಿ ಮೊತ್ತದ ಇಎಂಐ ಪಾವತಿಸಬೇಕಾಗುತ್ತದೆ. ವೈಯಕ್ತಿಕ ಸಾಲ ಗೃಹಸಾಲದಷ್ಟು ದೀರ್ಘಾವಧಿಯದ್ದಾಗಿರದ ಕಾರಣ ಇಎಂಐ ಹೊರೆ ತುಸು ಹೆಚ್ಚೇ ಆಗಲಿದೆ. ಹಾಗಾದ್ರೆ ರೆಪೋ ದರ ಹೆಚ್ಚಳ ವೈಯಕ್ತಿಕ ಸಾಲ ಪಡೆದವರ ಮಾಸಿಕ ಇಎಂಐ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ. 

ವೈಯಕ್ತಿಕ ಸಾಲದ ಮೇಲೆ ಹೇಗೆ ಪರಿಣಾಮ ಬೀರಲಿದೆ?
ಬ್ಯಾಂಕ್ ಬಡ್ಡಿದರದಲ್ಲಿ ಹೆಚ್ಚಳ ಮಾಡಿದಾಗ ಅದು ಠೇವಣಿದಾರರು ಹಾಗೂ ಸಾಲ ಪಡೆದವರ ಮೇಲೆ ನೇರ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿದರದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಶೇ.2ರಷ್ಟು ಬಡ್ಡಿದರ ಹೆಚ್ಚಳವಾಗಿದೆ. ಇದು ಸಾಲಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ ಕೂಡ. ಇನ್ನು ಹೊಸದಾಗಿ ಸಾಲ ಪಡೆಯೋರು ಕೂಡ ಯೋಚಿಸುವಂತೆ ಮಾಡಿದೆ. ಇನ್ನು ಸಾಲ ಪಡೆದವರು ಬಡ್ಡಿದರ ಹೆಚ್ಚಳದ ಹೊರತಾಗಿ ಕೂಡ ಈ ಮೊದಲಿನಷ್ಟೇ ಮೊತ್ತದ ಇಎಂಐ ಪಾವತಿಸುವ ಮೂಲಕ ಸದ್ಯ ನೆಮ್ಮದಿ ಕಂಡುಕೊಂಡಿರಬಹುದು. ಆದರೆ, ಅವರ ಸಾಲದ ಮರುಪಾವತಿ ಅವಧಿ ವಿಸ್ತರಣೆಗೊಂಡಿರುತ್ತದೆ. ನಿಮ್ಮ ಸಾಲದ ಮರುಪಾವತಿ ಅವಧಿ ವಿಸ್ತರಣೆಗೊಂಡಂತೆ ನಿಮ್ಮ ವಾರ್ಷಿಕ ಬಡ್ಡಿ ಪಾವತಿ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಇಎಂಐ ಮೊತ್ತದಲ್ಲೇ ಹೆಚ್ಚಳ ಮಾಡಿ ಪಾವತಿಸೋದು ಉತ್ತಮ. ಸಾಲದ ಅವಧಿ ಹೆಚ್ಚಳದಲ್ಲಿ ಸಾಲಗಾರರ ವಯಸ್ಸು ಹಾಗೂ ಸಾಲದ ಮರುಪಾವತಿ ಸಾಮರ್ಥ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ. 

ಈಗಷ್ಟೇ ಉದ್ಯೋಗ ಬದಲಾಯಿಸಿದ್ದೀರಾ? ಹೊಸ ಕಂಪನಿಗೆ ಇಪಿಎಫ್ ಖಾತೆ ವರ್ಗಾಯಿಸಲು ಹೀಗೆ ಮಾಡಿ

ಉದಾಹರಣೆಗೆ ಬ್ಯಾಂಕ್ ಬಡ್ಡಿದರವನ್ನು ಶೇ.15ಕ್ಕೆ ಹೆಚ್ಚಳ ಮಾಡಿದ್ರೆ, 5 ಲಕ್ಷ ರೂ. ವೈಯಕ್ತಿಕ ಸಾಲವನ್ನು (Personal loan) ಶೇ.13 ಬಡ್ಡಿದರದಲ್ಲಿ (Interest rate) 5 ವರ್ಷಗಳ ಅವಧಿಗೆ ಪಡೆದಿರೋರಿಗೆ ತಿಂಗಳ ಇಎಂಐಯಲ್ಲಿ (EMI)  518ರೂ. ಹೆಚ್ಚಳವಾಗುತ್ತದೆ. ಇದರಿಂದ ಆತನ ತಿಂಗಳ ಇಎಂಐ 11,377ರೂ.ನಿಂದ 11,895ರೂ.ಗೆ ಏರಿಕೆಯಾಗುತ್ತದೆ. 

ಬ್ಯಾಂಕುಗಳು ಏಕೆ ಬಡ್ಡಿದರ ಹೆಚ್ಚಿಸುತ್ತವೆ?
ರೆಪೋ ದರವೆಂದ್ರೆ (Repo rate) ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕುಗಳು ಪಡೆಯುವ ಸಾಲದ ಮೇಲಿನ ಬಡ್ಡಿ ಕೂಡ ಏರಿಕೆಯಾಗುತ್ತದೆ. ಬ್ಯಾಂಕುಗಳು ತಮ್ಮ ಮೇಲೆ ಹೆಚ್ಚಿದ  ಹೊರೆಯನ್ನು ತಾವು ನೀಡುವ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ (Customers) ವರ್ಗಾಯಿಸುತ್ತವೆ. ಪರಿಣಾಮ ಬ್ಯಾಂಕಿನಿಂದ ಗೃಹ (home) ಹಾಗೂ ವೈಯಕ್ತಿಕ ಸಾಲ (personal loan) ಪಡೆದವರ ಮಾಸಿಕ ಇಎಂಐ  (EMIs) ಮೊತ್ತ ಹೆಚ್ಚಳವಾಗುತ್ತದೆ. 

ರಿಲ್ಯಾಕ್ಸ್ ಆಗಲು ಸ್ಟಾರ್ ಬಕ್ಸ್ ಕಾಫಿ ಕುಡಿದ ದಂಪತಿ,ಬಿಲ್ ನೋಡಿ ಶಾಕ್!

 

Latest Videos
Follow Us:
Download App:
  • android
  • ios