ಈಗಷ್ಟೇ ಉದ್ಯೋಗ ಬದಲಾಯಿಸಿದ್ದೀರಾ? ಹೊಸ ಕಂಪನಿಗೆ ಇಪಿಎಫ್ ಖಾತೆ ವರ್ಗಾಯಿಸಲು ಹೀಗೆ ಮಾಡಿ

ಉದ್ಯೋಗ ಬದಲಾಯಿಸಿದ ಸಂದರ್ಭದಲ್ಲಿ ಇಪಿಎಫ್ ಖಾತೆಯನ್ನು ಹಳೆಯ ಸಂಸ್ಥೆಯಿಂದ ಹೊಸದಕ್ಕೆ ವರ್ಗಾಯಿಸೋದು ಅಗತ್ಯ. ಈ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲೇ ಸರಳವಾಗಿ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 
 

Just Changed Job Know These Steps To Transfer EPF Account From Old To The New Employer

Business Desk:ನೌಕರರ ಭವಿಷ್ಯ ನಿಧಿ (ಇಪಿಎಫ್) ಒಂದು ಸಾಮಾಜಿಕ ಭದ್ರತೆ ಕಾರ್ಯಕ್ರಮವಾಗಿದ್ದು, ದೇಶದ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿನ ಉದ್ಯೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ನೌಕರರ ಭವಿಷ್ಯ ನಿಧಿಯನ್ನು ನಿವೃತ್ತಿ ಬದುಕಿಗೆ ಸಂಬಂಧಿಸಿದ ಉಳಿತಾಯ ಅಥವಾ ಹೂಡಿಕೆ ಖಾತೆ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತದ ಹಣವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಇನ್ನು ಒಬ್ಬ ನೌಕರ ಉದ್ಯೋಗ ಬದಲಾಯಿಸುವ ಸಮಯದಲ್ಲಿ ಇಪಿಎಫ್ ಖಾತೆಯನ್ನು ಹೊಸ ಸಂಸ್ಥೆಗೆ ವರ್ಗಾವಣೆ ಮಾಡುವುದು ಅಗತ್ಯ. ಆನ್ ಲೈನ್ ನಲ್ಲಿ ಪಿಎಫ್ ಖಾತೆ ವರ್ಗಾವಣೆ ಮಾಡಲು ಹಳೆಯ ಹಾಗೂ ಹೊಸ ಸಂಸ್ಥೆಗಳು ಸದಸ್ಯರ ಇ-ಸೇವಾ ಪೋರ್ಟಲ್ ನಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವುದು ಅಗತ್ಯ. ಒಂದು ವೇಳೆ ಹೀಗೆ ಆಗದಿದ್ರೆ, ನೌಕರ ಅರ್ಜಿ ನಮೂನೆ 13 ಅನ್ನು ಭರ್ತಿ ಮಾಡಿ ಮಾನವ ಸಂಪನ್ಮೂಲ (ಎಚ್ ಆರ್) ವಿಭಾಗಕ್ಕೆ ಸಲ್ಲಿಕೆ ಮಾಡಬೇಕು. ಇಪಿಎಫ್ ಖಾತೆ ವರ್ಗಾವಣೆಯನ್ನು ಆನ್ ಲೈನ್ ನಲ್ಲಿ ಮಾಡೋದು ಹೇಗೆ? ಇಲ್ಲದೆ ಮಾಹಿತಿ.

ಆನ್ ಲೈನ್ ನಲ್ಲಿ ಇಪಿಎಫ್ ಖಾತೆ ವರ್ಗಾವಣೆ
*ಅಧಿಕೃತ ಸದಸ್ಯರ ಸೇವಾ ಪೋರ್ಟಲ್ https://unifiedportal-mem.epfindia.gov.in/memberinterface/ ಭೇಟಿ ನೀಡಿ.
*ನಿಮ್ಮ ಯುಎಎನ್ (UAN) ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ.
*'Online Services'ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಒಬ್ಬ ಸದಸ್ಯ, ಒಂದು ಇಪಿಎಫ್ ಖಾತೆ ಆಯ್ಕೆ ಮಾಡಿ (Transfer Request).

ಉತ್ತಮ ರಿಟರ್ನ್ಸ್ ನೀಡುವ ಅಂಚೆ ಇಲಾಖೆಯ 5 ಯೋಜನೆಗಳು ಇವೇ ನೋಡಿ

*ಹೊಸ ಪುಟ ತೆರೆದುಕೊಳ್ಳುತ್ತದೆ. ನೀವು ಹಣವನ್ನು ವರ್ಗಾವಣೆ ಮಾಡಲು ಬಯಸುವ ಹೊಸ ಇಪಿಎಫ್ ಖಾತೆ ಮಾಹಿತಿ ಭರ್ತಿ ಮಾಡಿ. ನಿಮ್ಮ ಹೊಸ ಇಪಿಎಫ್ ಖಾತೆ ಸಂಖ್ಯೆಯನ್ನು ನಿಮ್ಮ ವೇತನ ಸ್ಲಿಪ್ ನಲ್ಲಿ ಅಥವಾ ಹೊಸ ಉದ್ಯೋಗದಾತ ಸಂಸ್ಥೆಯ ಇಪಿಎಫ್ ಸ್ಟೇಟ್ಮೆಂಟ್ ನಲ್ಲಿ ನೋಡಬಹುದು. 
*ಈಗ ನಿಮ್ಮ ಇಪಿಎಫ್ ಖಾತೆ ಆನ್ ಲೈನ್ ವರ್ಗಾವಣೆಗೆ ದೃಢೀಕರಣವನ್ನು (attestation) ನಿಮ್ಮ ಪ್ರಸಕ್ತ ಉದ್ಯೋಗದಾತ ಸಂಸ್ಥೆ ಮಾಡಬೇಕೇ ಅಥವಾ ಈ ಹಿಂದಿನ ಉದ್ಯೋಗದಾತ ಸಂಸ್ಥೆ ಮಾಡಬೇಕೇ ಎಂಬುದನ್ನು ಆಯ್ಕೆ ಮಾಡಿ. ಇಲ್ಲಿ ಆಯ್ಕೆ ನಮೂದಿಸುವ ಮುನ್ನ ಅವರೊಂದಿಗೆ ಈ ಕುರಿತು ಮಾತನಾಡಿ.
*ಒಂದು ವೇಳೆ ಎರಡೂ ಸಂಸ್ಥೆ ಅಥವಾ ಕಂಪನಿಯ ಯುಎಎನ್ (UAN) ಒಂದೇ ಆಗಿದ್ದರೆ, ಈ ಹಿಂದಿನ ಸಂಸ್ಥೆಯ ಇಪಿಎಫ್ ಖಾತೆ ಸಂಖ್ಯೆ ನಮೂದಿಸಿ. ಒಂದು ವೇಳೆ ಎರಡೂ ಸಂಸ್ಥೆಗಳ ಯುಎಎನ್ ಒಂದೇ ಆಗಿರದಿದ್ರೆ ಹಳೆಯ ಸಂಸ್ಥೆಯ ಯುಎಎನ್ ನಮೂದಿಸಿ.
*ಈಗ 'Get Details'ಮೇಲೆ ಕ್ಲಿಕ್ ಮಾಡಿ. ನಿಮ್ಮ ಇಪಿಎಫ್ ಖಾತೆಗೆ ಸಂಬಂಧಿಸಿದ ಮಾಹಿತಿ ಕಾಣಿಸುತ್ತದೆ. ಹಣ ವರ್ಗಾವಣೆ ಯಾವ ಖಾತೆಯಿಂದ ಆಗಬೇಕು ಅದನ್ನು ಆಯ್ಕೆ ಮಾಡಿ. 
*'Get OTP'ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಮನವಿಯನ್ನು ಪರಿಶೀಲಿಸಿದ್ರೆ  ನಿಮ್ಮ ಇಪಿಎಫ್ ಖಾತೆ ವರ್ಗಾವಣೆ ಮನವಿ ಸಲ್ಲಿಕೆಯಾಗುತ್ತದೆ.

ಇನ್ಮುಂದೆ ನಾಣ್ಯಗಳು ಬೇಕಾದ್ರೆ ಬ್ಯಾಂಕಿಗೆ ಹೋಗ್ಬೇಕಾಗಿಲ್ಲ, ವೆಂಡಿಂಗ್ ಮಷಿನ್ ನಲ್ಲೇ ಪಡೆಯಬಹುದು!

ನಿಮ್ಮ ಇಪಿಎಫ್ ಖಾತೆ ವರ್ಗಾವಣೆ ಮನವಿ ಸಲ್ಲಿಕೆಯಾದ 10 ದಿನಗಳೊಳಗೆ ನೀವು ಸ್ವ ದೃಢೀಕರಣ ಮಾಡಿರುವ ಇಪಿಎಫ್ ವರ್ಗಾವಣೆ ಮನವಿಯನ್ನು ನೀವು ಆಯ್ಕೆ ಮಾಡಿರುವ ಕಂಪನಿಗೆ ಸಲ್ಲಿಕೆ ಮಾಡಬೇಕು.ಇಪಿಎಫ್ ಖಾತೆ ವರ್ಗಾವಣೆ ಮನವಿ ಪೂರ್ಣಗೊಳ್ಳಲು ಸಾಮಾನ್ಯವಾಗಿ  30-45 ದಿನಗಳು ಬೇಕಾಗುತ್ತವೆ. ನಿಮಗೆ ನೀಡಿರುವ ರೆಫರೆನ್ಸ್ ಸಂಖ್ಯೆ ಬಳಸಿ ಇಪಿಎಫ್ ಒ ಪೋರ್ಟಲ್ ನಲ್ಲಿ ನಿಮ್ಮ ಮನವಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು.  
 

Latest Videos
Follow Us:
Download App:
  • android
  • ios