ಐಐಟಿ ಬಾಂಬೆಯ ವಿದ್ಯಾರ್ಥಿ ಬರೋಬ್ಬರಿ 100 ಕೋಟಿ ರೂಪಾಯಿ ವಾರ್ಷಿಕ ಸ್ಯಾಲರಿ ಪಡೆದು ಇತಿಹಾಸ ನಿರ್ಮಿಸಿದ್ದರು. ಆದರೆ ಒಂದೇ ವರ್ಷಕ್ಕೆ ಅಮಾನತುಗೊಂಡಿದ್ದರು. ಇದೀಗ ಹೊಸ ಕಂಪನಿ ಕಟ್ಟಿ ಬರೋಬ್ಬರಿ 19,000 ಕೋಟಿ ರೂಪಾಯಿ ಒಡಯಾಗಿದ್ದಾರೆ.

ಮುಂಬೈ (ಜು.17) ಟ್ವಿಟರ್ ಸಂಸ್ಥೆಯನ್ನು ಎಲನ್ ಮಸ್ಕ್ ಖರೀದಿಸಿದ ಬಳಿಕ ಎಕ್ಸ್ ಆಗಿ ಬದಲಾಗಿತ್ತು. ಖರೀದಿ ಬಳಿಕ ಹಲವು ಬದಲಾವಣೆ ಮಾಡಲಾಗಿತ್ತು. ಈ ವೇಳೆ ಟ್ವಿಟರ್ ಸಿಇಒ ಆಗಿದ್ದ ಐಐಟಿ ಬಾಂಬೆಯ ಪರಾಗ್ ಅಗರ್ವಾಲ್ ಅವರನ್ನು ಅಮಾನತು ಮಾಡಲಾಗಿತ್ತು. ಐಐಟಿ ಬಾಂಬೆಯಿಂದ ಅಮೆರಿಕದಲ್ಲಿ ಉನ್ನತ ವ್ಯಾಸಾಂಗ ಮಾಡಿದ ಪರಾಗ್ 2011ರಲ್ಲಿ ಟ್ವಿಟರ್ ಎಂಜಿನೀಯರ್ ಆಗಿ ಸೇರಿಕೊಂಡಿದ್ದರು. ಬಳಿಕ ಪರಾಗ್ ಟ್ವಿಟರ್ ಸಿಇಒ ಒಗಿ ಬಡ್ತಿ ಪಡೆದಿದ್ದರು. ಆದರೆ ಈ ಹುದ್ದೆ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಸಿಇಒ ಆಗಿ ಬಡ್ತಿ ಪಡೆದಾ ಪರಾಗ್ ಅಗರ್ವಾಲ್ ಒಟ್ಟು ಸ್ಯಾಲರಿ ಪ್ಯಾಕೇಜ್ ವರ್ಷಕ್ಕೆ 100 ಕೋಟಿ ರೂಪಾಯಿ. ಎಲಾನ್ ಮಸ್ಕ್ ಟ್ವಿಟರ್ ಖರೀದಿ ಬಳಿಕ ಅಮಾನತುಗೊಂಡ ಪರಾಗ್ ಅಗರ್ವಾಲ್ ಹೊಸ ಕಂಪನಿ ಕಟ್ಟಿ ಇದೀಗ 19,000 ಕೋಟಿ ರೂಪಾಯಿ ಒಡೆಯನಾಗಿದ್ದಾರೆ.

ಅಕ್ಟೋಬರ್ 2022ರಲ್ಲಿ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಖರೀದಿ ಮಾಡಿದ್ದರು. ಬಳಿಕ ಮೊದಲನೇ ನಿರ್ಧಾರವೇ ಸಿಇಒ ಪರಾಗ್ ಅಗರ್ವಾಲ್ ಅಮಾನತು. ಇದರ ಜೊತೆಗೆ ಕೆಲ ಹಿರಿಯ ಎಂಜಿನೀಯರ್ ಸರಿದಂತೆ ಪ್ರಮುಖ ಸ್ಥಾನದಲ್ಲಿದ್ದ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇತ್ತ 100 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಪಡೆಯುತ್ತಿದ್ದ ಪರಾಗ್ ಅಗರ್ವಾಲ್ ಅನಿವಾರ್ಯವಾಗಿ ಟ್ವಿಟರ್‌ನಿಂದ ಹೊರಬರಬೇಕಾಯಿತು.

ವೆಬ್ ಸಿಸ್ಟಮ್ ಸ್ಟಾರ್ಟ್ಅಪ್ ಆರಂಭಿಸಿದ ಪರಾಗ್

ಟ್ವಿಟರ್ ಸಂಸ್ಥೆಯಲ್ಲಿ ಎಂಜನೀಯರ್ ಆಗಿ ಬಳಿಕ ಸಿಇಒ ಹುದ್ದೆಗೇರಿದ ಪರಾಗ್ ಅಗರ್ವಾಲ್ ಅತ್ಯಂತ ಪ್ರತಿಭಾನ್ವಿತ. ಪರಾಗ್ ಅಗರ್ವಾಲ್ ಸುಮ್ಮನೆ ಕೂರಗಲ್ಲಿಲ ವೆಬ್ ಸಿಸ್ಟಮ್ ಅನ್ನೋ ಎಐ ಸ್ಟಾರ್ಟ್ಅಪ್ ಕಂಪನಿ ಆರಂಭಿಸಿದ್ದರು. ಎಐ ಎಜೆಂಟ್ ಸರ್ಜ್ ಹಾಗೂ ಇಂಟರಾಕ್ಷನ್ ಕುರಿತು ಸೇವೆ ನೀಡುವ ಈ ಕಂಪನಿ ಹೊಸ ಕ್ರಾಂತಿ ಮಾಡಿತ್ತು. ಕಾರಣ ಚಾಟ್‌ಬಾಟ್ ಬದಲು ವೆಬ್ ಲೈವ್ ಬ್ರೌಸ್ ಮಾಡುವ ಎಐ ಸಿಸ್ಟಮ್ ಸೇರಿದಂತೆ ಎಐ ಆಧಾರಿತ ಅತ್ಯಂತ ಪರಿಣಾಮ ಟಾಸ್ಕ್ ನಿರ್ವಹಣೆ ಟೂಲ್ ಅಭಿವೃದ್ಧಿ ಮಾಡಿ ಎಲ್ಲಾ ಎಐ ಸ್ಟಾರ್ಟ್ಅಪ್ ಗಿಂತ ಭಿನ್ನವಾದ ಕಂಪನಿ ಕಟ್ಟಿದರು.

19,000 ಕೋಟಿ ರೂಪಾಯಿ ಮೌಲ್ಯದ ಕಂಪನಿ

2022ರ ಅಂತ್ಯದಲ್ಲಿ ವೆಬ್ ಸಿಸ್ಟಮ್ ಕಂಪನಿ ಆರಂಭಿಸಲು ಪರಾಗ್ ಪ್ಲಾನ್ ಮಾಡಿ ಕೆಲಸ ಆರಂಭಿಸಿದ್ದರು. 2023ರಲ್ಲಿ ಕಂಪನಿ ಕಾರ್ಯಾರಂಭಗೊಂಡಿತ್ತು. ಕೇವಲ ಮೂರೇ ವರ್ಷದಲ್ಲಿ ಪರಾಗ್ ಅಗರ್ವಾಲ್ ವೆಬ್ ಸಿಸ್ಟಮ್ ಮೌಲ್ಯ 19 ಸಾವಿರ ಕೋಟಿ ರೂಪಾಯಿ. ಇತ್ತೀಚೆಗಷ್ಟೆ ಸೀರಿಸ್ ಫಂಡಿಂಗ್ ರೌಂಡ್‌ನಲ್ಲಿ 100 ಮಿಲಿಯಿನ್ ಅಮೆರಿಕನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ. ಈ ಮೂಲಕ ಸ್ಟಾರ್ಟ್ಅಪ್ ಒಟ್ಟು ಫಂಡಿಂಗ್ ಮೊತ್ತ 230 ಬಿಲಿಯನ್ ಡಾಲರ್ ತಲುಪಿದೆ.

ಗೂಗಲ್ ಜೊತೆ ಪಾರ್ಟ್ನರ್‌ಶಿಪ್

ವೆಬ್ ಸಿಸ್ಟಮ್ ಕಂಪನಿ ಇತ್ತೀಚೆಗೆ ಗೂಗಲ್ ಜೊತೆ ಪಾರ್ಟ್ನರ್‌ಶಿಪ್ ಮಾಡಿಕೊಂಡಿದೆ. ಹಲವು ಪ್ರತಿಷ್ಠಿತ ಕಂಪನಿಗಳಿಗೆ ವೆಬ್ ಸಿಸ್ಟಮ್ ಸೇವೆ ನೀಡುತ್ತಿದೆ. ಪರಾಗ್ ಅಗರ್ವಾಲ್ ಇದೀಗ ಅತೀ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಎಲಾನ್ ಮಸ್ಕ್ ಅಮಾನತು ಬಳಿಕ ಇದೀಗ ಸ್ಯಾಲರಿ ಪಡೆಯುವ ಉದ್ಯೋಗಿಯಾಗದೆ ಸಾವಿರಾರು ಉದ್ಯೋಗಿಗಳಿ ವೇತನ ನೀಡುವ ಉದ್ಯಮಿಯಾಗಿ ಬೆಳೆದಿದ್ದಾರೆ.