ಒಲ್ಲದ ಮನಸ್ಸಿಂದ ಖರೀದಿಸಿದ ಪೇಂಟಿಂಗ್ ಕೋಟಿಗೆ ಮಾರಾಟ!
ಸ್ಥಳೀಯ ಅಂಗಡಿಯಲ್ಲಿ ಒಲ್ಲದ ಮನಸ್ಸಿನಿಂದ್ಲೇ ಆಕೆ ಪೇಟಿಂಗ್ ಖರೀದಿ ಮಾಡಿದ್ದಳು. ಎಲ್ಲೋ ಮನೆಯಲ್ಲಿ ಬಿದ್ದಿದ್ದ ಪೇಟಿಂಗ್ ಫೋಟೋವನ್ನು ಫೇಸ್ಬುಕ್ ಗೆ ಪೋಸ್ಟ್ ಮಾಡಿದ್ದಳು. ಇದೇ ಆಕೆ ಅದೃಷ್ಟ ಬದಲಿಸಿತು. ಮುನ್ನೂರರ ಪೇಟಿಂಗ್ ಕೋಟಿ ತಂದುಕೊಡ್ತು.

ಕೆಲವರ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತೆ. ಏಕಾಏಕಿ ಪ್ರಸಿದ್ಧಿ ಪಡೆಯುತ್ತಾರೆ ಇಲ್ಲವೆ ಶ್ರೀಮಂತರಾಗ್ತಾರೆ. ಲಾಟರಿ ಹೊಡೆದು ಇಲ್ಲವೆ ಕೈನಲ್ಲಿರುವ ಅಮೂಲ್ಯ ವಸ್ತುವನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ಹಣ ಗಳಿಸುವವರಿದ್ದಾರೆ. ಈ ಮಹಿಳೆ ಕೂಡ ಇದಕ್ಕೆ ಉತ್ತಮ ಉದಾಹರಣೆ. ಮನೆಯ ಮೂಲೆಯಲ್ಲಿದ್ದ ಒಂದು ಪೇಟಿಂಗ್ ಆಕೆ ಅದೃಷ್ಟ ಬದಲಿಸಿದ. ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಪೇಟಿಂಗನ್ನು ಆಕೆ ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಅಂಗಡಿಯೊಂದರಲ್ಲಿ ಯಾವುದೇ ಮಾಹಿತಿ ಇಲ್ಲದೆ ಮಹಿಳೆ ಈ ಪೇಟಿಂಗ್ ಖರೀದಿ ಮಾಡಿದ್ದಳು. ಅನೇಕ ದಿನಗಳ ನಂತ್ರ ಈ ಪೇಟಿಂಗ್ ಮಹತ್ವವೇನು ಎಂಬುದು ತಿಳಿದಿದೆ. ತಕ್ಷಣ ಮಹಿಳೆ ಪೇಟಿಂಗ್ ಹರಾಜಿಗೆ ಮುಂದಾಗಿದ್ದಾಳೆ. ಅದೇ ಪೇಟಿಂಗ್ ಈಗ ಮಹಿಳೆಯನ್ನು ಶ್ರೀಮಂತೆಯನ್ನಾಗಿಸಿದೆ. ಅಷ್ಟಕ್ಕೂ ಆ ಪೇಟಿಂಗ್ ಯಾವುದು, ಅದ್ರ ವಿಶೇಷವೇನು ಹಾಗೇ ಅದು ಮಾರಾಟವಾಗಿದ್ದು ಎಷ್ಟು ರೂಪಾಯಿಗೆ ಎಂಬೆಲ್ಲ ವಿವರ ಇಲ್ಲಿದೆ.
1.58 ಕೋಟಿಗೆ ಮಾರಾಟವಾದ ಪೇಟಿಂಗ್ (Painting) : ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ನಗರದಲ್ಲಿ ಪೇಟಿಂಗ್ ಹರಾಜು ನಡೆದಿದೆ. ಮಹಿಳೆ ಈ ಪೇಟಿಂಗನ್ನು ಕೇವಲ 320 ರೂಪಾಯಿಗೆ ಖರೀದಿ ಮಾಡಿದ್ದಳು. ನಂತ್ರ ಅದನ್ನು ತಂದು ಮನೆಯ ಮೂಲೆಯಲ್ಲಿ ನೇತು ಹಾಕಿದ್ದಳು. ಆ ಪೇಟಿಂಗ್ ಬಗ್ಗೆ ಯಾರೂ ಹೆಚ್ಚು ಗಮನ ಹರಿಸಿರಲಿಲ್ಲ. ಅದು ಮನೆಯಲ್ಲಿ ಪ್ರಯೋಜನಕ್ಕೆ ಬರದ ವಸ್ತುಗಳಲ್ಲಿ ಒಂದಾಗಿತ್ತು. ಆದ್ರೀಗ ಅದೇ ಮಹಿಳೆಯ ಅದೃಷ್ಟ ಬದಲಿಸಿದೆ.
ಸಲೂನ್ ಇಟ್ಕೊಂಡಿದ್ದ ವ್ಯಕ್ತಿಯೀಗ ಬಿಲಿಯನೇರ್, ರೋಲ್ಸ್ ರಾಯ್ಸ್, ಬೆಂಜ್ ಸೇರಿ 400 ಲಕ್ಸುರಿಯಸ್ ಕಾರುಗಳ ಒಡೆಯ!
ಫೇಸ್ಬುಕ್ (Facebook ) ನಲ್ಲಿ ಫೋಟೋ ಪೋಸ್ಟ್ ಮಾಡುವವರೆಗೂ ಮಹಿಳೆಗೆ ಈ ಪೇಟಿಂಗ್ ವಿಶೇಷತೆ ತಿಳಿದಿರಲಿಲ್ಲ. ಮಹಿಳೆ ಫೇಸ್ಬುಕ್ ನಲ್ಲಿ ಒಮ್ಮೆ ಈ ಪೇಟಿಂಗ್ ಫೋಟೋ ಪೋಸ್ಟ್ ಮಾಡ್ತಿದ್ದಂತೆ ಫೋಟೋದ ವಿಶೇಷತೆ ತಿಳಿಯಿತು. ಜನರು ಇದ್ರ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದರು. ನಂತ್ರ ಈ ಫೋಟೋ ಹರಾಜು (Auction) ಹಾಕುವ ನಿರ್ಧಾರಕ್ಕೆ ಮಹಿಳೆ ಬಂದಿದ್ದಳು. 320 ರೂಪಾಯಿಗೆ ಖರೀದಿ ಮಾಡಿದ್ದ ಪೇಟಿಂಗನ್ನು 1. 58 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾಳೆ.
ಪೇಟಿಂಗ್ ವಿಶೇಷತೆ ಏನು? : ಕಲಾವಿದ ಎನ್. ಸಿ. ವೆತ್ ಕೈನಲ್ಲಿ ಅರಳಿದ ಚಿತ್ರ ಇದಾಗಿದೆ. ಎನ್. ಸಿ. ವೆತ್ ಪೆನ್ಸಿಲ್ವೇನಿಯಾದ ನಿವಾಸಿಯಾಗಿದ್ದರು. ವೆತ್ ಬಿಡಿಸಿದ್ದ ಈ ಚಿತ್ರ ಬಹಳ ವರ್ಷಗಳ ಹಿಂದೆಯೇ ಕಳೆದು ಹೋಗಿತ್ತು. ಮಹಿಳೆ ಆ ಪೇಂಟಿಂಗ್ ಅನ್ನು ಸ್ಥಳೀಯ ಅಂಗಡಿಯಿಂದ ಕೇವಲ 4 ಡಾಲರ್ ಪಾವತಿಸಿ ಖರೀದಿಸಿದ್ದಳು. ಆದರೆ ಹರಾಜಿನಲ್ಲಿ 1,91,000 ಡಾಲರ್ ಮೊತ್ತ ಪಡೆದಿದ್ದಾಳೆ.
ಈ ಚಿತ್ರಕ್ಕೆ ರಮೋನಾ ಎಂದು ಹೆಸರಿಸಲಾಗಿತ್ತು. ಇದನ್ನು ಎನ್. ಸಿ. ವೆತ್ 1939 ರಲ್ಲಿ ರಚಿಸಿದ್ದರು. ಹೆಲೆನ್ ಹಂಟ್ ಜಾಕ್ಸನ್ ರವೋನಾ ಹೆಸರಿನ ಪುಸ್ತಕ ಬರೆದಿದ್ದಾರೆ. ಅದನ್ನು ಈ ಚಿತ್ರ ಆಧರಿಸಿದೆ.
ಸೋಪ್ ಪ್ಯಾಕ್ ಮೇಲೆ ಮಹಿಳೆ ಫೋಟೋ: ಹೆಣ್ಣು ಮಕ್ಕಳು ಮಾತ್ರ ಸ್ನಾನ ಮಾಡೋದಾ?
ಕಳೆದು ಹೋಗಿತ್ತು ಈ ಚಿತ್ರ : ಆಕ್ಷನ್ ಹೌಸ್ ಬೋನ್‌ಹಾಮ್ಸ್ ಸ್ಕಿನ್ನರ್‌ನಿಂದ ಚಿತ್ರಕಲೆಯನ್ನು ಹರಾಜು ಮಾಡಲಾಗಿದೆ. ವೆತ್ ಅವರ ಈ ವರ್ಣಚಿತ್ರವು ಬಹಳ ಹಿಂದೆಯೇ ಕಳೆದುಹೋಗಿತ್ತು. ಬಹಳ ದಿನಗಳ ಕಾಲ ಇದು ಸಿಗದ ಕಾರಣ ಇದು ನಾಶವಾಗಿದೆ ಎಂದೇ ಜನರು ಭಾವಿಸಿದ್ದರು. ಈ ಪೇಟಿಂಗ್ ಹುಡುಕಾಟದ ಪ್ರಯತ್ನ ಸಾಕಷ್ಟು ನಡೆದಿತ್ತು. ಆದ್ರೆ ಪೇಟಿಂಗ್ ಕೈಗೆ ಸಿಕ್ಕಿರಲಿಲ್ಲ. ಈ ಮಧ್ಯೆ ಪೇಂಟಿಂಗ್ ನ್ಯೂ ಹ್ಯಾಂಪ್‌ಶೈರ್‌ನ ಮಹಿಳೆಯ ಒಡೆತನದಲ್ಲಿದೆ ಎಂಬುದು ಪತ್ತೆಯಾಯ್ತು. ನಂತ್ರ ಆಕ್ಷನ್ ಹೌಸ್ ಬೋನ್‌ಹಾಮ್ಸ್ ದನ್ನು ಖರೀದಿಸಲು ನಿರ್ಧರಿಸಿತು.