comscore

Union budget 2025 live updates kannada nirmala sitharaman key announcements For karnataka bengaluru san

Budget 2025 Live Updates: ವಿತ್ತ ಸಚಿವೆಗೆ ಸಹಿ ತಿನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನರೇಂದ್ರ ಮೋದಿ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದ ಬಳಿಕ ಮಂಡನೆ ಆಗುತ್ತಿರುವ 2ನೇ ಬಜೆಟ್‌ ಇದಾಗಿದೆ. ಎಂದಿನಂತೆ ಈ ಬಾರಿಯೂ ಜನರ ನಿರೀಕ್ಷೆಗಳೂ ಹೆಚ್ಚಿವೆ. ಬಜೆಟ್‌ ಮುನ್ನಾದಿನ ಪ್ರಕಟವಾದ ಆರ್ಥಿಕ ಸಮೀಕ್ಷೆ ಕೂಡ ದೇಶದ ಎಲ್ಲಾ ವಲಯಗಳಲ್ಲಿ ಬೆಳವಣಿಗೆ ಸುಸ್ಥಿರವಾಗಿದೆ ಎಂದು ತಿಳಿಸಿದೆ. ಹಾಗಿದ್ದರೂ ಕೂಡ ಜಿಡಿಪಿ ಬೆಳವಣಿಗೆ ಶೇ.7ರ ಒಳಗೆ ಇರಲಿದೆ ಎಂದು ತಿಳಿಸಿದೆ. ಬಜೆಟ್‌ ಕುರಿತಾಗಿ ಎಲ್ಲಾ ಅಪ್‌ಡೇಟ್‌ಗಳು ಇಲ್ಲಿವೆ. ಬಿಹಾರದ ಮಧುಬಾನಿ ಸೀರೆಯಲ್ಲಿ ಬಂದಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮಾನ್ ರಾಷ್ಟ್ರಪತಿಯಿಂದ ಬಜೆಟ್ ಮಂಡನೆಗೆ ಅನುಮತಿ ಪಡೆದಿದ್ದಾರೆ. ಮಧ್ಯಮ ವರ್ಗದ ನಿರೀಕ್ಷೆ ಈ ವರ್ಷವಾದರೂ ಈಡೇರುತ್ತಾ ಎಂಬ ಕಾತುರ ಹೆಚ್ಚಾಗಿದೆ.