Early Retirement : ವಯಸ್ಸು 60 ದಾಟಿದ್ರೂ ನಿವೃತ್ತಿಗೆ ಸಾಕಾಗುವಷ್ಟು ಹಣ ಕೈನಲ್ಲಿರೋದಿಲ್ಲ. ಇಳಿ ವಯಸ್ಸಿನಲ್ಲೂ ದುಡಿದು ಸುಸ್ತಾಗುವ ಜನರ ಮಧ್ಯೆ 33ನೇ ವರ್ಷಕ್ಕೆ ನಿವೃತ್ತಿ ಪಡೆದ ವ್ಯಕ್ತಿ ಗಮನ ಸೆಳೆದಿದ್ದಾರೆ. ಅವರ ಹೂಡಿಕೆ ಪ್ಲಾನ್ ಚರ್ಚೆ ಆಗ್ತಿದೆ.

ನೆಮ್ಮದಿಯನ್ನು ನೋಡುವ ದೃಷ್ಟಿ ಪ್ರತಿಯೊಬ್ಬರಲ್ಲೂ ಭಿನ್ನವಾಗಿದೆ. ಅನೇಕರು ವಯಸ್ಸಿರುವಾಗ ಕೆಲ್ಸ ಮಾಡಿ, ಹೂಡಿಕೆ ಮಾಡಿ, ಶೀಘ್ರವೇ ನಿವೃತ್ತಿ (retirement) ಪಡೆಯಬೇಕೆಂಬ ಆಸೆ ಹೊಂದಿರುತ್ತಾರೆ. ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ಮಾಡುವ ಅವರು ಶೀಘ್ರ ನಿವೃತ್ತಿ ಹೊಂದಿ, ಟೆನ್ಷನ್ ಇಲ್ಲದ ಸರಳ ಜೀವನವನ್ನು ನಡೆಸುತ್ತಾರೆ. ಆ ಲೈಫ್ ಎಂಜಾಯ್ ಮಾಡ್ತಾರೆ. ಈಗ ಎಕ್ಸ್ ಖಾತೆಯಲ್ಲಿ ಇಂಥಹ ಒಂದು ಹೂಡಿಕೆ ಪ್ಲಾನ್ ವೈರಲ್ ಆಗಿದೆ. ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿಯೇ ನಿವೃತ್ತಿ ಹೊಂದಿದ್ದು, ಹಿಂದೆ ಮಾಡಿದ್ದ ಹೂಡಿಕೆ, ಎಸ್ ಐಪಿಯೇ ಈಗ ಆತನ ಕುಟುಂಬಕ್ಕೆ ಆಸರೆ. ಕಡಿಮೆ ಖರ್ಚಿನಲ್ಲಿ ಸರಳ ಜೀವನವನ್ನು ವ್ಯಕ್ತಿ ನಡೆಸುತ್ತಿದ್ದಾನೆ.

ಅವರು ಮಾಡಿದ ಹೂಡಿಕೆ ಪ್ಲಾನ್ (Investment Plan) ಏನು? :

ಹೂಡಿಕೆದಾರರ ಪ್ರಕಾರ, ಅವರು 25ನೇ ವರ್ಷದಲ್ಲಿದ್ದಾಗ ಪ್ರೀತಿಸಿ ಮದುವೆ ಅದ್ರು. 28ನೇ ವರ್ಷಕ್ಕೆ ಮಗನ ಜನನವಾಯ್ತುಈಗ 10 ವರ್ಷದ ಮಗನಿದ್ದಾನೆ. ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಮಗನ ಹೆಸರನ್ನು, NIOS ನಲ್ಲಿ ನೋಂದಾಯಿಸಲಾಗಿದೆ. ಯಾವುದೇ ಒತ್ತಡವಿಲ್ಲದೆ ಅವರೆಲ್ಲರೂ ತಮ್ಮದೇ ವೇಗದಲ್ಲಿ ಕಲಿಯುತ್ತಿದ್ದಾರೆ. ಹೂಡಿಕೆ ಬಗ್ಗೆ ಪೋಸ್ಟ್ ಮಾಡಿರುವ ವ್ಯಕ್ತಿ ಈಗ ನನಗೆ 40 ವರ್ಷ ಎಂದಿದ್ದಾರೆ. ವಾರ್ಷಿಕ ವೆಚ್ಚಕ್ಕಿಂತ ಸಂಪನ್ಮೂಲ ಅವರಲ್ಲಿ ಹೆಚ್ಚಿದೆ. ಆದ್ರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದಿಲ್ಲ. ಅವರು 2019ರಲ್ಲಿ ಕೊನೆಯದಾಗಿ ಸಂಬಳ ಪಡೆದಿದ್ದಾರೆ. ಅನೇಕ ವರ್ಷಗಳಿಂದ ದೀರ್ಘಾವಧಿಯ ಹೂಡಿಕೆ ಮತ್ತು SWP ಮಾತ್ರ ಎಂದಿರುವ ಅವರು ನಮ್ಮದು ಸರಳ ಜೀವನ, ನಿಮ್ಮ ಕಥೆ ಏನು ಅಂತ ಪ್ರಶ್ನೆ ಮಾಡಿದ್ದಾರೆ.

ಟ್ರಂಪ್‌ ತೆರಿಗೆ ಶಾಕ್‌ ತಡೆಗೆ ರಫ್ತುದಾರಿಗೆ 45000 ಕೋಟಿ ಸ್ಕೀಂ!

ಹೂಡಿಕೆ ಬಗ್ಗೆ ಬಳಕೆದಾರರ ಕಮೆಂಟ್ : 

ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ತಮ್ಮ ಪ್ಲಾನ್ ಗಳನ್ನು ವಿವರಿಸಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ನಿವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ. ಪಿಯುಸಿ ವಿಜ್ಞಾನ ಮುಗಿಸಿದ ಅವರು 20ನೇ ವಯಸ್ಸಿನಲ್ಲಿ IAF ಗೆ ಸೇರಿದ್ದರು. ಚೆನ್ನೈನಲ್ಲಿ ತರಬೇತಿ ಪಡೆದರು. ಯುದ್ಧ ವಿಮಾನ ಸೇವೆಯನ್ನು ಬೆಂಬಲಿಸುತ್ತಾ ಭಾರತದಾದ್ಯಂತ 20+ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2016 ರಲ್ಲಿ MH ನೋಂದಣಿ ಇಲಾಖೆಗೆ ಸೇರಿದರು. ಈಗ ಸರಳವಾಗಿ ಬದುಕುತ್ತಿದ್ದು, ಇತರರಿಗೆ ಸೇವೆ ಸಲ್ಲಿಸುತ್ತಿದ್ದೇನೆ ಅಂತ ಅವರು ಬರೆದುಕೊಂಡಿದ್ದಾರೆ.

ಹಣದುಬ್ಬರ ಶೇ.0.25ಕ್ಕೆ ಇಳಿಕೆ : 11 ವರ್ಷದ ಕನಿಷ್ಠ

ಸರಳ ಜೀವನದ ಬಗ್ಗೆ ಭಿನ್ನಾಭಿಪ್ರಾಯ : 

ಎಲ್ಲರೂ ಸರಳ ಜೀವನದ ವ್ಯಾಖ್ಯಾನವನ್ನು ಒಂದೇ ರೀತಿ ನೋಡುವುದಿಲ್ಲ. ಅನೇಕರಿಗೆ ಶೀಘ್ರ ನಿವೃತ್ತಿ ಇಷ್ಟವಿರುವುದಿಲ್ಲ. ಅವರು ಕೆಲ್ಸವನ್ನು ಪ್ರೀತಿಸುತ್ತಾರೆ. ಬರೀ ಹಣಕ್ಕಾಗಿ ಕೆಲ್ಸ ಮಾಡುವುದಿಲ್ಲ. ಕೆಲಸ ನೆಮ್ಮದಿ ನೀಡುತ್ತದೆ, ಜವಾಬ್ದಾರಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಕಮೆಂಟ್ ಮಾಡಿದ ಕೆಲವರು ಶೀಘ್ರ ನಿವೃತ್ತಿ ಬದಲು ಕೆಲಸದ ಪ್ರವೃತ್ತಿಯನ್ನು ಬೆಂಬಲಿಸಿದ್ದಾರೆ. ಆರೋಗ್ಯ ಬೆಂಬಲ ನೀಡುವವರೆಗೂ ನಾನು ಕೆಲಸ ಮಾಡುತ್ತೇನೆ, ಕ್ರೆಡಿಟ್ ಕಾರ್ಡ್ ಗಳನ್ನು ಶೋ ಆಫ್ ಬದಲು ಅಗತ್ಯವಿರುವ ಕಡೆ ಬಳಸುತ್ತೇನೆ. ಅದ್ರಿಂದ ಲಾಭ ಪಡೆಯುತ್ತೇನೆ ಅಂತ ಒಬ್ಬರು ಹೇಳಿದ್ರೆ ಇನ್ನೊಬ್ಬರು ಕೆಲಸದ ಜೊತೆ ಅತಿ ಹೆಚ್ಚು ಹೂಡಿಕೆ ಮಾಡ್ತಿದ್ದೇನೆ ಎಂದಿದ್ದಾರೆ. ನಾನು ದುಡಿದ ಹಣ ಮತ್ತಷ್ಟು ದುಡಿಯಬೇಕು. ಅದೇ ಕಾರಣಕ್ಕೆ ದುಡಿದ ಹಣವನ್ನು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದೇನೆ. ಆರಂಭಿಕ ನಿವೃತ್ತಿಗಿಂತ ಕೆಲಸ, ಪ್ರಯಾಣ, ಆರೋಗ್ಯ ಮತ್ತು ಶಾಂತಿ ಸುಂದರವಾಗಿ ಸಹಬಾಳ್ವೆ ನಡೆಸುವ ಜೀವನ ನನಗೆ ಇಷ್ಟ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.