ಬ್ಯಾಂಕ್ ಖಾತೆ ವಿಷ್ಯ ಬಂದಾಗ ಬಹುತೇಕರ ಆಯ್ಕೆ ಉಳಿತಾಯ ಖಾತೆಯಾಗಿರುತ್ತೆ. ಅದ್ರಲ್ಲಿ ಕಡಿಮೆ ಬಡ್ಡಿ ಸಿಕ್ಕಿದ್ರೂ ವ್ಯವಹಾರ ಸುಲಭ ಅಂತ ಜನ ನಂಬ್ತಾರೆ. ನೀವು ಸೇವಿಂಗ್ ಅಕೌಂಟ್ ನಲ್ಲಿಯೇ ಎಫ್ ಡಿಗೆ ಸಿಗುವಷ್ಟು ಬಡ್ಡಿ ಪಡೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಭಾರತದ ಬಹುತೇಕ ಸೇವೆಗಳು ಡಿಜಿಟಲ್ ಆಗಿರುವ ಕಾರಣ ಬ್ಯಾಂಕ್ ಖಾತೆ (Bank account) ಈಗ ಅನಿವಾರ್ಯವಾಗಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಹಳ್ಳಿ ಜನರೂ ಬ್ಯಾಂಕ್ ಖಾತೆಯನ್ನು ತೆರೆಯುತ್ತಿದ್ದಾರೆ. ಬಹುತೇಕರು ಉಳಿತಾಯ ಖಾತೆಗೆ ಒಲವು ತೋರಿಸ್ತಾರೆ. ಇದ್ರಲ್ಲಿ ಹಣವನ್ನು ಅಗತ್ಯವಿದ್ದಾಗ ತೆಗೆಯೋದು ಹಾಗೇ ಸೇರಿಸೋದು ಸುಲಭ. ಆದ್ರೆ ಉಳಿತಾಯ ಖಾತೆಯಲ್ಲಿ ಬಡ್ಡಿ ಬಹಳ ಕಡಿಮೆ. ನೀವು ಖಾತೆ ತೆರೆಯುವಾಗ ಒಂದೇ ಒಂದು ಕೆಲ್ಸ ಮಾಡಿದ್ರೆ ನಿಮ್ಮ ಉಳಿತಾಯ ಖಾತೆಯಲ್ಲಿರುವ ಹಣ ಕೂಡ ಎಫ್ ಡಿಗೆ ಸಿಗುವ ಬಡ್ಡಿ ಪಡೆಯುತ್ತೆ.
ಸೇವಿಂಗ್ ಅಕೌಂಟ್ (savings account) ನಲ್ಲಿ ಎಫ್ ಡಿ ಬಡ್ಡಿ ಪಡೆಯೋದು ಹೇಗೆ? :
ಸೇವಿಂಗ್ ಅಕೌಂಟ್ ತೆರೆಯುವ ವೇಳೆ ಬ್ಯಾಂಕ್ ನಿಮಗೆ ಆಟೋ-ಸ್ವೀಪ್ ಫೀಚರ್ ನೀಡುತ್ತದೆ. ಇದನ್ನು ನೀವು ಸಕ್ರಿಯಗೊಳಿಸಬೇಕು. ಉಳಿತಾಯ ಖಾತೆಯಲ್ಲಿ ಆಟೋ ಸ್ವೀಪ್ ಸಕ್ರಿಯವಾಗಿದ್ದರೆ ನೀವು ಎಫ್ ಡಿ ಬಡ್ಡಿಯನ್ನು ಗಳಿಸಬಹುದು. ಆಟೋ ಸ್ವೀಪ್ ವಿಶೇಷವೆಂದ್ರೆ ಇದು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣವನ್ನು ಲಿಂಕ್ಡ್ ಫಿಕ್ಸೆಡ್ ಡೆಪಾಸಿಟ್ (FD) ಗೆ ಸ್ವಯಂಚಾಲಿತವಾಗಿ ವರ್ಗಾಯಿಸುತ್ತದೆ. ಅಲ್ಲಿ ನೀವು ಹೆಚ್ಚಿನ ಆದಾಯವನ್ನು ಗಳಿಸುತ್ತೀರಿ. ಉಳಿತಾಯ ಖಾತೆಯ ಬ್ಯಾಲೆನ್ಸ್ ನಿರ್ದಿಷ್ಟ ಮಿತಿಗಿಂತ ಕಡಿಮೆಯಾದಾಗ, ಬ್ಯಾಂಕ್ ಸ್ವಯಂಚಾಲಿತವಾಗಿ FD ಯಿಂದ ಅಗತ್ಯವಿರುವ ಮೊತ್ತವನ್ನು ಹಿಂಪಡೆಯುತ್ತದೆ.
ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಎಡವಟ್ಟಿಗೆ 1 ಲಕ್ಷ ಕೋಟಿ ರೂ ಬೇರೊಂದು ಖಾತೆಗೆ ಟ್ರಾನ್ಸ್‌ಫರ್
ತುರ್ತು ಸಂದರ್ಭದಲ್ಲಿ ನಿಮ್ಮ ಉಳಿತಾಯ ಖಾತೆಗೆ ಹಣವನ್ನು ನೀವು ಹಿಂಪಡೆಯಬಹುದು. ನಿಮ್ಮ ಉಳಿತಾಯ ಖಾತೆಗೆ ಮಿತಿಯನ್ನು ನಿಗದಿಪಡಿಸಬೇಕು. ನಿಮ್ಮಲ್ಲಿ ಹೆಚ್ಚುವರಿ ಹಣವಿದ್ದಾಗ ಅದನ್ನು ನಿಮ್ಮ ಸ್ಥಿರ ಠೇವಣಿ ಖಾತೆಗೆ ಅದೇ ವರ್ಗಾಯಿಸುತ್ತದೆ. ಇದು ಸುರಕ್ಷಿತ ವಿಧಾನಗಳಲ್ಲಿ ಒಂದು. ತಿಂಗಳು ಪೂರ್ತಿ ತಮ್ಮ ಖಾತೆಯಲ್ಲಿ ದೊಡ್ಡ ಮೊತ್ತ ಇರುತ್ತೆ ಎನ್ನುವವರು ಈ ಆಯ್ಕೆಯ ಲಾಭ ಪಡೆಯಬಹುದು. ಬ್ಯಾಂಕುಗಳು ಸಾಮಾನ್ಯವಾಗಿ ಉಳಿತಾಯ ಖಾತೆಗಳಿಗೆ ಹೋಲಿಸಿದರೆ FD ಗಳ ಮೇಲೆ ಹೆಚ್ಚು ಬಡ್ಡಿ ನೀಡುತ್ತವೆ. ಉಳಿತಾಯ ಖಾತೆಗಿಂತ ಎಫ್ ಡಿಗೆ ಸುಮಾರು ಮೂರು ಪಟ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆಟೋ ಸ್ವೀಪ್ ಸ್ವಯಂಚಾಲಿತವಾಗಿ ನಿಮ್ಮ ಉಳಿತಾಯಕ್ಕೆ ಉತ್ತಮ ಆದಾಯವನ್ನು ನೀಡುತ್ತದೆ.
Early Retirement: 33ನೇ ವಯಸ್ಸಿಗೇ ನಿವೃತ್ತಿ, ವೈರಲ್ ಆಯ್ತು ವ್ಯಕ್ತಿ ಕೊಟ್ಟ ಹೂಡಿಕೆ ಪ್ಲಾನ್
ಆಟೋ ಸ್ವೀಪ್ ಗೆ ಸ್ವಿಚ್ ಆಗೋದು ಹೇಗೆ? :
ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈಗಾಗಲೇ ನಿಮ್ಮ ಬಳಿ ಉಳಿತಾಯ ಖಾತೆ ಇದ್ರೂ ನೀವೀಗ ಆಟೋ ಸ್ವೀಪ್ ಆಯ್ಕೆ ಪಡೆಯಬಹುದು. ನೀವು ನಿಮ್ಮ ಬ್ಯಾಂಕ್ ಖಾತೆಗೆ ಹೋಗುವ ಮೂಲಕ ಆಟೋ ಸ್ವೀಪ್ ಸಕ್ರಿಯಗೊಳಿಸಬಹುದು. ನೀವು ಆಟೋ ಸ್ವೀಪ್ ಮಾಡುವ ವೇಳೆ ಮೊತ್ತವನ್ನು ನಿಗದಿ ಮಾಡ್ಬೇಕು. ಆಟೋ ಸ್ವೀಪ್ ಆಯ್ಕೆಯನ್ನು ನೀವು ಆನ್ಲೈನ್ ಮೂಲಕವೂ ಸಕ್ರಿಯಗೊಳಿಸಬಹುದು.
ಸ್ವೀಪ್-ಇನ್-ಔಟ್ ಹೊರತುಪಡಿಸಿ ಹೀಗೂ ಆದಾಯ ಗಳಿಸಿ :
ಆಟೋ ಸ್ವೀಪ್ ಬೇಡ ಎನ್ನುವವರು ಬೇರೆ ಆಯ್ಕೆಗಳ ಮೂಲಕ ಆದಾಯ ಗಳಿಸಬಹುದು. ಯುವಕರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ವಿವಿಧ ರೀತಿಯ ಉಳಿತಾಯ ಖಾತೆಗಳು ಲಭ್ಯವಿದೆ. ಈ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವು ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಹೆಚ್ಚಾಗಿದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣವಿದ್ದಾಗ, ಮಾಸಿಕ ಬಡ್ಡಿಯನ್ನು ಇತರ ಹೂಡಿಕೆಗಳಿಗೆ ಬಳಸಬಹುದು. ಉದಾಹರಣೆಗೆ, ನೀವು SIP ಅನ್ನು ಆಯ್ಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಬಡ್ಡಿ ಆದಾಯವನ್ನು ಜಮಾ ಮಾಡಬಹುದು. ಠೇವಣಿ ಪ್ರಮಾಣಪತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕವೂ ನೀವು ಉತ್ತಮ ಆದಾಯ ಪಡೆಯಬಹುದು. CDಗಳು ಮೂರು ತಿಂಗಳಿಂದ ಒಂದು ವರ್ಷದವರೆಗಿನ ಅವಧಿಗೆ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ, ಪಕ್ವವಾದ ಸಿಡಿಗಳನ್ನು ಮರುಹೂಡಿಕೆ ಮಾಡಿ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು.
