ಇಂಟರ್ನೆಟ್‌ ಲೋಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಚಾಟ್‌ ಜಿಪಿಟಿಯ ಮಾತೃ ಕಂಪನಿ ಓಪನ್‌ಎಐ ಇದೀಗ ದಿವಾಳಿ ಭೀತಿ ಎದುರಿಸುತ್ತಿದೆ. ಕಂಪನಿ ಈಗಾಗಲೇ ಸುಮಾರು 4500 ಕೋಟಿ ರು. ನಷ್ಟದಲ್ಲಿದ್ದು, 2024ರ ವರ್ಷಾಂತ್ಯಕ್ಕೆ ದಿವಾಳಿಯಾಗಬಹುದು ಎಂದು ಅನಾಲಿಟಿಕ್ಸ್‌ ಇಂಡಿಯಾ ಮ್ಯಾಗಜೀನ್‌ ಭವಿಷ್ಯ ನುಡಿದಿದೆ.

ನವದೆಹಲಿ: ಇಂಟರ್ನೆಟ್‌ ಲೋಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಚಾಟ್‌ ಜಿಪಿಟಿಯ ಮಾತೃ ಕಂಪನಿ ಓಪನ್‌ಎಐ ಇದೀಗ ದಿವಾಳಿ ಭೀತಿ ಎದುರಿಸುತ್ತಿದೆ. ಕಂಪನಿ ಈಗಾಗಲೇ ಸುಮಾರು 4500 ಕೋಟಿ ರು. ನಷ್ಟದಲ್ಲಿದ್ದು, 2024ರ ವರ್ಷಾಂತ್ಯಕ್ಕೆ ದಿವಾಳಿಯಾಗಬಹುದು ಎಂದು ಅನಾಲಿಟಿಕ್ಸ್‌ ಇಂಡಿಯಾ ಮ್ಯಾಗಜೀನ್‌ ಭವಿಷ್ಯ ನುಡಿದಿದೆ.

ಸ್ಯಾಮ್‌ ಆಲ್ಟ್‌ಮನ್‌ ನೇತೃತ್ವದ ಓಪನ್‌ಎಐ ಕಂಪನಿಯು ಚಾಟ್‌ಜಿಪಿಟಿ ಹೆಸರಿನ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಬಿಡುಗಡೆ ಮಾಡಿದ ಮೇಲೆ ಜಗತ್ತಿನಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಆಕ್ರಮಣಕಾರಿ ನಡೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿತ್ತು. ಇದೇ ವೇಳೆ, ಓಪನ್‌ಎಐ ಕಂಪನಿಯ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಆ ಜನಪ್ರಿಯತೆಯಿಂದ ಹಣ ಗಳಿಸುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಕಂಪನಿ ವಿಫಲವಾಗಿದೆ. ಹೀಗಾಗಿ ನಿತ್ಯ 5.8 ಕೋಟಿ ರು. ನಷ್ಟ ಅನುಭವಿಸುತ್ತಿದೆ.

ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!

ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಇಳಿಕೆಯಾಗುತ್ತಿದೆ. ಈ ವರ್ಷದ ಜೂನ್‌ನಲ್ಲಿ 170 ಕೋಟಿ ಇದ್ದ ಬಳಕೆದಾರರ ಸಂಖ್ಯೆ ಜುಲೈನಲ್ಲಿ 150 ಕೋಟಿಗೆ ಇಳಿಕೆಯಾಗಿದೆ. ಈ ನಡುವೆ, ಮೈಕ್ರೋಸಾಫ್‌್ಟಸೇರಿದಂತೆ ಬೇರೆ ಬೇರೆ ಕಂಪನಿಗಳು ತಮಗೆ ಬೇಕಾದ ಚಾಟ್‌ಬಾಟ್‌ಗಳನ್ನು ಚಾಟ್‌ಜಿಪಿಟಿ ಮಾದರಿಯಲ್ಲಿ ತಾವೇ ಅಭಿವೃದ್ಧಿಪಡಿಸಿಕೊಂಡಿವೆ. ಹೀಗಾಗಿ ಓಪನ್‌ಎಐ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಕಂಪನಿಯು ಮೈಕ್ರೋಸಾಫ್ಟ್‌ನ 10 ಬಿಲಿಯನ್‌ ಡಾಲರ್‌ (ಸುಮಾರು 83000 ಕೋಟಿ ರು.) ಬಂಡವಾಳದಿಂದಾಗಿ ಉಸಿರಾಡುತ್ತಿದೆ. ಆದರೆ ಕಂಪನಿಯ ನಷ್ಟ ದಿನೇ ದಿನೇ ಹೆಚ್ಚುತ್ತಿದೆ ಎಂದು ಅನಾಲಿಟಿಕ್ಸ್‌ ಇಂಡಿಯಾ ವರದಿ ಹೇಳಿದೆ.

ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!