ಕಮೆಂಟ್ ಮಾಡಿದರೂ ಸಾಕು ನಿಮ್ಮ ಡೇಟಾ ಕದಿಯುತ್ತೆ ChatGPT, 300 ಬಿಲಿಯನ್ ಮಾಹಿತಿಗೆ ಕನ್ನ!
ಕಳೆದ ಕೆಲ ದಿನಗಳಿಂದ ಚಾಟ್ ಜಿಪಿಟಿ ಭಾರಿ ಸದ್ದು ಮಾಡುತ್ತಿದೆ. ಈ ಚಾಟ್ ಜಿಪಿಟಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಆ್ಯಪ್ಲೀಕೇಶನ್ ಉಪಯೋಗಕ್ಕಿಂತೆ ದುರುಪಯೋಗ ವಾಗುವ ಸಾಧ್ಯತೆ ಹೆಚ್ಚು ಅನ್ನೋ ಮಾತನ್ನು ತಜ್ಞರು ಎಚ್ಚರಿಸಿದ್ದರು. ಇದೀಗ ಚಾಟ್ ಜಿಪಿಟಿ ಮಾರಕವಾಗು ಲಕ್ಷಣಗಳು ಗೋಚರಿಸಿದೆ. ನಿಮಗೆ ಗೊತ್ತಿಲ್ಲದಂತೆ 300 ಬಿಲಿಯನ್ ವೈಯುಕ್ತಿಕ ಮಾಹಿತಿಯನ್ನು ಚಾಟ್ ಜಿಪಿಟಿ ಕದ್ದಿದೆ ಅನ್ನೋ ಸ್ಫೋಟಕ ಮಾಹಿತಿ ಇದೀಗ ಐಟಿ ಕ್ಷೇತ್ರವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.
ನವದೆಹಲಿ(ಫೆ.16): ಚಾಟ್ ಜಿಪಿಟಿ ಬಿಡುಗಡೆಯಾಗಿ ಸರಿಸುಮಾರು 2 ತಿಂಗಳು ಕಳೆದಿದೆ. ಆಗಲೇ 100 ಮಿಲಿಯನ್ ಸಕ್ರೀಯ ಬಳಕೆದಾರರನ್ನು ಹೊಂದಿದೆ. ಈ ಮೂಲಕ ಅತೀ ವೇಗದಲ್ಲಿ ಮುನ್ನಗ್ಗುತ್ತಿರುವ ಗ್ರಾಹಕ ಕೇಂದ್ರಿತ ಆಪ್ಲಿಕೇಶನ್ ಅನ್ನೋ ಹೊಸ ದಾಖಲೆ ಬರೆದಿದೆ. ಸರಳವಾಗಿ ಹೇಳಬೇಕು ಅಂದರೆ ಸದ್ಯ ಯಾವುದೇ ಮಾಹಿತಿ, ಮ್ಯಾಪ್, ಹಾಡು, ಪ್ರಬಂಧ ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ಮೂಲಕ ನಾವು ಉತ್ತರ ಕಂಡುಕೊಳ್ಳುತ್ತೇವೆ. ಕೆಲೊಮ್ಮೆ ಗೂಗಲ್ ತೋರಿಸಿದ ಒಂದೆರೆಡು ವೆಬ್‌ಸೈಟ್ ಅಥವಾ ಲಿಂಕ್ ಹುಡುಕಬೇಕಾಗುತ್ತದೆ. ಆದರೆ ಚಾಟ್ ಜಿಪಿಟಿ ಮೂಲಕ ಸ್ಪಷ್ಟ ಹಾಗೂ ನಿಖರ ಉತ್ತರ ಪಡೆದುಕೊಳ್ಳಬಹುದು. ಇದೀಗ ಈ ಚಾಟ್ ಜಿಪಿಟಿ ತನ್ನ ಅಸಲಿ ಆಟ ತೋರಿಸಲು ಆರಂಭಿಸಿದೆ. ಬರೋಬ್ಬರಿ 300 ಬಿಲಿಯನ್ ವೈಯುಕ್ತಿಕ ಮಾಹಿತಿಯನ್ನು ಕದ್ದಿದೆ ಅನ್ನೋ ಆರೋಪ ಕೇಳಿಬಂದಿದೆ. ವೈಯುಕ್ತಿಕ ಮಾಹಿತಿಗೆ ಕನ್ನ ಹಾಕಿ ಅದರಿಂದ ಚಾಟ್ ಜಿಪಿಟಿ ಆದಾಯಗಳಿಸುತ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಚಾಟ್ ಜಿಪಿಟಿ ಲಾಂಚ್ ಆದ ಬೆನ್ನಲ್ಲೇ ತಜ್ಞರು ಇದರ ಅಪಾಯದ ಕುರಿತು ಎಚ್ಚರಿಕೆ ನೀಡಿದ್ದರು. ಇದೀಗ ಚಾಟ್ ಜಿಪಿಟಿ 300 ಬಿಲಿಯನ್ ಮಾಹಿತಿಯನ್ನೂ ಯಾವುದೇ ಅನುಮತಿ ಇಲ್ಲದೆ ತನ್ನದಾಗಿಸಿಕೊಂಡಿದೆ. ಚಾಟ್ ಜಿಪಿಟಿ ನಿಮ್ಮ ಮಾಹಿತಿ ಕದಿಯಲು ಹೆಚ್ಚು ಶ್ರಮವಹಿಸುವುದಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಚಾಟ್ ಡಿಪಿಟಿ ಅಪ್ಲೀಕೇಶನ್ ಇರಬೇಕು, ಅಥವಾ ನೀವು ಬಳಸಿರಬೇಕು ಎಂದಿಲ್ಲ. ಯಾವುದೇ ಆರ್ಟಿಕಲ್ ಅಥವಾ ಯಾರದೋ ಪೋಸ್ಟ್‌ಗೆ ನೀವು ಕಮೆಂಟ್ ಮಾಡಿದರೂ ಸಾಕು ನಿಮ್ಮ ಮಾಹಿತಿಯನ್ನು ಕದಿಯುವಷ್ಟ ಮುಂದುವರಿದ ತಂತ್ರಜ್ಞಾನ ಚಾಟ್ ಜಿಪಿಟಿ ಹೊಂದಿದೆ.
ಚಾಟ್ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ
ಒಂದು ಕಮೆಂಟ್ ಮೂಲಕ ಬಳಕೆದಾರರ ಮಾಹಿತಿ ಜೊತೆಗೆ ಆತನ ಲೊಕೇಶನ್ ಕುಟುಂಬದ ಮಾಹಿತಿಯನ್ನೂ ಚಾಟ್ ಜಿಪಿಟಿ ಕ್ಷಣಮಾತ್ರದಲ್ಲಿ ಸಂಗ್ರಹಿಸಲಿದೆ. ಸೂಕ್ಷ್ಮ ಮಾಹಿತಿಗಳನ್ನು ಯಾರಿಗೆ ಬೇಕಾದರೂ ನೀಡಬಹುದು. ಈ ಮಾಹಿತಿಗಳನ್ನು ಚಾಟ್‌ಜಿಪಿಟಿ ಯಾವುದೇ ಅನುಮತಿ ಇಲ್ಲದೆ ಪಡೆಯುತ್ತಿದೆ. ಇದು ಸಮಸ್ಯೆ ಕಾರಣವಾಗಿದೆ. ಓರ್ವ ಚಾಟ್ ಜಿಪಿಟಿ ಬಳಕೆದಾರರ ಕೇಳಿದ ಪ್ರಶ್ನೆಗೆ ಉತ್ತರ ನೀಡುವಾಗ, ಸಮರ್ಪಕ ಹಾಗೂ ನಿಖರ ಉತ್ತರ ನೀಡಲು ಈ ರೀತಿ ಅನುಮತಿ ಇಲ್ಲದೆ ಮಾಹಿತಿ ಕದ್ದರೆ ಇದರ ಪರಿಣಾಮ ಗಂಭೀರ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.
ಚಾಟ್ ಜಿಪಿಟಿ ಬಿರುಗಾಳಿಯಂತೆ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ. ಅತ್ಯಾಧುನಿಕ ಹಾಗೂ ಅತೀವ ಸಾಮರ್ಥ್ಯ ಟೂಲ್ ಹೊಂದಿರುವ ಚಾಟ್ ಜಿಪಿಟಿ ಹೊಸ ಬಾಷ್ಯ ಬರೆಯಬಲ್ಲ ಆ್ಯಪ್ಲಿಕೇಶನ್. ಆದರೆ ಇದು ದುರುಪಯೋಗ ಕೂಡ ಅಷ್ಟೇ ಇದೆ ಅನ್ನೋ ಎಚ್ಚರಿಕೆ ಕರೆಗಂಟೆ ಜಗತ್ತಿಗೆ ಆತಂಕ ತರುವಂತಿದೆ. ಚಾಟ್ ಜಿಪಿಟಿಗೆ ದೇಶಗಳ ಭದ್ರತಾ ಹಾಗೂ ಗೌಪ್ಯ ಮಾಹಿತಿಗಳನ್ನು ಕದಿಯುವುದು ಸಾಹಸದ ಕೆಲವಲ್ಲ. ಇನ್ನು ವೈಯುಕ್ತಿಕ ಮಾಹಿತಿ ಕದ್ದು ದುರುಪಯೋಗ ಮಾಡಿಕೊಂಡರೆ ಗತಿ ಏನು? ಅನ್ನೋ ಆತಂಕವೂ ಇದೀಗ ಎದುರಾಗಿದೆ. ಚಾಟ್ ಜಿಪಿಟಿ ಹಿಂದೆ ಅಮೆರಿದ OpenAI ಕೈಚಳಕವಿದೆ. ಅಮೆರಿದ ಆರ್ಟಿಫೀಶಿಯಲ್ ಇಂಟಿಲಿಜೆನ್ಸಿ ನಿರ್ಮಿಸಿದ ಈ ಚಾಟ್ ಜಿಪಿಟಿ ವಿಶ್ವದ ಡಿಜಿಟಲ್ ಟೆಕ್ನಾಲಜಿಯನ್ನೇ ಬುಡಮೇಲು ಮಾಡುವಂತಿದೆ.
ಮನೇಲಿ ಉಳಿದಿರೋ ಪದಾರ್ಥ ಬಳಸಿ ಥಟ್ಟಂತ ಅಡುಗೆ ಮಾಡಲು ಹೇಳಿಕೊಟ್ಟ ChatGPT
ಚಾಟ್ ಜಿಪಿಟಿ ಮೂಲಕ ಬಳಕೆದಾರ ನನಗೆ ನಿಗದಿತ ಲೋಕೇಶನ್‌ನಲ್ಲಿರುವ ಕಂಪನಿಯ ಸಂಪೂರ್ಣ ಮಾಹಿತಿ ನೀಡಿ, ಅಥವಾ ಅಂತರ್ಜಾಲದಲ್ಲಿರುವ ಯಾವುದೇ ಪುಸ್ತಕದ 10 ಪುಟದಲ್ಲಿ ಏನಿದೆ ಎಂದು ತಿಳಿಸಿ ಎಂದು ಕೇಳಿದರೆ ಚಾಟ್ ಜಿಪಿಟಿ ನಿಖರ ಉತ್ತರ ನೀಡಲಿದೆ. ಈ ಉತ್ತರ ನೀಡುವ ವೇಳೆ ಜಾಟ್ ಜಿಪಿಟಿ ಯಾವುದೇ ಅನುಮತಿ ಪಡೆದು ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.