ಭಾರತದಿಂದ ChatGPTಗೆ ಪ್ರತಿಸ್ಪರ್ಧೆ ಸಾಧ್ಯವಿಲ್ಲ, AI ಸಂಸ್ಥಾಪಕನ ಸವಾಲು ಸ್ವೀಕರಿಸಿದ ಟೆಕ್ ಮಹೀಂದ್ರ!
ಭಾರತ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ , ಚಾಟ್ ಜಿಪಿಟಿಗೆ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯವೇ ಇಲ್ಲ, ಅದು ನಮ್ಮೊಂದಿಗೆ ಸ್ಪರ್ಧೆ ಸಾಧ್ಯವಿಲ್ಲ ಎಂದ AI ಸಂಸ್ಥಾಪಕನ ಸವಾಲನ್ನು ಟೆಕ್ ಮಹೀಂದ್ರ ಸ್ವೀಕರಿಸಿದೆ. ಇಷ್ಟೇ ಅಲ್ಲ AI ಸಂಸ್ಥಾಪಕನಿಗೆ ತಕ್ಕ ತಿರುಗೇಟು ನೀಡಿದೆ.
ನವದೆಹಲಿ(ಜೂ.10): ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಆರ್ಟಿಫೀಶಯಲ್ ಇಂಟೆಲಿಜೆನ್ಸ್( AI), ಚಾಟ್‌ಜಿಪಿಟಿ(ChatGPT) ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಒಪನ್ AI ಸಂಸ್ಥಾಪಕ ಸ್ಯಾಮ್ಯುಲ್ ಹ್ಯಾರಿಸ್ ಆಲ್ಟ್‌ಮನ್ ಹೇಳಿಕೆ. ಭಾರತದ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ChatGPTಗೆ ಪ್ರತಿಸ್ಪರ್ಧ ಒಡ್ಡಲು ಸಾಧ್ಯವೇ ಇಲ್ಲ. ಇದು ಹೋಪ್‌ಲೆತ್ ಮಾತು ಎಂದಿದ್ದರು. ಇದೀಗ ಈ ಸವಾಲನ್ನು ಟೆಕ್ ಮಹೀಂದ್ರ ಸ್ವೀಕರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಟೆಕ್ ಮಹೀಂದ್ರ ಸಿಇಒ ಸಿಪಿ ಗುರ್ನಾನಿ, ಸವಾಲು ಸ್ವೀಕರಿಸಲಾಗಿದೆ ಎಂದಿದ್ದಾರೆ.
ಸಿಪಿ ಗುರ್ನಾನಿ ನೇತೃತ್ವದ ಟೆಕ್ ಮಹೀಂದ್ರ ಇದೀಗ ಚಾಟ್ ಜಿಪಿಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ವೇದಿಕೆ ಸೃಷ್ಟಿಸುವ ಸಾಧ್ಯತೆ ಇದೆ. ಈ ಕುರಿತು ಭಾರತದ ಟೆಕ್ ದಿಗ್ಗಜರು ಆಸಕ್ತಿ ತೋರಿದ್ದಾರೆ. ಹೀಗಾಗಿ ಶಕ್ತವಾಗಿ ಭಾರತ ಭವಿಷ್ಯದ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿದೆ.
ಚಾಟ್‌ಜಿಪಿಟಿ ಬಳಸಿ ಹೋಮ್‌ವರ್ಕ್: ಶಿಕ್ಷಕರಿಗೆ ಸಿಕ್ಕಿಬಿದ್ದ ವಿದ್ಯಾರ್ಥಿ : ಪೋಸ್ಟ್ ವೈರಲ್
ಸ್ಯಾಮ್ ಅಲ್ಟ್‌ಮನ್ ಇತ್ತೀಚೆಗೆ ಭಾರತ ಪ್ರವಾಸ ಮಾಡಿದ್ದರು. ಒಪನ್ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಕುರಿತು ಮಾರ್ಕೆಟಿಂಗ್‌ಗಾಗಿ 6 ರಾಷ್ಟ್ರಗಳ ಪ್ರವಾಸ ಮಾಡಿದ್ದ ಆಲ್ಟ್‌ಮನ್ ಭಾರತಕ್ಕೂ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಗೂಗಲ್‌ನ ಭಾರತ ಹಾಗೂ ಸೌತ್ ಈಸ್ಟ್ ವಿಭಾಗದ ಮಾಜಿ ಸಿಇಒ ಆನಂದ್ ರಾಜನ್ ಪ್ರಮುಖ ಪ್ರಶ್ನೆಯೊಂದನ್ನು ಎತ್ತಿದ್ದರು. ಭಾರತ ಅತ್ಯಂತ ವಿಶೇಷ ಹಾಗೂ ರೋಮಾಂಚಕಾರ ವ್ಯವಸ್ಥೆ ಹೊಂದಿದೆ. ಭಾರತದಲ್ಲಿ ನೀವು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಚಾಟ್‌ಜಿಪಿಟಿ ಸ್ಟಾರ್ಟ್ಆಪ್ ಹಬ್ ಆಗಿ ನೋಡುತ್ತಿದ್ದೀರಿ. ಆದರೆ ಭಾರತಕ್ಕೆ AI ಅಥವಾ ChatGPTಗೆ ಪರ್ಯಾಯ ಮಾರ್ಗ ಕಂಡುಕೊಂಡರೆ? ಹೇಗೆ ಯೋಚಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸುವ ವೇಳೆ ಆಲ್ಟ್‌ಮನ್, ಇದು ಅಸಾಧ್ಯದ ಮಾತು. ನಮ್ಮೊಂದಿಗೆ ಸ್ಪರ್ಧಿಸುವುದು ಸಾಧ್ಯವಿಲ್ಲ. ಅದರಲ್ಲೂ ತರಬೇತಿ ಮಾಡಲ್ ಹಿಡಿದು ನಮ್ಮ ಜೊತೆಗೆ ಪ್ರತಿಸ್ಪರ್ಧಿ ಒಡ್ಡಲು ಸಾಧ್ಯವೇ ಇಲ್ಲ. ನೀವು ಬೇರೆ ಎಲ್ಲಾದರೂ ಪ್ರಯತ್ನಿಸಬಹುದು. ಆದರೆ ಇದು ಅಸಾಧ್ಯದ ಮಾತು ಎಂದು ಆಲ್ಟ್‌ಮನ್ ಹೇಳಿದ್ದರು. ಈ ಪ್ರಶ್ನೆ ಹಾಗೂ ಉತ್ತರ ಭಾರಿ ವೈರಲ್ ಆಗಿತ್ತು. ಭಾರತದ ಸಾಮರ್ಥ್ಯವನ್ನೇ ಪ್ರಶ್ನಿಸಿದ ಈ ಉತ್ತರಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
ಚಾಟ್ ಜಿಪಿಟಿ ಬಗ್ಗೆ ತರಗತಿ ನೀಡಿ 3 ತಿಂಗಳಲ್ಲಿ 28 ಲಕ್ಷ ಹಣ ಗಳಿಸಿದ 23 ವರ್ಷದ ಯುವಕ
ಈ ವಿಡಿಯೋವನ್ನು ಸ್ವತ ಆನಂದರ್ ರಾಜನ್ ಹಂಚಿಕೊಂಡು ತಕ್ಕ ತಿರುಗೇಟು ನೀಡಿದ್ದರು. ನೀವು ಇದು ಅಸಾಧ್ಯದ ಮಾತು ಎಂದಿದ್ದೀರಿ. ಆದರೆ 5,000 ವರ್ಷಗಳ ಇತಿಹಾಸವಿರು ಭಾರತದ ಉದ್ಯಮ ಕ್ಷೇತ್ರ ಯಾವುದನ್ನು ನಿರ್ಲಕ್ಷಿಸಬಾರದು, ಅಸಡ್ಡೆಯಿಂದ ನೋಡಬಾರದು ಎಂಬುದನ್ನು ಕಲಿಸಿಕೊಟ್ಟಿದೆ. ನೀವು ಒಂದು ಮಾತು ಹೇಳಿದ್ದೀರಿ. ಬೇರೆಡೆ ಪ್ರಯತ್ನಿಸಿ. ಹೌದು ನಾವು ಪ್ರಯತ್ನಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಆಲ್ಟ್‌ಮನ್ ಪ್ರಧಾನಿ ಮೋದಿ ಭೇಟಿಯಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ ಹಾಗೂ ನಿಯಂತ್ರಣ ಮಾರ್ಗಸೂಚಿಗಳ ಕುರಿತು ಚರ್ಚಿಸಿದ್ದರು. ಇದೇ ವೇಳೆ ಭಾರತದ ಸ್ಟಾರ್ಟ್ ಅಪ್ ಹಬ್‌ನಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬಳಕೆ ಕುರಿತು ಮಾತುಕತೆ ನಡೆಸಿದ್ದರು.