Asianet Suvarna News Asianet Suvarna News

Petrol Diesel Rate: ರಾಜ್ಯದಲ್ಲಿ ಇಂದು ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆಯಾ? ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ದೇಶದಲ್ಲಿ ನಿತ್ಯ ವಸ್ತುಗಳ ಬೆಲೆಯೇರಿಕೆ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಸ್ಥಿರತೆ ಕಾಯ್ದುಕೊಂಡಿದೆ. ಇಂದು ಕೂಡ ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ.

No changes in fuel price check todays Petrol Diesel rate in major cities of Karnataka Dec16 2021 anu
Author
Bangalore, First Published Dec 16, 2021, 11:13 AM IST
  • Facebook
  • Twitter
  • Whatsapp

ಬೆಂಗಳೂರು (ಡಿ.16):  ಪೆಟ್ರೋಲ್ (Petrol)ಹಾಗೂ ಡೀಸೆಲ್  (Diesel)ಬೆಲೆಯಲ್ಲಿ (Price) ಇಂದು (ಡಿ.16) ಕೂಡ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮೈಸೂರು ಹಾಗೂ ಕಲಬುರ್ಗಿಯಲ್ಲಿ ಕೆಲವು ಪೈಸೆಗಳಷ್ಟು ಇಳಿಕೆ ಕಂಡುಬಂದಿರೋದು ಬಿಟ್ಟರೆ ಉಳಿದೆಲ್ಲ ನಗರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.  ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ದೆಹಲಿ ಹೊರತುಪಡಿಸಿದ್ರೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರ್ಕಾರ ವಿಧಿಸೋ ಅಬಕಾರಿ ಸುಂಕ ಹಾಗೂ ಇತರ ತೆರಿಗೆಗಳು ಅವುಗಳ ಬೆಲೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.  ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ 2021ರ ಫೆ.2ರ ತನಕ ಏರಿಕೆಯ ಹಾದಿಯಲ್ಲೇ ಇತ್ತು. ಈ ಸಮಯದಲ್ಲಿ ಪೆಟ್ರೋಲ್ ಮೇಲಿನ  ಅಬಕಾರಿ ಸುಂಕವು 32.98ರೂ. ಹಾಗೂ ಡೀಸೆಲ್ ಮೇಲಿನ ಸುಂಕ 31.83 ರೂ. ಆಗಿತ್ತು. 2021ರ ನ.4ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ ಲೀಟರ್ ಗೆ 27.90 ರೂ. ಹಾಗೂ 21.80ರೂ.ಗೆ ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು.  ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ಪರಿಣಾಮ ನವೆಂಬರ್ 4ರಂದು ದೇಶಾದ್ಯಂತ ಪೆಟ್ರೋಲ್  ಹಾಗೂ ಡೀಸೆಲ್  ದರದಲ್ಲಿ ಲೀಟರ್ ಗೆ ಕ್ರಮವಾಗಿ 5ರೂ. ಹಾಗೂ 10ರೂ. ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಅನೇಕ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT) ಕಡಿತಗೊಳಿಸಿದವು. ಇದ್ರಿಂದ ಕೆಲವು ರಾಜ್ಯಗಳಲ್ಲಿ ಇಂಧನ ದರದಲ್ಲಿ ಇನ್ನಷ್ಟು ಇಳಿಕೆ ಕಂಡುಬಂದಿದೆ. ದೆಹಲಿ(Delhi) ಸರ್ಕಾರ ಡಿಸೆಂಬರ್ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT)ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಕೆ ಮಾಡಿದೆ. ಇದ್ರಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ.ಇಳಿಕೆಯಾಗಿದೆ.  ಹಾಗಾದ್ರೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು(ಡಿ.16)  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ? 

ಚಾನೆಲ್ ಸಿಇಒ ಹುದ್ದೆಗೆ ಭಾರತೀಯ ಮೂಲದ Leena Nair ನೇಮಕ

ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru)ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಹಾಗೂ ಡೀಸೆಲ್  ದರ 85.01 ರೂ.ಇದೆ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ 100.31ರೂ. ಹಾಗೂ ಡೀಸೆಲ್ ಬೆಲೆ 84.79 ರೂ.ಇದೆ. ಮಂಗಳೂರಿನಲ್ಲಿ (Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. ಈ ಮೂರು ನಗರಗಳಲ್ಲಿ ಇಂಧನ ದರ ಸ್ಥಿರವಾಗಿದೆ.  ಮೈಸೂರಿನಲ್ಲಿ (Mysore)ಪೆಟ್ರೋಲ್ ದರ ಲೀಟರ್ ಗೆ 100.22ರೂ. ಇದ್ದು, ನಿನ್ನೆ  100.32ರೂ.ಇತ್ತು. ಅಂದ್ರೆ ನಿನ್ನಗಿಂತ ಇಂದು 0.10ರೂ.  ಇಳಿಕೆಯಾಗಿದೆ.  ಇನ್ನು ಡೀಸೆಲ್ ದರ ಇಂದು ಲೀಟರ್ ಗೆ  84.68ರೂ.ಇದೆ. ನಿನ್ನೆ ಲೀಟರ್ ಗೆ 84.77ರೂ. ಇತ್ತು.  ಕಲಬುರಗಿಯಲ್ಲಿ(Kalburgi)ಪೆಟ್ರೋಲ್ ದರದಲ್ಲಿ ನಿನ್ನೆಗಿಂತ ಇಂದು 0.61ರೂ. ಇಳಿಕೆ ಕಂಡುಬಂದಿದೆ. ನಿನ್ನೆ ಪೆಟ್ರೋಲ್ ಲೀಟರ್ ಗೆ 100.89ರೂ. ಇತ್ತು. ಇಂದು  0.61ರೂ. ಇಳಿಕೆ ಕಂಡು 101.28ರೂ. ಆಗಿದೆ.  ಡೀಸೆಲ್ ಲೀಟರ್ ಗೆ ನಿನ್ನೆ 85.31ರೂ.ಇದ್ರೆ ಇಂದು 0.54ರೂ. ಇಳಿಕೆಯಾಗಿ 84.77ರೂ. ಇದೆ.  

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

Fuel Tax Collection: 3 ವರ್ಷದಲ್ಲಿ ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 8 ಲಕ್ಷ ಕೋಟಿ ರೂ. ಆದಾಯ

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

"


 

Follow Us:
Download App:
  • android
  • ios