Fuel Tax Collection: 3 ವರ್ಷದಲ್ಲಿ ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 8 ಲಕ್ಷ ಕೋಟಿ ರೂ. ಆದಾಯ

*ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮತ್ತು ವಿವಿಧ ತೆರಿಗೆಗಳಿಂದ ಸಂಗ್ರಹವಾದ ಆದಾಯದ ಮಾಹಿತಿ ನೀಡಿದ ವಿತ್ತ ಸಚಿವೆ
*ರಾಜ್ಯಸಭೆಗೆ ಈ ಕುರಿತು ಲಿಖಿತ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್
*ಇಂಧನದ ಮೇಲಿನ ಅಬಕಾರಿ ಸುಂಕದಿಂದ 2020-21ರ ಆರ್ಥಿಕ ವರ್ಷವೊಂದರಲ್ಲೇ  3.71 ಲಕ್ಷ ಕೋಟಿ ರೂ. ಆದಾಯ

Central government earned over  Rs 8 lakh crore  from taxes on petrol diesel in last 3 fiscals says Finance Minister anu

ನವದೆಹಲಿ( ಡಿ.15):  ಕಳೆದ 3 ಆರ್ಥಿಕ ವರ್ಷಗಳಲ್ಲಿ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ತೆರಿಗೆಗಳಿಂದ ಕೇಂದ್ರ ಸರ್ಕಾರಕ್ಕೆ 8.02 ಲಕ್ಷ ಕೋಟಿ ರೂ. ಆದಾಯ (Income) ಬಂದಿದೆ ಎಂದು ಕೇಂದ್ರ ವಿತ್ತ ಸಚಿವೆ(Finance Minister)  ನಿರ್ಮಲಾ ಸೀತಾರಾಮನ್‌(Nirmala Sitharaman) ಸಂಸತ್ತಿಗೆ ತಿಳಿಸಿದ್ದಾರೆ. ಮಂಗಳವಾರ ರಾಜ್ಯಸಭೆ ಕಲಾಪದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ(excise duty) ಹೆಚ್ಚಳ ಮತ್ತು ಇವುಗಳ ಮೇಲೆ ವಿಧಿಸಲಾಗಿರೋ ವಿವಿಧ ತೆರಿಗೆಗಳ(Taxes) ಮೂಲಕ ಗಳಿಸಿದ ಆದಾಯದ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯೆ ನೀಡಿದರು. 

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಗಳಿಂದ ಕೇಂದ್ರ ಸರ್ಕಾರಕ್ಕೆ (Central Government) 2020-21ರ ಆರ್ಥಿಕ ವರ್ಷವೊಂದರಲ್ಲೇ 3.71 ಲಕ್ಷ ಕೋಟಿ ರೂ. ಆದಾಯ ಬಂದಿದೆ. , 2019-20ರಲ್ಲಿ 2.19 ಲಕ್ಷ ಕೋಟಿ ರೂ. ಮತ್ತು 2018-19ರಲ್ಲಿ 2.10 ಲಕ್ಷ ಕೋಟಿ ರೂ. ಆದಾಯ ಬಂದಿದೆ ಎಂದು ರಾಜ್ಯಸಭೆಗೆ ನೀಡಿರೋ ಲಿಖಿತ ಉತ್ತರದಲ್ಲಿ(Written answer) ಸಚಿವರು ಮಾಹಿತಿ ನೀಡಿದ್ದಾರೆ.   2018ರ ಅ.5ರಂದು ಪೆಟ್ರೋಲ್‌ ಮೇಲಿದ್ದ ಅಬಕಾರಿ ಸುಂಕವನ್ನು  2021ರ ನ.4ರಂದು 27.90 ರೂ.ಗೆ  ಹೆಚ್ಚಿಸಲಾಗಿತ್ತು. ಹಾಗೆಯೇ ಇದೇ ಅವಧಿಯಲ್ಲಿ  ಡೀಸೆಲ್‌ ಮೇಲಿನ ಸುಂಕವನ್ನು ಲೀಟರ್ ಗೆ  15.33 ರೂ.ನಿಂದ 21.80 ರೂ.ಗೆ ಹೆಚ್ಚಿಸಲಾಗಿತ್ತು ಎಂದು ಹೇಳಿದ್ದಾರೆ.  ಇನ್ನು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2018ರ ಅ.5ರಂದು ಲೀಟರ್ ಗೆ 19.48 ರೂ. ಇದ್ದು,  2019ರ ಜು.6ಕ್ಕೆ 17.98ರೂ.ಗೆ ಇಳಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕವು 15.33ರೂ.ನಿಂದ 13.83ರೂ.ಗೆ ಇಳಿಕೆಯಾಗಿತ್ತು. 

PM Kuwait Trip : ಜನವರಿಯಲ್ಲಿ ಕುವೈತ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವು 2021ರ ಫೆ.2ರ ತನಕ ಏರಿಕೆಯ ಹಾದಿಯಲ್ಲೇ ಇತ್ತು. ಈ ಸಮಯದಲ್ಲಿ ಪೆಟ್ರೋಲ್ ಮೇಲಿನ  ಅಬಕಾರಿ ಸುಂಕವು 32.98ರೂ. ಹಾಗೂ ಡೀಸೆಲ್ ಮೇಲಿನ ಸುಂಕ 31.83 ರೂ. ಆಗಿತ್ತು. 2021ರ ನ.4ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ ಲೀಟರ್ ಗೆ 27.90 ರೂ. ಹಾಗೂ 21.80ರೂ.ಗೆ ಇಳಿಕೆ ಕಂಡಿದೆ ಎಂದು ವಿತ್ತ ಸಚಿವರು ಮಾಹಿತಿ ನೀಡಿದರು. 

ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ಪರಿಣಾಮ ನವೆಂಬರ್ 4ರಂದು ದೇಶಾದ್ಯಂತ ಪೆಟ್ರೋಲ್  ಹಾಗೂ ಡೀಸೆಲ್  ದರದಲ್ಲಿ ಲೀಟರ್ ಗೆ ಕ್ರಮವಾಗಿ 5ರೂ. ಹಾಗೂ 10ರೂ. ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಅನೇಕ ರಾಜ್ಯ ಸರ್ಕಾರಗಳು(State Governments) ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT) ಕಡಿತಗೊಳಿಸಿದವು. ಇದ್ರಿಂದ ಕೆಲವು ರಾಜ್ಯಗಳಲ್ಲಿ ಇಂಧನ ದರದಲ್ಲಿ(Fuel price) ಇನ್ನಷ್ಟು ಇಳಿಕೆ ಕಂಡುಬಂದಿದೆ.

Nominee To PF:ನಾಮಿನಿ ಸೇರ್ಪಡೆಗೆ ಡಿ.31 ಕೊನೆಯ ದಿನಾಂಕ; ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ

ದೆಹಲಿ(Delhi) ಸರ್ಕಾರ ಡಿಸೆಂಬರ್ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ  ವ್ಯಾಟ್ (VAT)ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಕೆ ಮಾಡಿದೆ. ಇದ್ರಿಂದ ರಾಷ್ಟ್ರ ರಾಜ್ಯಧಾನಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 8ರೂ.ಇಳಿಕೆಯಾಗಿದೆ. ದೆಹಲಿ ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲೂ ಸುಮಾರು ಒಂದು ತಿಂಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude oil price) ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

Latest Videos
Follow Us:
Download App:
  • android
  • ios