Asianet Suvarna News Asianet Suvarna News

ಚಾನೆಲ್ ಸಿಇಒ ಹುದ್ದೆಗೆ ಭಾರತೀಯ ಮೂಲದ Leena Nair ನೇಮಕ

*ಪೆಪ್ಸಿಕೋ ಸಿಇಒ ಇಂದಿರಾ ನೂಯಿ ಬಳಿಕ ಪ್ರತಿಷ್ಠಿತ ಹುದ್ದೆಗೇರಿದ ಭಾರತೀಯ ಮಹಿಳೆ
*ಹಿಂದೂಸ್ತಾನ್ ಯುನಿಲಿವರ್ ಮೂಲಕ ಭಾರತದಲ್ಲೇ ವೃತ್ತಿ ಪ್ರಾರಂಭಿಸಿದ್ದ ಲೀನಾ
*ಜನವರಿಯಿಂದ ಚಾನೆಲ್ ಸಂಸ್ಥೆ ಸಿಇಒ ಆಗಿ ಅಧಿಕಾರ ಸ್ವೀಕಾರ
*ಯುನಿಲಿವರ್ ಸಂಸ್ಥೆಯ ಮೊದಲ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿ ಎಂಬ ಹೆಗ್ಗಳಿಕೆ

Indian origin Leena Nair appointed as CEO of French fashion house Chanel anu
Author
Bangalore, First Published Dec 15, 2021, 6:55 PM IST

ಫ್ರಾನ್ಸ್ (ಡಿ.15): ಜಗತ್ತಿನ ಪ್ರತಿಷ್ಠಿತ ಕಂಪನಿಗಳ ಸಿಇಒ(CEO)ಪಟ್ಟಕ್ಕೇರಿರೋ ಭಾರತೀಯರ ಪಟ್ಟಿಗೆ ಈಗ ಮತ್ತೊಂದು ಹೊಸ ಸೇರ್ಪಡೆ. ಫ್ರಾನ್ಸ್ ನ(France)ಪ್ರತಿಷ್ಠಿತ ಫ್ಯಾಷನ್ ಸಂಸ್ಥೆ ಚಾನೆಲ್(Chanel)ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ (CEO)ಭಾರತ ಮೂಲದ ಲೀನಾ ನಾಯರ್ (Leena Nair)ನೇಮಕಗೊಂಡಿದ್ದಾರೆ. 

52 ವರ್ಷದ ಲೀನಾ ಕಳೆದ 30 ವರ್ಷಗಳಿಂದ ಆಂಗ್ಲೋ-ಡಚ್ ನ ಪ್ರಮುಖ ಎಫ್ಎಂಸಿಜೆ( FMCG) ಕಂಪನಿ ಯುನಿಲಿವರ್ ನಲ್ಲಿ (Unilever)ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ (CHRO)ಕಾರ್ಯನಿರ್ವಹಿಸುತ್ತಿದ್ದಾರೆ.  ಯುನಿಲಿವರ್ ಸಂಸ್ಥೆಯ ಮೊದಲ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. 2022ರ ಜನವರಿಯಲ್ಲಿ ಲೀನಾ ಚಾನೆಲ್ ಸಂಸ್ಥೆ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!

ಲೀನಾ ಎಲ್ಲಿಯವರು?
ಲೀನಾ ಝಾರ್ಖಂಡ್ ನ ಜಮ್ ಷೆಡ್ಪುರ ಮೂಲದವರಾಗಿದ್ದು, ಇಲ್ಲಿನ  XLRI(Xavier School of Management)ಹಳೇ ವಿದ್ಯಾರ್ಥಿಯಾಗಿದ್ದು, ಚಿನ್ನದ ಪದಕದೊಂದಿಗೆ ಈ ಸಂಸ್ಥೆಯಿಂದ ಪದವಿ ಪಡೆದಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕೋಲ್ಹಾಪುರದಲ್ಲಿ ಪೂರ್ಣಗೊಳಿಸಿದ ಲೀನಾ, ಮಹಾರಾಷ್ಟ್ರದ ಸಾಂಗ್ಲಿ ವಲ್ಛಾಂಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.  ಪ್ರಸ್ತುತ ಬ್ರಿಟನ್ ಪೌರತ್ವ ಪಡೆದು ಅಲ್ಲೇ ನೆಲೆಸಿದ್ದಾರೆ. 

ಭಾರತದಲ್ಲೇ ವೃತ್ತಿ ಆರಂಭಿಸಿದ್ದ ಲೀನಾ
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರೋ ಯುನಿಲಿವರ್ ಸಂಸ್ಥೆಯ ಅಂಗಸಂಸ್ಥೆಯಾದ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಗೆ(HUL)1992ರಲ್ಲಿ ಲೀನಾ ಟ್ರೈನಿಯಾಗಿ ಸೇರಿದರು. ಆ ಬಳಿಕ ಸಂಸ್ಥೆಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಅವರು, ಆ ಬಳಿಕ ಯುನಿಲಿವರ್ ಸಂಸ್ಥೆಯ ಸಿಎಚ್ಆರ್ ಒ ಆಗಿ ನೇಮಕಗೊಂಡರು. ಹಿಂದುಸ್ತಾನ ಲಿವರ್ ಸಂಸ್ಥೆಯ 90 ವರ್ಷಗಳ ಇತಿಹಾಸದಲ್ಲಿಅತ್ಯಂತ ಕಿರಿಯ ನಿರ್ದೇಶಕಿ ಹಾಗೂ ಆಡಳಿತ ಮಂಡಳಿಯಲ್ಲಿರೋ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2013ರಲ್ಲಿ ಯುನಿಲಿವರ್ ಸಂಸ್ಥೆಯ ನಾಯಕತ್ವ ಹಾಗೂ ಸಂಸ್ಥೆ ಅಭಿವೃದ್ಧಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆಯಾಗಿ ನೇಮಕಗೊಳ್ಳೋ ಮೂಲಕ ಲಂಡನ್ ನಲ್ಲಿರೋ ಸಂಸ್ಥೆಯ ಮುಖ್ಯ ಕಚೇರಿಗೆ ವರ್ಗಾವಣೆಯಾದರು. 2016ರಲ್ಲಿ ಅವರನ್ನು ಸಂಸ್ಥೆಯ ಸಿಎಚ್ ಆರ್ ಒ ಹುದ್ದೆಗೆ ಬಡ್ತಿ ನೀಡಲಾಯಿತು. ಯನಿಲಿವರ್ ನಲ್ಲಿ ಲೀನಾ ಅವರ ಕೈಕೆಳಗೆ 1,50,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ನಾಯರ್ ಚಾನೆಲ್ ಸಂಸ್ಥೆಯ ಸಿಇಒ ಆಗಿ ಕೂಡ ಲಂಡನ್ ನಲ್ಲೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೆಪ್ಸಿಕೋ ಸಿಇಒ ಇಂದಿರಾ ನೂಯಿ ಬಳಿಕ ಬಹುರಾಷ್ಟ್ರೀಯ ಕಂಪನಿಯೊಂದರ ಉನ್ನತ ಹುದ್ದೆಗೇರಿದ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಲೀನಾ ಪಾತ್ರರಾಗಿದ್ದಾರೆ.

Fuel Tax Collection: 3 ವರ್ಷದಲ್ಲಿ ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 8 ಲಕ್ಷ ಕೋಟಿ ರೂ. ಆದಾಯ

ಚಾನೆಲ್ ನಂತಹ ಪ್ರಸಿದ್ಧ ಕಂಪನಿಯ ಮುಖ್ಯ  ಕಾರ್ಯನಿರ್ವಾಹಕಾಧಿಕಾರಿಯಾಗಿ ನೇಮಕಗೊಂಡಿರೋದಕ್ಕೆ ನಾನು ಹೆಮ್ಮೆ ಹಾಗೂ ವಿನಮ್ರತೆ ಎರಡನ್ನೂ ಹೊಂದಿದ್ದೇನೆ. ಚಾನಲ್ ನ ಉದ್ದೇಶಗಳಿಂದ ನಾನು ಉತ್ತೇಜನಗೊಂಡಿದ್ದೇನೆ. ಯುನಿಲಿವರ್ ನಲ್ಲಿನ ನನ್ನ ಸುದೀರ್ಘ ವೃತ್ತಿಜೀವನಕ್ಕೆ ನಾನು ಕೃತಜ್ಞಳಾಗಿದ್ದೇನೆ. ಆ ಸಂಸ್ಥೆ ಕಳೆದ 30 ವರ್ಷಗಳಿಂದ ನನ್ನ ಮನೆಯಾಗಿತ್ತು. ಈ ಸಂಸ್ಥೆ ನನಗೆ ಕಲಿಯಲು, ಬೆಳೆಯಲು ಹಾಗೂ ಕೊಡುಗೆ ನೀಡಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿತ್ತು' ಎಂದು ಲೀನಾ ನಾಯರ್ ತಮ್ಮ ಟ್ವಿಟ್ಟರ್ (Twitter) ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios