Asianet Suvarna News Asianet Suvarna News

ಜಿಎಸ್‌ಟಿ ವ್ಯಾಪ್ತಿಗೆ ಕೋವಿಡ್‌ ಲಸಿಕೆ: ಹೊರಗಿಡಲು ಸಾಧ್ಯವಿಲ್ಲ ಎಂದ ನಿರ್ಮಲಾ!

* ಕೋವಿಡ್‌ ಲಸಿಕೆಗೆ ಜಿಎಸ್‌ಟಿ ವಿನಾಯಿತಿ ನೀಡಲು ಆಗದು

* ಜಿಎಸ್‌ಟಿಯಿಂದ ಹೊರಗಿಟ್ಟರೆ ಅವುಗಳ ದರ ಇನ್ನಷ್ಟುದುಬಾರಿ ಆಗಲಿದೆ

* ಇನ್‌ಪುಟ್‌ ತೆರಿಗೆ ಸರಿದೂಗಿಸಲು ಔಷಧ ತಯಾರಕರಿಗೆ ಸಾಧ್ಯವಾಗುವುದಿಲ್ಲ

Nirmala Sitharaman Defends GST On Covid Drugs Equipment pod
Author
Bangalore, First Published May 10, 2021, 12:01 PM IST

ನವದೆಹಲಿ(ಮೇ.10): ಕೊರೋನಾ ಲಸಿಕೆಗಳು, ಔಷಧಗಳು ಮತ್ತು ಆಮ್ಲಜನಕ ಸಾಂಧ್ರಕಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆಯನ್ನು ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತರಾಮನ್‌ ತಳ್ಳಿಹಾಕಿದ್ದಾರೆ. ಒಂದು ವೇಳೆ ಈ ಔಷಧಗಳನ್ನು ಜಿಎಸ್‌ಟಿಯಿಂದ ಹೊರಗಿಟ್ಟರೆ ಅವುಗಳ ದರ ಇನ್ನಷ್ಟುದುಬಾರಿ ಆಗಲಿದೆ ಎಂದಿದ್ದಾರೆ.

ವೈದ್ಯಕೀಯ ಸಲಕರಣೆ ಆಮದು ಸುಂಕ ಕಡಿತ; ದೀದಿ ಮನವಿಗೂ ಮೊದಲೇ ಆಗಿದೆ ಎಂದ ವಿತ್ತ ಸಚಿವೆ!

ಈ ಸಂಬಂಧ ಭಾನುವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ನಿರ್ಮಲಾ ಅವರು, ಒಂದು ವೇಳೆ ಕೋವಿಡ್‌ ಲಸಿಕೆಯನ್ನು ಸಂಪೂರ್ಣವಾಗಿ ಜಿಎಸ್‌ಟಿಯಿಂದ ಹೊರಗಿಟ್ಟರೆ ಇನ್‌ಪುಟ್‌ ತೆರಿಗೆ ಸರಿದೂಗಿಸಲು ಔಷಧ ತಯಾರಕರಿಗೆ ಸಾಧ್ಯವಾಗುವುದಿಲ್ಲ. ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಕಾರಣ ದರಗಳ ಏರಿಕೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಲಸಿಕೆಯ ದೇಶೀಯ ಪೂರೈಕೆ ಮತ್ತು ಆಮದಿನ ಮೇಲೆ ಶೇ.5ರಷ್ಟುಜಿಎಸ್‌ಟಿಯನ್ನು ವಿಧಿಸಲಾಗುತ್ತಿದೆ. ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳ ಮೇಲೆ ಶೇ.12ರಷ್ಟುತೆರಿಗೆಯನ್ನು ವಿಧಿಸಲಾಗುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಕೊರೋನಾ ಲಸಿಕೆ ಹಾಗೂ ಔಷಧವನ್ನು ಜಿಎಸ್‌ಟಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios