3ನೇ ಬಾರಿಗೆ ಸಿಎಂ ಆದ ಬಳಿಕ 2ನೇ ಬಾರಿ ಪೇಚಿಗೆ ಸಿಲುಕಿದ ಮಮತಾ ಬ್ಯಾನರ್ಜಿ ವೈದ್ಯಕೀಯ ಸಲಕರಣೆ ಆಮದು ಸುಂಕ, ಜಿಎಸ್‌ಟಿ ಕಡಿತಕ್ಕೆ ದೀದಿ ಪತ್ರ ಎಲ್ಲಾ ಕ್ರಮಗಳನ್ನು ಕೇಂದ್ರ ಈಗಾಗಲೇ ತೆಗೆದುಕೊಂಡಿದೆ ಎಂದ ನಿರ್ಮಲಾ ಸೀತಾರಾಮನ್  

ನವದೆಹಲಿ(ಮೇ.09): ಪಶ್ಚಿಮ ಬಂಗಾಳ ಮುಖ್ಯಮಂತ್ರಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪೇಚಿಗೆ ಸಿಲುಕಿದ್ದಾರೆ. ಸಿಎಂ ಬೆನ್ನಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ಕೊರೋನಾ ಕಾರಣ ವಿದೇಶದಿಂದ ಆಮದು ಮಾಡಿಕೊಳ್ಳುವ ವೈದ್ಯಕೀಯ ಸಲಕರಣೆ ಆಮದು ಸುಂಕ, GST(ತೆರಿಗೆ) ಕಡಿತಗೊಳಿಸುವಂತೆ ಪತ್ರ ಬರೆದಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಮನವಿಗೂ ಮೊದಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರಣಿ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.

ಮುಖ್ಯಮಂತ್ರಿಯಾದ ಬೆನ್ನಲ್ಲೇ ಪೇಚಿಗೆ ಸಿಲುಕಿದ ಮಮತಾ ಬ್ಯಾನರ್ಜಿ!.

ಕೊರೋನಾ ಸೋಂಕಿತರ ಚಿಕಿತ್ಸೆ ಸವಾಲಾಗಿರುವ ಕಾರಣ ಭಾರತ ವಿದೇಶಗಳಿಂದ ಆಕ್ಸಿಜನ್, ಲಸಿಕೆ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. 40ಕ್ಕೂ ಹೆಚ್ಚು ರಾಷ್ಟ್ರಗಳು ಭಾರತಕ್ಕೆ ನೆರವು ನೀಡುತ್ತಿದೆ. ಆಯಾ ರಾಜ್ಯಗಳು ವಿದೇಶಗಳಿಂದ ವೈದ್ಯಕೀಯ ಸಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ತುರ್ತು ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳ ಮೇಲಿನ ಆಮದು ಸುಂಕ, ಜಿಎಸ್‌ಟಿ ಹಾಗೂ ಆರೋಗ್ಯ ಸೆಸೆ ಕಡಿತಗೊಳಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಪಶ್ಚಿಮ ಬಂಗಾಳ ಹಿಂಸಾಚಾರ: ಕಾನೂನು ಸುವ್ಯವಸ್ಥೆ ಬಗ್ಗೆ ಪಿಎಂ ಮೋದಿ ಕಳವಳ!

ಮಮತಾ ಬ್ಯಾನರ್ಜಿ ಮನವಿಗೂ ಮೊದಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೇ.03ರಂದು ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ವೈದ್ಯಕೀಯ ಸಲಕರಣೆಗಳ ಆಮದು ಸುಂಕ ಸೇರಿದಂತೆ ಇತರ ತೆರಿಗಳನ್ನು ಕಡಿತಗೊಳಿಸಿದೆ. ಮಮತಾ ಬ್ಯಾನರ್ಜಿ ಪತ್ರಕ್ಕೆ ಉತ್ತರವಾಗಿ ನಿರ್ಮಲಾ ಸೀತಾರಾಮನ್ ಸಂಪೂರ್ಣ ವಿವರಣೆ ನೀಡಿದ್ದಾರೆ.

Scroll to load tweet…

ಒಟ್ಟು 15 ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮಾನ್, ಸ್ಪಷ್ಟ ಉತ್ತರ ನೀಡಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ದೇಶ ಸಜ್ಜಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಬಂಗಾಳ ಸರ್ಕಾರ ಎಲ್ಲಾ ಮನವಿಗಳನ್ನು ಈಗಾಗಲೇ ಮಾಡಲಾಗಿದೆ. ಈ ಕುರಿತು ತೆರಿಗೆ ಕಡಿತಗೊಳಿಸಿರುವ ವೈದ್ಯಕೀಯ ಸಲಕರಣೆಗಳ ಕುರಿತು ಪಟ್ಟಿಯನ್ನೇ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಮಮತಾ ಬ್ಯಾನರ್ಜಿ ಕೇಳಿರುವ ಎಲ್ಲಾ ಬೇಡಿಕೆಗಳು ಈ ಪಟ್ಟಿಯಲ್ಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

Scroll to load tweet…

ಇದರ ಜೊತೆಗೆ ಆಮ್ಲಜನಕ, ಆಕ್ಸಿಜನ್ ಉತ್ಪಾದಕ ಘಟಕ, ಸಂಗ್ರಹಣೆ ಮತ್ತು ಸಾಗಣೆಗೆ ಬಳಸುವ ಉಪಕರಣಗಳು, COVID ಸೋಂಕಿತರಿಗೆ ಆಕ್ಸಿಜನ್ ಕಾನ್ಸಟ್ರೇಟರ್ಸ್, ವೆಂಟಿಲೇಟರ್‌ಗಳು ಸೇರಿದಂತೆ ಚಿಕಿತ್ಸೆಗೆ ಬಳಸುವ ಉಪಕರಣಗಳು ಮೇಲೂ ತೆರಗಿ ಕಡಿತಗೊಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Scroll to load tweet…

ಮಮತಾ ಬ್ಯಾನರ್ಜಿ ಈ ರೀತಿ ಕೇಂದ್ರ ಸರ್ಕಾರ ಆದೇಶದ ಬಂದ ಬಳಿಕ ಮನವಿ ಮಾಡುತ್ತಿರುವುದು ಇದೇ ಮೊದಲಲ್ಲ. 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೀದಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆ ಮಾಡುವಂತೆ ಸುದೀರ್ಘ ಪತ್ರ ಬರೆದಿದ್ದರು. ಆದರೆ ಮಮತಾ ಬ್ಯಾನರ್ಜಿ ಮೇ 6 ರಂದು ಈ ಮನವಿ ಮಾಡಿದ್ದರು. ಆದರೆ ಮೇ.03ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಶ್ಚಿಮ ಬಂಗಾಳ ಕಿಸಾನ್ ಸಮ್ಮಾನ್ ಫಲಾನುಭವಿ ರೈತರ ಪಟ್ಟಿಯನ್ನು ಒದಗಿಸುವಂತೆ ಪತ್ರ ಬರೆದಿದ್ದರು. ಶೀಘ್ರದಲ್ಲೇ ಪಟ್ಟಿ ಒದಗಿಸಿ ಬಂಗಾಳ ಫಲಾನುಭವಿ ರೈತರಿಗೆ ಸಮ್ಮಾನ್ ನಿಧಿ ಕೈಸೇರುವಂತೆ ಮಾಡಿ ಎಂದು ಈ ಪತ್ರದಲ್ಲಿ ಮನವಿ ಮಾಡಿದ್ದರು. ಆದರೆ ಈ ಪತ್ರ ಬಂದ 3 ದಿನಗಳ ಬಳಿಕ ಮಮತಾ ಬ್ಯಾನರ್ಜಿ ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಿ ಎಂದು ಪತ್ರ ಬರೆದು ಪೇಚಿಗೆ ಸಿಲುಕಿದ್ದರು.