ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್​ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ

2023-24ನೇ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನವಾಗಿದೆ. ಐಟಿಆರ್ ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ರೆ ಅಥವಾ ಸಿಗದಿದ್ರೆ ಆದಾಯ ತೆರಿಗೆ ವೆಬ್ ಸೈಟ್ ನಿಂದ ಇ-ಪ್ಯಾನ್ ಡೌನ್ ಲೋಡ್ ಮಾಡಬಹುದು.ಅದು ಹೇಗೆ? ಇಲ್ಲಿದೆ ಮಾಹಿತಿ.

Need To File ITR But Donot Have A PAN Card Download e PAN With These Simple Steps anu

Business Desk:2023-24ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಅಂತಿಮ ಗಡುವು ಸಮೀಪಿಸುತ್ತಿದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನವಾಗಿದೆ. ಐಟಿಆರ್ ಸಲ್ಲಿಕೆಗೆ ಕೆಲವು ದಾಖಲೆಗಳು ಅಗತ್ಯ. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡುವ ಪ್ರತಿಯೊಬ್ಬ ಉದ್ಯೋಗಿಯೂ ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಈಗ ನಿರತವಾಗಿರುತ್ತಾರೆ. ಐಟಿಆರ್ ಸಲ್ಲಿಕೆಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಎರಡು ಅತ್ಯಂತ ಪ್ರಮುಖವಾದ ದಾಖಲೆಗಳಾಗಿವೆ. ಒಂದು ವೇಳೆ ನಿಮಗೆ ಈ ಸಮಯದಲ್ಲಿ ಪ್ಯಾನ್ ಕಾರ್ಡ್ ಸಿಗುತ್ತಿಲ್ಲ ಎಂದಾದ್ರೆ ಆದಾಯ ತೆರಿಗೆ ವೆಬ್ ಸೈಟ್ ನಿಂದ ಅದನ್ನು ಡೌನ್ ಲೋಡ್ ಮಾಡಬಹುದು. ಇ-ಪ್ಯಾನ್ ಡೌನ್ ಲೋಡ್ ಮಾಡಲು ಅವಕಾಶವಿದೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳವಾಗಿದ್ದರೂ ನೀವು ಇದನ್ನು ವೆಬ್ ಸೈಟ್ ನಿಂದ ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಹಾಗಾದ್ರೆ ಇ-ಪ್ಯಾನ್ ಅನ್ನು ಡೌನ್ ಲೋಡ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಇ-ಪ್ಯಾನ್ ಡೌನ್ ಲೋಡ್ ಹೀಗೆ ಮಾಡಿ
*ಮೊದಲಿಗೆ ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ https://www.incometax.gov.in/.ಭೇಟಿ ನೀಡಿ.
*ಒಂದು ವೇಳೆ ನೀವು ಈ ವೆಬ್ ಸೈಟ್ ನಲ್ಲಿ ಇನ್ನೂ ನೊಂದಣಿ ಮಾಡದಿದ್ರೆ, 'Register Yourself'ಮೇಲೆ ಕ್ಲಿಕ್ ಮಾಡಿ. ಒಂದು ವೇಳೆ ನೋಂದಣಿ ಆಗಿದ್ದರೆ ಲಾಗಿನ್ ಆಗಿ.
*ಆ ಬಳಿಕ ಇ-ಪ್ಯಾನ್ ವಿಭಾಗಕ್ಕೆ ಭೇಟಿ ನೀಡಿ.
*ಇ-ಪ್ಯಾನ್ ಪುಟದಲ್ಲಿ ನಿಮಗೆ 'New PAN'ಅಥವಾ 'PAN Card Reprint' ಆಯ್ಕೆ ಕಾಣಿಸುತ್ತದೆ. 
*ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಪ್ಯಾನ್ ಕಾರ್ಡ್ ಇದ್ದು, ಅದು ಕಳೆದು ಹೋಗಿದ್ದರೆ 'PAN Card Reprint'ಆಯ್ಕೆ ಆರಿಸಿ.
*ಇಲ್ಲಿ ನಿಮ್ಮ ಜನ್ಮದಿನಾಂಕ, ಕ್ಯಾಪ್ಚ ಕೋಡ್, ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರ ಸಂಬಂಧಿತ ಮಾಹಿತಿ ಭರ್ತಿ ಮಾಡಿ.
*ಈ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿ.
*ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈಗ ಒಟಿಪಿ ನಮೂದಿಸುವ ಮೂಲಕ ದೃಢೀಕರಿಸಿ.
*ದೃಢೀಕರಣದ ಬಳಿಕ ಇ-ಪ್ಯಾನ್ ಗೆ ನಿಗದಿತ ಶುಲ್ಕ ಪಾವತಿಸಬೇಕು. 

ಇನ್ಮೂರೇ ದಿನ ಆಧಾರ್-ಪಾನ್ ಲಿಂಕ್ ಮಾಡೋಕೆ, ಈ ಕೆಲ್ಸವನ್ನೆಲ್ಲಾ ಮುಗಿಸಿ ಬಿಡಿ!

*ಶುಲ್ಕ ಪಾವತಿಸಿದ ಬಳಿಕ ನಿಮಗೆ ಅದನ್ನು ದೃಢೀಕರಿಸುವ ಸಂದೇಶ ಬರುತ್ತದೆ.
*ಈಗ ಈಗ ಇ-ಪ್ಯಾನ್ ಪುಟಕ್ಕೆ ಹಿಂತಿರುಗಿ ನೀವು ನಮೂದಿಸಿರುವ ಇ-ಮೇಲ್ ವಿಳಾಸ ಪರಿಶೀಲಿಸಿ.
*ಅದೇ ಇ-ಮೇಲ್ ವಿಳಾಸಕ್ಕೆ ಇ-ಪ್ಯಾನ್ ಡೌನ್ ಲೋಡ್ ಮಾಡುವ ಲಿಂಕ್ ಅನ್ನು ಕಳುಹಿಸಿರುತ್ತಾರೆ.
*ಇ-ಮೇಲ್ ಗೆ ಬಂದಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಇ-ಪ್ಯಾನ್  ಡೌನ ಲೋಡ್ ಮಾಡಬಹುದು. 

PAN Card Misuse: ಚೆಕ್ ಮಾಡೋದು ಹೇಗೆ? ತಡೆಗೆ ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ

ಇ-ಪ್ಯಾನ್ ಪ್ರಯೋಜನ:
ಇ-ಪ್ಯಾನ್ (e-PAN)  ಕಾರ್ಡ್ ಡೌನ್ಲೋಡ್ ಮಾಡಿಟ್ಟುಕೊಂಡ್ರೆ ಯಾವಾಗ ಬೇಕಾದ್ರೂ ಅದನ್ನು ಸಂಬಂಧಪಟ್ಟವರಿಗೆ ಸಲ್ಲಿಕೆ ಮಾಡಲು ಸಾಧ್ಯವಾಗುತ್ತೆ. ಅಲ್ಲದೆ, ಪ್ರತಿ ಕೆಲಸಕ್ಕೂ ಪ್ಯಾನ್ ಕಾರ್ಡ್ ಅನ್ನು ಜೇಬಿನಲ್ಲೋ, ಪರ್ಸ್ ನಲ್ಲೋ ಇಟ್ಟುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಅಷ್ಟೇ ಅಲ್ಲ, ಕಳೆದು ಹೋಗೋ ಭಯವೂ ಇಲ್ಲ. ಸರ್ಕಾರವು ನಾಗರಿಕರ ಹಣಕಾಸು ವಹಿವಾಟುಗಳ ಮೇಲೆ ನಿಗಾಯಿಡಲು ಪ್ಯಾನ್ ಕಾರ್ಡ್ ಬಳಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರವೇ. ಹೀಗಾಗಿ ಆದಾಯ ಹೊಂದಿರೋ, ತೆರಿಗೆ ಪಾವತಿಸೋ ಪ್ರತಿ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಹಾಗೂ ಅದರ ಸುರಕ್ಷತೆ ಬಗ್ಗೆ ಗಮನ ವಹಿಸೋದು ಅಗತ್ಯ.
 

Latest Videos
Follow Us:
Download App:
  • android
  • ios