Asianet Suvarna News Asianet Suvarna News

PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

 11 ಕೋಟಿಗೂ ಅಧಿಕ ಫಲಾನುಭವಿ ರೈತರಿಗೆ 16 ಸಾವಿರ ಕೋಟಿ ರೂ. ಅನ್ನು ಅವರ ಬ್ಯಾಂಕ್‌ ಖಾತೆಗೆ ಪ್ರಧಾನಿ ಮೋದಿ ವರ್ಗಾಯಿಸಿದ್ದಾರೆ. ಪಿಎಂ ಕಿಸಾನ್‌ ಯೋಜನೆಯ ಭಾಗವಾಗಿ ಈ ಹಣ ಸಂದಾಯವಾಗಿದೆ. 

modi releases 12th installment of Rs 16000 crore to eligible farmers under pm kisan scheme ash
Author
First Published Oct 17, 2022, 3:31 PM IST

ದೇಶದ ರೈತರಿಗೆ (Farmers) ನೀಡುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಪಿಎಂ - ಕಿಸಾನ್ (PM - KISAN) ಯೋಜನೆಯ 12ನೇ ಕಂತನ್ನು ಪ್ರಧಾನಿ ಮೋದಿ (PM Narendra Modi)  ಅನ್ನದಾತರಿಗೆ ವರ್ಗಾಯಿಸಿದ್ದಾರೆ. ಪಿಎಂ - ಕಿಸಾನ್ ಯೋಜನೆಯ 11 ಕೋಟಿಗೂ ಅಧಿಕ ಫಲಾನುಭವಿ ರೈತರಿಗೆ 16 ಸಾವಿರ ಕೋಟಿ ರೂ. ಅನ್ನು ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ದೀಪಾವಳಿಗೂ (Diwali) ಮುನ್ನ ಹಾಗೂ ರಾಬಿ ಬಿತ್ತನೆ ಸಮಯಕ್ಕೂ ಮುನ್ನ ಈ ಹಣ ವರ್ಗಾಯಿಸಲಾಗಿದೆ. ಈ ಮೂಲಕ ಒಟ್ಟಾರೆ 2.16 ಲಕ್ಷ ಕೋಟಿ ರೂ. ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ (Pradhan Mantri Kisan Samman Nidhi) ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2,000 ರೂ. ಗಳಂತೆ ಒಟ್ಟು 6 ಸಾವಿರ ರೂ. ಅನ್ನು ನೀಡಲಾಗುತ್ತದೆ. ಫಲಾನುಭವಿಗಳಿಗಳ ಬ್ಯಾಂಕ್‌ ಅಕೌಂಟ್‌ಗಳಿಗೆ ನೇರವಾಗಿ ಇದನ್ನು ವರ್ಗಾಯಿಸಲಾಗುತ್ತದೆ. ಫೆಬ್ರವರಿ 2019 ರಲ್ಲಿ ಮೋದಿ ಸರ್ಕಾರ ಈ ಯೋಜನೆಯನ್ನು ಆರಂಭಿಸಲಾಯಿತಾದರೂ, ಡಿಸೆಂಬರ್ 2018 ರಿಂದಲೇ ಇದು ಜಾರಿಗೆ ಬಂದಿದೆ. 

ಇದನ್ನು ಓದಿ: Bharat ಬ್ರ್ಯಾಂಡ್‌ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ರಾಷ್ಟ್ರ ರಾಜಧಾನಿ ನವದೆಹಲಿಯ 2 ದಿನಗಳ ಕಾಲ ನಡೆಯುತ್ತಿರುವ ಪಿಎಂ - ಕಿಸಾನ್‌ ಸಮ್ಮಾನ್‌ ಸಮ್ಮೇಳನ - 2022 ರಲ್ಲಿ ಪ್ರಧಾನಿ ಮೋದಿ ರೈತರಿಗ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹಾಗೂ ಕೆಮಿಕಲ್ಸ್ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವಿಯ ಸಹ ಭಾಗಿಯಾಗಿದ್ದರು. 
 
ದೇಶದ ವಿವಿಧ ಭಾಗಗಳಿಂದ ಬಂದಿದ್ದ  13,500 ಸಾವಿರಕ್ಕೂ ಅಧಿಕ ರೈತರು ಹಾಗೂ ಸುಮಾರು 1,500 ಅಗ್ರಿ - ಸ್ಟಾರ್ಟಪ್‌ಗಳು ಸಹ ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಇನ್ನು, ಸಂಶೋಧಕರು, ನೀತಿ ನಿರೂಪಕರು ಹಾಗೂ ಹಲವು ಇತರರು ಸಹ ಈ 2 ದಿನಗಳ ಸಮ್ಮೇಳನದಲ್ಲಿ ಹಾಜರಾಗಿದ್ದಾರೆ. ಪಿಎಂ - ಕಿಸಾನ್‌ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೇ. 100 ರಷ್ಟು ಹಣವನ್ನು ಕೆಂದ್ರ ಸರ್ಕಾರವೇ ರೈತರಿಗೆ ವರ್ಗಾವಣೆ ಮಾಡುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಗೆ ಅರ್ಹರಾಧ ರೈತರನ್ನು ಹುಡುಕಿ ಸೇರ್ಪಡೆ ಮಾಡುತ್ತವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಸರ್ಕಾರದ ಪ್ಲ್ಯಾನ್‌ಗಳಲ್ಲಿ ಇದು ಸಹ ಒಂದು. 

ಇದನ್ನೂ ಓದಿ:  ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ!

ಅಲ್ಲದೆ, ಇದೇ ವೇಳೆ,  ಒಂದು ದೇಶ ಒಂದು ರಸಗೊಬ್ಬರ’ (One Nation One Fertiliser) ಯೋಜನೆಯಡಿ ‘ಭಾರತ್‌’ (Bharat) ಬ್ರ್ಯಾಂಡ್‌ನ ಯೂರಿಯಾವನ್ನು (Urea) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಚಾಲನೆ ನೀಡಿದ್ದಾರೆ. ಇದರಿಂದಾಗಿ ಯೂರಿಯಾಗೆ ಇನ್ನು ದೇಶಾದ್ಯಂತ ಒಂದೇ ಹೆಸರಿರಲಿದೆ. ಇದೇ ವೇಳೆ, ‘ಪಿಎಂ-ಕಿಸಾನ್‌’ (PM - KISAN) ಯೋಜನೆಯಡಿ 8.5 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ 16,000 ಕೋಟಿ ರೂ. ಗಳನ್ನು ವರ್ಗಾಯಿಸಲಿದ್ದಾರೆ. ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂ. ವರ್ಗಾಯಿಸುವ ಯೋಜನೆ ಇದಾಗಿದೆ. ಈ ಮಧ್ಯೆ, 600 ಪಿಎಂ ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೂ ಅವರು ಚಾಲನೆ ನೀಡಲಿದ್ದಾರೆ.

Follow Us:
Download App:
  • android
  • ios