Bharat ಬ್ರ್ಯಾಂಡ್ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ
ನಾಳೆ ಪ್ರಧಾನಿ ಮೋದಿ ‘ಭಾರತ್’ ಬ್ರ್ಯಾಂಡ್ ಗೊಬ್ಬರವನ್ನು ಬಿಡುಗಡೆ ಮಾಡಲಿದ್ದಾರೆ. ‘ಏಕ ದೇಶ, ಏಕ ಗೊಬ್ಬರ’ ಮಂತ್ರದಡಿ ಚಾಲನೆಗೊಳಿಸಲಾಗುತ್ತಿದೆ. ಅಲ್ಲದೆ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಕ್ಕೂ ಚಾಲನೆ ಸಿಗುತ್ತಿದ್ದು,ಪಿಎಂ- ಕಿಸಾನ್‌ನಡಿ .16,000 ಕೋಟಿ ರೂ. ಅನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ನವದೆಹಲಿ: ‘ಒಂದು ದೇಶ ಒಂದು ರಸಗೊಬ್ಬರ’ (One Nation One Fertiliser) ಯೋಜನೆಯಡಿ ‘ಭಾರತ್’ (Bharat) ಬ್ರ್ಯಾಂಡ್‌ನ ಯೂರಿಯಾವನ್ನು (Urea) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಇದರಿಂದಾಗಿ ಯೂರಿಯಾಗೆ ಇನ್ನು ದೇಶಾದ್ಯಂತ ಒಂದೇ ಹೆಸರಿರಲಿದೆ.ಇದೇ ವೇಳೆ, ‘ಪಿಎಂ-ಕಿಸಾನ್’ (PM - KISAN) ಯೋಜನೆಯಡಿ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 16,000 ಕೋಟಿ ರೂ. ಗಳನ್ನು ವರ್ಗಾಯಿಸಲಿದ್ದಾರೆ. ರೈತರಿಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6,000 ರೂ. ವರ್ಗಾಯಿಸುವ ಯೋಜನೆ ಇದಾಗಿದೆ. ಈ ಮಧ್ಯೆ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೂ ಅವರು ಚಾಲನೆ ನೀಡಲಿದ್ದಾರೆ.
ಕೃಷಿ ಹಾಗೂ ರಸಗೊಬ್ಬರ ಸಚಿವಾಲಯಗಳ ವತಿಯಿಂದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ ದೆಹಲಿಯಲ್ಲಿ ಅಕ್ಟೋಬರ್ 17ರಿಂದ 2 ದಿನಗಳ ಕಾಲ ನಡೆಯಲಿದೆ. ದೇಶದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡುತ್ತಿರುವ ಎಲ್ಲ ಗೊಬ್ಬರಗಳನ್ನು ‘ಭಾರತ್’ ಬ್ರ್ಯಾಂಡ್‌ನಡಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಅದು ಯೂರಿಯಾ ಮೂಲಕ ಆರಂಭವಾಗುತ್ತಿದೆ. ಸಬ್ಸಿಡಿ ಯೂರಿಯಾವನ್ನು ‘ಭಾರತ್’ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡುವುದನ್ನು ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಕಡ್ಡಾಯಗೊಳಿಸಿದೆ.
ಇದನ್ನು ಓದಿ: ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ!
‘ಇಂಡಿಯನ್ ಎಡ್ಜ್' (IndianEdge) ಎಂಬ ಅಂತಾರಾಷ್ಟ್ರೀಯ ಸಾಪ್ತಾಹಿಕ ರಸಗೊಬ್ಬರ ಇ-ಪತ್ರಿಕೆಯನ್ನು ಪ್ರಧಾನ ಮಂತ್ರಿ ಅನಾವರಣಗೊಳಿಸಲಿದ್ದಾರೆ ಮತ್ತು ಕೃಷಿ ಹಾಗೂ ರಸಗೊಬ್ಬರ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿರುವ 'ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022' (PM Kisan Sammelan 2022) ಕಾರ್ಯಕ್ರಮದಲ್ಲಿ ಅಗ್ರಿ-ಸ್ಟಾರ್ಟಪ್ ಕಾನ್ಕ್ಲೇವ್ ಮತ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಸಗೊಬ್ಬರ ವಲಯದಲ್ಲಿ ಒಂದು ದೊಡ್ಡ ಕ್ರಮದಲ್ಲಿ, ಎಲ್ಲಾ ಸಬ್ಸಿಡಿ ಮಣ್ಣಿನ ಪೋಷಕಾಂಶಗಳಾದ - ಯೂರಿಯಾ, ಡೈ-ಅಮೋನಿಯಂ ಫಾಸ್ಫೇಟ್ (Di - Ammonium Phosphate) (ಡಿಎಪಿ) (DAP), ಮ್ಯೂರಿಯೇಟ್ ಆಫ್ ಪೊಟ್ಯಾಶ್ (Muriate of Potash) (ಎಂಒಪಿ) (MoP) ಮತ್ತು ಎನ್‌ಪಿಕೆ (NPK) - ರಾಷ್ಟ್ರಾದ್ಯಂತ ಭಾರತ್ ಎಂಬ ಒಂದೇ ಬ್ರ್ಯಾಂಡ್‌ನಲ್ಲಿ ಮಾರಾಟವಾಗಲಿದೆ. ಈ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 'ಭಾರತ್ ಯೂರಿಯಾ ಬ್ಯಾಗ್'ಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ಹೇಳಿದರು ಮತ್ತು ಕಂಪನಿಗಳು 'ಭಾರತ್' ಬ್ರ್ಯಾಂಡ್ ಅಡಿಯಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಮಾರಾಟ ಮಾಡುವುದನ್ನು ಸರ್ಕಾರವು ಕಡ್ಡಾಯಗೊಳಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಎಲ್ಲಾ ರಸಗೊಬ್ಬರಕ್ಕೂ ಒಂದೇ ಬ್ರ್ಯಾಂಡ್: ನೀತಿ ಅ.2ರಿಂದ ಜಾರಿ: ಕಾಂಗ್ರೆಸ್ ಟೀಕೆ
ಅಲ್ಲದೆ, ರಸಗೊಬ್ಬರ ಮತ್ತು ರಾಸಾಯನಿಕ ಸಚಿವಾಲಯದ 'ಒಂದು ರಾಷ್ಟ್ರ, ಒಂದು ರಸಗೊಬ್ಬರ' (ONOF) ಯೋಜನೆಯ ಭಾಗವಾಗಿ ರಸಗೊಬ್ಬರಗಳ ಅಡ್ಡ ಚಲನೆಯನ್ನು ತಡೆಗಟ್ಟುವ ಮತ್ತು ಹೆಚ್ಚಿನ ಸರಕು ಸಬ್ಸಿಡಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಸ್ತುತ, ದೇಶದಲ್ಲಿ ರಸಗೊಬ್ಬರ ಚಿಲ್ಲರೆ ಅಂಗಡಿಗಳು ಕಂಪನಿಯ ನಿರ್ವಹಣೆ, ಸಹಕಾರಿ ಅಂಗಡಿಗಳು ಅಥವಾ ಖಾಸಗಿ ವಿತರಕರಿಗೆ ಚಿಲ್ಲರೆ ಮಾರಾಟವಾಗಿದೆ. ಈ ಚಿಲ್ಲರೆ ಅಂಗಡಿಗಳನ್ನು ಈಗ PM-KSK ಆಗಿ ಪರಿವರ್ತಿಸಲಾಗುತ್ತದೆ.
ಇದನ್ನೂ ಓದಿ: ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರ ಜೀವ ಹಿಂಡುತ್ತಿವೆ ಆಗ್ರೋ ಏಜೆನ್ಸಿಗಳು!