ಹಣದುಬ್ಬರದ ಕಾರಣದಿಂದ ಮೆಟಾ ಕಂಪನಿಯ ಜಾಹೀರಾತು ಮಾರಾಟಕ್ಕೆ ಹೊಡೆತ ಬಿದ್ದಿದ್ದು, ಈ ಹಿನ್ನೆಲೆ ಮೊದಲ ಬಾರಿಗೆ ತ್ರೈಮಾಸಿಕದಲ್ಲಿ ಆದಾಯದ ಕುಸಿತವವಾಗಿರುವ ಬಗ್ಗೆ ಮೆಟಾ ಮಾಹಿತಿ ನೀಡಿದೆ.

ವಿಶ್ವದ ಬಹುತೇಕ ದೇಶಗಳಲ್ಲಿ ಈಗ ಕೋವಿಡ್ - 19, ರಷ್ಯಾ - ಉಕ್ರೇನ್‌ ಯುದ್ಧ ಮುಂತಾದ ಕಾರಣಗಳಿಂದ ಹಣದುಬ್ಬರ, ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಮುಂತಾದ ಬೆಳವಣಿಗೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇದರಿಂದ ಸಾಕಷ್ಟು ದೊಡ್ಡ ದೊಡ್ಡ ಕಂಪನಿಗಳ ಷೇರು ಮೌಲ್ಯ, ಆದಾಯ ಕುಸಿತದಂತಹ ಬೆಳವಣಿಗೆಗಳು ಹೆಚ್ಚಾಗುತ್ತಿದೆ. ಇದು ಫೇಸ್‌ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣಗಳನ್ನು ಹೊಂದಿರುವ ಮೆಟಾ ಕಂಪನಿಯನ್ನೂ ಬಿಟ್ಟಿಲ್ಲ.

ಹಣದುಬ್ಬರದ ಕಾರಣದಿಂದ ಮೆಟಾ ಕಂಪನಿಯ ಜಾಹೀರಾತು ಮಾರಾಟಕ್ಕೆ ಹೊಡೆತ ಬಿದ್ದಿದ್ದು, ಈ ಹಿನ್ನೆಲೆ ಮೊದಲ ಬಾರಿಗೆ ತ್ರೈಮಾಸಿಕದಲ್ಲಿ ಆದಾಯದ ಕುಸಿತವವಾಗಿರುವ ಬಗ್ಗೆ ಮೆಟಾ ಮಾಹಿತಿ ನೀಡಿದೆ. Meta Platforms Inc ಬುಧವಾರ ತನ್ನ ಮೊದಲ ತ್ರೈಮಾಸಿಕ ಆದಾಯದಲ್ಲಿ ಕುಸಿತವನ್ನು ದಾಖಲಿಸಿದ ನಂತರ ಕಂಪನಿಯ ಭವಿಷ್ಯದ ಬಗ್ಗೆಯೂ ಆತಂಕಗಳು ಮೂಡಿತು. ಹಿಂಜರಿತದ ಭಯ ಮತ್ತು ಸ್ಪರ್ಧಾತ್ಮಕ ಒತ್ತಡಗಳು ಮೆಟಾದ ಡಿಜಿಟಲ್ ಜಾಹೀರಾತುಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್‌ನಿಂದ ಹಿಂದೆ ಸರಿಯುತ್ತಿರುವ ಮಹಿಳೆಯರು: ಕಾರಣ ಇಲ್ಲಿದೆ..

ಅಮೆರಿಕದ ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನಲ್ಲಿ ಹೆಡ್‌ಕ್ವಾರ್ಟರ್‌ಗಳನ್ನು ಹೊಂದಿರುವ ಕಂಪನಿಯ ಷೇರುಗಳು ವಿಸ್ತೃತ ವಹಿವಾಟಿನಲ್ಲಿ ಸುಮಾರು 4.6% ನಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕಂಪನಿಯ ತ್ರೈಮಾಸಿಕ ಆದಾಯವು 26 ಬಿಲಿಯನ್‌ ಡಾಲರ್‌ ಹಾಗೂ 28.5 ಬಿಲಿಯನ್‌ ಡಾಲರ್‌ ನಡುವೆ ಕುಸಿಯುವ ನಿರೀಕ್ಷೆಯಿದೆ ಎಂದು ಮಟಾ ಹೇಳಿದೆ. ಕಳೆದ ವರ್ಷ ಸಹ ಮೆಟಾ ಆದಾಯ ಕುಸಿದಿದ್ದು, ಈ ಹಿನ್ನೆಲೆ ಸತತ 2ನೇ ವರ್ಷ ಕಂಪನಿಯ ಆದಾಯ ಕುಸಿದಂತಾಗಿದೆ. ಧಾರೆ, ತ್ರೈಮಾಸಿಕ ವರದಿಗಳ ಪೈಕಿ ಇದೇ ಮೊದಲ ಬಾರಿಗೆ ಆದಾಯ ಕುಸಿತವಾಗಿದೆ ಎಂದು ತಿಳಿದುಬಂದಿದೆ. Refinitiv ನ IBES ಮಾಹಿತಿಯ ಪ್ರಕಾರ, ವಿಶ್ಲೇಷಕರು ಈ ತ್ರೈಮಾಸಿಕದಲ್ಲಿ 30.52 ಬಿಲಿಯನ್‌ ಡಾಲರ್‌ ಆದಾಯವನ್ನು ನಿರೀಕ್ಷಿಸುತ್ತಿದ್ದರು ಎನ್ನಲಾಗಿದೆ.

ಬಹುತೇಕ ಸಂಪೂರ್ಣವಾಗಿ ಜಾಹೀರಾತು ಮಾರಾಟವನ್ನು ಒಳಗೊಂಡಿರುವ ಒಟ್ಟು ಆದಾಯವು ಕಳೆದ ವರ್ಷ 29.1 ಬಿಲಿಯನ್‌ ಡಾಲರ್‌ನಿಂದ ಜೂನ್ 30ಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕದಲ್ಲಿ 28.8 ಬಿಲಿಯನ್‌ ಡಾಲರ್‌ಗೆ ಅಂದರೆ 1% ಕುಸಿದಿದೆ. Refinitiv ಪ್ರಕಾರ, ಈ ಅಂಕಿ ಅಂಶವು ವಾಲ್ ಸ್ಟ್ರೀಟ್‌ನ 28.9 ಬಿಲಿಯನ್‌ ಡಾಲರ್‌ನ ಅಂದಾಜನ್ನು ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡಿದೆ. ಇನ್ನು, ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ನಿರ್ವಹಿಸುವ ಕಂಪನಿಯು ಬಳಕೆದಾರರ ಬೆಳವಣಿಗೆಗೆ ಮಿಶ್ರ ಫಲಿತಾಂಶಗಳನ್ನು ವರದಿ ಮಾಡಿದೆ.

ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್‌, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್‌!

ಫೇಸ್‌ಬುಕ್‌ನ ಮಾಸಿಕ ಹಾಗೂ ದೈನಂದಿನ ಸಕ್ರಿಯ ಬಳಕೆದಾರರೆಷ್ಟು ಗೊತ್ತಾ..?
ಪ್ರಮುಖ ಸಾಮಾಜಿಕ ನೆಟ್‌ವರ್ಕ್ ಫೇಸ್‌ಬುಕ್‌ನಲ್ಲಿ ಮಾಸಿಕ ಸಕ್ರಿಯ ಬಳಕೆದಾರರು ಎರಡನೇ ತ್ರೈಮಾಸಿಕದಲ್ಲಿ 2.93 ಬಿಲಿಯನ್‌ನಷ್ಟು ಅಂದರೆ 293 ಕೋಟಿ ಎಂದು ತಿಳಿದುಬಂದಿದೆ. ಇದು ವಿಶ್ಲೇಷಕರ ಸ್ವಲ್ಪಮಟ್ಟಿಗಿನ ನಿರೀಕ್ಷೆಗೆ ತಕ್ಕಂತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1% ಹೆಚ್ಚಳವಾಗಿದೆ, ಆದರೆ ದೈನಂದಿನ ಸಕ್ರಿಯ ಬಳಕೆದಾರರು 197 ಕೋಟಿ ಎಂದು ಅಂದಾಜು ಮಾಡಲಾಗಿದೆ.

ಅನೇಕ ಜಾಗತಿಕ ಕಂಪನಿಗಳಂತೆ, ಮೆಟಾ ಪ್ಲಾಟ್‌ಫಾರ್ಮ್‌ ಸಹ ಬಲವಾದ ಡಾಲರ್‌ ಮೌಲ್ಯದಿಂದ ಕೆಲವು ಆದಾಯದ ಒತ್ತಡವನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ ರೂಪಾಯಿ ಸೇರಿದಂತೆ ವಿದೇಶಿ ಕರೆನ್ಸಿಗಳಲ್ಲಿನ ಮಾರಾಟವು ಡಾಲರ್‌ ಎದುರು ಕಡಿಮೆಯಾಗಿದೆ. ಪ್ರಸ್ತುತ ವಿನಿಮಯ ದರಗಳ ಆಧಾರದ ಮೇಲೆ ಮೂರನೇ ತ್ರೈಮಾಸಿಕದಲ್ಲಿ 6% ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಮೆಟಾ ಹೇಳಿದೆ.

ಇನ್ನೊಂದೆಡೆ, ವಿಶ್ವದ ಅತಿದೊಡ್ಡ ಡಿಜಿಟಲ್ ಜಾಹೀರಾತು ಪ್ಲಾಟ್‌ಫಾರ್ಮ್ ಆಲ್ಫಬೆಟ್ ಇಂಕ್, ಮಂಗಳವಾರದಂದು ತನ್ನ ತ್ರೈಮಾಸಿಕ ಆದಾಯದಲ್ಲಿ ಏರಿಕೆಯನ್ನು ವರದಿ ಮಾಡಿದೆ. ಗೂಗಲ್‌ಗೆ ಗೂಗಲ್‌ ಸರ್ಚ್‌ ಎಂಬುದು ಅತಿದೊಡ್ಡ ಲಾಭ ತಂದುಕೊಡುವ ನಿಧಿಯಾಗಿದ್ದು, ಇದು ಹೂಡಿಕೆದಾರರ ನಿರೀಕ್ಷೆಗಳನ್ನು ಮೀರಿದೆ. ಅಲ್ಲದೆ, Snap Inc ಮತ್ತು Twitter ಎರಡೂ ಕಂಪನಿಗಳು ಕಳೆದ ವಾರ ಮಾರಾಟದ ನಿರೀಕ್ಷೆಗಳನ್ನು ಕಳೆದುಕೊಂಡಿವೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಜಾಹೀರಾತು ಮಾರುಕಟ್ಟೆಯ ನಿಧಾನಗತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ವಲಯದಾದ್ಯಂತ ವ್ಯಾಪಕವಾದ ಷೇರುಗಳ ಮಾರಾಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.