ಫೇಸ್‌ಬುಕ್‌ನಿಂದ ಹಿಂದೆ ಸರಿಯುತ್ತಿರುವ ಮಹಿಳೆಯರು: ಕಾರಣ ಇಲ್ಲಿದೆ..
ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಫೇಸ್‌ಬುಕ್ ಬೆಳವಣಿಗೆಗೆ ಭಾರತ ಪ್ರಮುಖವಾದ ಮಾರುಕಟ್ಟೆಯಾಗಿರುವುದರಿಂದ ಮೆಟಾ ಸಂಸ್ಥೆಗೆ ಚಂತೆಯ ವಿಷಯವಾಗಿದೆ.
ಭಾರತದ ಜನಸಂಖ್ಯೆ ಹೆಚ್ಚಿರುವಂತೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ದೊಡ್ಡದಿದೆ. ಆದರೆ, ಇತ್ತೀಚೆಗೆ ದೇಶದ ಅನೇಕರಿಗೆ ಫೇಸ್‌ಬುಕ್ ಬಳಕೆ ಮಾಡುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಹಿಳೆಯರು ಫೇಸ್‌ಬುಕ್‌ನಿಂದ ವಿಮುಖರಾಗುತ್ತಿದ್ದಾರೆ ಎಂಬ ಆತಂಕಕಾರಿ ವರದಿ ಬಂದಿದೆ. ಇದಕ್ಕೆ ಕಾರಣ ಹೀಗಿದೆ ನೋಡಿ..
ಫೇಸ್‌ಬುಕ್ ದೈನಂದಿನ ಬಳಕೆದಾರರಲ್ಲಿ ಇಳಿಕೆಯಾಗಿದೆ ಎಂದು ಮೆಟಾ ಕಂಪನಿ ಫೆಬ್ರವರಿ 2 ರಂದು ನೀಡಿದ ತ್ರೈಮಾಸಿಕ ವರದಿಯಲ್ಲಿ ಹೇಳಿತ್ತು. ಭಾರತದಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಇಂಟರ್‌ನೆಟ್ ದರ ಇದಕ್ಕೆ ಕಾರಣಗಳಲ್ಲೊಂದು ಎಂದು ಮೆಟಾ ಸಂಸ್ಥೆಯ ಹಣಕಾಸು ಮುಖ್ಯಸ್ಥ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತ ಫೇಸ್‌ಬುಕ್‌ನ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಈ ಹಿನ್ನೆಲೆ ಫೇಸ್‌ಬುಕ್‌ನ ದೈನಂದಿನ ಬಳಕೆದಾರರು ಕಡಿಮೆಯಗುತ್ತಿದ್ದಾರೆ ಎನ್ನಲಾಗಿದೆ.
ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್!
ಇಂಟರ್‌ನೆಟ್ ದರ ಹೆಚ್ಚಾಗುತ್ತಿರುವುದು ಒಂದು ಕಾರಣ ಎಂದು ಸಂಸ್ಥೆಯ ಹಣಕಾಸು ಮುಖ್ಯಸ್ಥರು ಹೇಳಿದ್ದರೆ, ಅದೇ ದಿನ ಅಮೆರಿಕ ಟೆಕ್ ಗ್ರೂಪ್ ನಡೆಸಿದ ಸಂಶೋಧನೆನಾ ವರದಿಯಲ್ಲಿ ಹಲವು ಕಾರಣಗಳು ಹಾಗೂ ತೊಂದರೆಗಳು ಬಹಿರಂಗವಾಗಿವೆ.
ಫೇಸ್‌ಬುಕ್‌ನಿಂದ ವಿಮುಖರಾಗುತ್ತಿರುವ ಮಹಿಳೆಯರು..!
ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಪುರುಷ ಪ್ರಾಧಾನ್ಯವಾಗಿದೆ. ಈ ಹಿನ್ನೆಲೆ ತಮ್ಮ ಖಾಸಗಿತನ ಹಾಗೂ ಸುರಕ್ಷತೆಯ ಬಗ್ಗೆ ಆತಂಕಗೊಂಡ ಅನೇಕ ಮಹಿಳೆಯರು ಫೇಸ್‌ಬುಕ್ ಬಳಕೆ ಮಾಡುತ್ತಿಲ್ಲ ಎಂದು ಮೆಟಾ ರಿಸರ್ಚ್ ವರದಿ ಮಾಡಿದೆ.
ಫೇಸ್‌ಬುಕ್‌ನಲ್ಲಿ ಮಹಿಳೆಯರು ಹಂಚಿಕೊಳ್ಳುವ ವಿಷಯ, ಫೋಟೋ, ವಿಡಿಯೋ ಮುಂತಾದ ಪೋಸ್ಟ್‌ನ ಸುರಕ್ಷತೆಯ ಭೀತಿ ಅವರನ್ನು ಕಾಡುತ್ತಿದೆ. ಹಾಗೂ ಪರಿಚಯವಿಲ್ಲದ ಬಳಕೆದಾರರು, ಪ್ರಮುಖವಾಗಿ ಪುರುಷರು ಫ್ರೆಂಡ್ ರಿಕ್ವೆಸ್ಟ್ ಕಳಿಸುವುದು, ಮೆಸೇಜ್ ಮಾಡುವುದು ಮುಂತಾದ ಕಾರಣಗಳಿಂದಲೂ ಮಹಿಳೆಯರು ವಿಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಮಹಿಳೆಯರನ್ನು ಹೊರತುಪಡಿಸಿ ಭಾರತದಲ್ಲಿ ಮೆಟಾ ಕಂಪನಿ ಯಶಸ್ವಿಯಾಗುವುದಿಲ್ಲ ಎಂದೂ ಈ ಸಂಶೋಧನೆಯಲ್ಲಿ ಹೇಳಲಾಗಿದೆ.
ಹಾಗೂ, ನಗ್ನತೆಯ ವಿಷಯ, ಫೇಸ್‌ಬುಕ್ ಅಪ್ಲಿಕೇಶನ್ ವಿನ್ಯಾಸದ ಗ್ರಹಿಸಿದ ಸಂಕೀರ್ಣತೆ, ಸ್ಥಳೀಯ ಭಾಷೆ ಮತ್ತು ಸಾಕ್ಷರತೆಯ ಅಡೆತಡೆಗಳು ಇದಕ್ಕೆ ಕಾರಣ ಎಂದು ಸಂಶೋಧನೆ ಹೇಳುತ್ತದೆ.
ಏಷ್ಯಾ-ಪೆಸಿಫಿಕ್ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಫೇಸ್‌ಬುಕ್‌ನ ಬಳಕೆದಾರರ ಬೆಳವಣಿಗೆಯು ಇತರೆ ಬಳಕೆದಾರರ ಸ್ಪರ್ಧೆಯಿಂದಲೂ ಹೊಡೆತ ಬಿದ್ದಿದೆ ಎಂದು ಹಣಕಾಸು ಮುಖ್ಯಸ್ಥ ವೆಹ್ನರ್ ಹೇಳಿದ್ದಾರೆ. ಹಾಗೂ, ಹೆಚ್ಚುತ್ತಿರುವ ಇಂಟರ್‌ನೆಟ್ ದರ ಸಹ ಇದಕ್ಕೆ ಕಾರಣ ಎಂದಿದ್ದಾರೆ.
ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿಲ್ಲ ಎಂದು ಅಪ್ರಾಪ್ತೆಯ ಕೊಲೆ
ಭಾರತದಲ್ಲಿ ಫೇಸ್‌ಬುಕ್‌ನ ಭವಿಷ್ಯವು ಮೆಟಾಗೆ ವ್ಯಾಪಕವಾದ ಪರಿಣಾಮಗಳನ್ನು ಹೊಂದಿದೆ. "ಭಾರತವು ಇತರ ಯಾವುದೇ ದೇಶಗಳಿಗಿಂತ ಹೆಚ್ಚಿನ FB ಬಳಕೆದಾರರನ್ನು ಹೊಂದಿದೆ" ಎಂದೂ ಸಂಶೋಧನೆಯು ಹೇಳಿದೆ.
"ಕಂಪನಿಯಾದ್ಯಂತದ ತಂಡಗಳು ಭಾರತದಲ್ಲಿ ತಮ್ಮ ಕಾರ್ಯತಂತ್ರದ ಸ್ಥಾನ ಮತ್ತು ಬೆಳವಣಿಗೆಯ ಅವಕಾಶಗಳನ್ನು ಸ್ಪಷ್ಟವಾಗಿ ಪರಿಗಣಿಸಬೇಕು. ಭಾರತದಲ್ಲಿನ ಫಲಿತಾಂಶಗಳು ಜಾಗತಿಕ ಫಲಿತಾಂಶಗಳನ್ನು ಹೆಚ್ಚಿಸಬಹುದು" ಎಂದೂ ಸಂಶೋಧನೆ ಹೇಳುತ್ತದೆ.
ಲಿಂಗ ಅಸಮತೋಲನ
ಭಾರತದಲ್ಲಿನ "ಬೆಳವಣಿಗೆಯ ಪ್ರವೃತ್ತಿಗಳ ಉನ್ನತ ಮಟ್ಟದ ಅವಲೋಕನ" ಎಂಬ ಆಂತರಿಕ ಅಧ್ಯಯನವನ್ನು ಫೇಸ್‌ಬುಕ್‌ನ ಸಂಶೋಧಕರು ಮತ್ತು ಉತ್ಪನ್ನ ತಂಡಗಳಿಗೆ ಸಹಾಯ ಮಾಡುವ ಪ್ರಸ್ತುತಿಯಲ್ಲಿ ವಿವರಿಸಲಾಗಿದೆ. ಈ ಪೈಕಿ ಪ್ರಮುಖ ಸಮಸ್ಯೆ "ಲಿಂಗ ಅಸಮತೋಲನ" ಕ್ಕೆ ಸಂಬಂಧಿಸಿದೆ ಎಂದು ಅದು ಹೇಳಿದೆ.
ಕಳೆದ ವರ್ಷ ಭಾರತದಲ್ಲಿ ಫೇಸ್‌ಬುಕ್‌ನ ಮಾಸಿಕ ಸಕ್ರಿಯ ಬಳಕೆದಾರರಲ್ಲಿ 75% ಪುರುಷರಿದ್ದಾರೆ ಎಂದೂ ಸಂಶೋಧಕರು ಕಂಡುಕೊಂಡಿದ್ದಾರೆ.
"ಭಾರತದಾದ್ಯಂತ ಇಂಟರ್ನೆಟ್ ಬಳಕೆಯಲ್ಲಿ ಲಿಂಗ ಅಸಮತೋಲನವಿದ್ದರೂ, ಫೇಸ್‌ಬುಕ್ ಬಳಕೆದಾರರಲ್ಲಿ ಅಸಮತೋಲನವು ಇನ್ನೂ ಹೆಚ್ಚು ಸ್ಪಷ್ಟವಾಗಿದೆ" ಎಂದು ಅಧ್ಯಯನವು ಹೇಳಿದೆ.
ಇತರ ದೇಶಗಳಿಗಿಂತ ಭಾರತದಲ್ಲಿ ನಕಾರಾತ್ಮಕ ವಿಷಯಗಳು ಹೆಚ್ಚು ಪ್ರಚಲಿತದಲ್ಲಿದೆ ಎಂದು ಸಹ ಆಂತರಿಕ ವರದಿ ಹೇಳುತ್ತದೆ.
ಕುಟುಂಬದ ಅಸಮ್ಮತಿ
"ಕುಟುಂಬವು ಎಫ್‌ಬಿಯನ್ನು ಅನುಮತಿಸುವುದಿಲ್ಲ" - ಇದು ಸಹ ಫೇಸ್‌ಬುಕ್ ಬಳಸದಿರಲು ಮಹಿಳೆಯರು ಉಲ್ಲೇಖಿಸಿದ ಪ್ರಮುಖ ಕಾರಣ ಎಂದು ಅಧ್ಯಯನವು ಕಂಡುಕೊಂಡಿದೆ.