ಫೇಸ್‌ಬುಕ್‌ನ ಮಾಜಿ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ವಿರುದ್ಧ ಅವರ ಮಾಜಿ ಉದ್ಯೋಗಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪುಸ್ತಕವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇದು ತೀವ್ರ ಸಂಚಲನವನ್ನು ಉಂಟುಮಾಡಿದೆ.

ಫೇಸ್‌ಬುಕ್‌ನ ಮಾಜಿ ಸಿಒಒ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಫೇಸ್‌ಬುಕ್ ಮಾಜಿ ಉದ್ಯೋಗಿಯೊಬ್ಬರು ಬರೆದ ಪುಸ್ತಕವೊಂದರಿಂದ ಈ ವಿಚಾರ ಬಹಿರಂಗವಾಗಿದ್ದು, ಸಂಚಲನ ಸೃಷ್ಟಿಯಾಗಿದೆ. ಅಮೆರಿಕಾ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕಿ ಹಾಗೂ ಬರಹಗಾರ್ತಿಯಾಗಿರುವ ಶೆರಿಲ್ ಕಾರಾ ಸ್ಯಾಂಡ್‌ಬರ್ಗ್(Sheryl Sandberg)ಅವರು ತಮ್ಮ 26 ವರ್ಷದ ಸಹಾಯಕಿಯನ್ನು ಖಾಸಗಿ ಜೆಟೊಂದರಲ್ಲಿ ಹಾಸಿಗೆಗೆ ಕರೆದಿದ್ದಲ್ಲದೇ ತನಗೂ ಆಕೆಗೂ ಸೇರಿಸಿ ಒಳ ಉಡುಪುಗಳನ್ನು ಖರೀದಿಸುವಂತೆ ಹೇಳಿದ್ದರಂತೆ.. ಈ ಒಳಉಡುಪುಗಳ ಒಟ್ಟು ಬೆಲೆ 13, ಡಾಲರ್ ಆಗಿತ್ತು. ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 11 ಲಕ್ಷ ರೂಪಾಯಿಗಳು. 

ಫೇಸ್‌ಬುಕ್ ಮಾಜಿ ಉದ್ಯೋಗಿ ಬರೆದ ಪುಸ್ತಕ
ಈ ವಿಚಾರವನ್ನು ಫೇಸ್‌ಬುಕ್ ಮಾಜಿ ಉದ್ಯೋಗಿಯಾಗಿರುವ ಸಾರಾ ವೈನ್ ವಿಲಿಯಮ್ಸ್‌ ಎಂಬುವವರು ತಮ್ಮ ಹೊಸ ಪುಸ್ತಕವಾದ 'ಕೇರ್‌ಲೆಸ್ ಪೀಪಲ್ ಎ ಕ್ಯೂಷನರಿ ಟೇಲ್ ಆಫ್ ಪವರ್, ಗ್ರೀಡ್‌ ಆ ಲಾಸ್ಟ್ ಐಡಿಯಲಿಸಂ' (Careless People: A Cautionary Tale of Power, Greed, and Lost Idealism)ನಲ್ಲಿ ಬರೆದುಕೊಂಡಿದ್ದಾರೆ. ಈ ಪುಸ್ತಕ ಈಗ ಟೆಕ್ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಶೆರಿಲ್ ಕಾರಾ ಸ್ಯಾಂಡ್‌ಬರ್ಗ್ ಫೇಸ್‌ಬುಕ್‌ನ ಮೆಟಾ ಪ್ಲಾಟ್‌ಫಾರ್ಮ್‌ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಆಗಸ್ಟ್ 2022ರಲ್ಲಿ ಅವರು ಆ ಹುದ್ದೆಯಿಂದ ಕೆಳಗಿಳಿದಿದ್ದರು. ಇತ್ತ ಪುಸ್ತಕ ಬರೆದಿರುವ ಫೇಸ್‌ಬುಕ್‌ನ ಮಾಜಿ ಉದ್ಯೋಗಿ ವೈನಿ ವಿಲಿಯಂ 2017ರಲ್ಲಿ ಫೇಸ್‌ಬುಕನ್ನು ತೊರೆಯುವುದಕ್ಕೂ ಮೊದಲು ಆರು ವರ್ಷಗಳ ಕಾಲ ಆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. 

ಗೂಗಲ್‌ ಬಳಿಕ, ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಿರುವ ಮೆಟಾ!

11 ಲಕ್ಷ ಮೌಲ್ಯದ ಒಳ ಉಡುಪು, ಖಾಸಗಿ ಜೆಟ್‌ನಲ್ಲಿ ಪಾರ್ಟಿ
ವೈನಿ ವಿಲಿಯಮ್ಸ್ ಅವರ ಪುಸ್ತಕದಲ್ಲಿ ಬರೆದಿರುವಂತೆ ಶೆರ್ಲಿ ಸ್ಯಾಂಡ್‌ಬರ್ಗ್ ಅವರು ಹಾಗೂ ಅವರ ಸಹಾಯಕಿ ಯುರೋಪ್‌ನಾದ್ಯಂತ ಸುದೀರ್ಘ ಕಾರು ಪ್ರಯಾಣದ ಸಮಯದಲ್ಲಿ ಪರಸ್ಪರ ಮಡಿಲಲ್ಲಿ ಮಲಗುವುದು ಮತ್ತು ಪರಸ್ಪರ ತಲೆ ಕೂದಲನ್ನು ಸವರುವುದನ್ನು ಮಾಡುತ್ತಿದ್ದರಂತೆ.. ಅಲ್ಲದೆ ವೈನಿ ವಿಲಿಯಮ್ಸ್ ಬಳಿ ತನಗೂ ಹಾಗೂ ತನ್ನ ಸಹಾಯಕಿಗೆ ಇಬ್ಬರಿಗಾಗಿ ಒಳಉಡುಪು ಖರೀದಿಸುವಂತೆ ಹೇಳಿದ್ದರಂತೆ ಇದರ ಮೊತ್ತ ಸುಮಾರು 13 ಸಾವಿರ ಡಾಲರ್. ಅಮೆರಿಕಾ ಅಂಗ್ಲ ದೈನಿಕ ದಿ ನ್ಯೂಯಾರ್ಕ್ ಟೈಮ್ಸ್‌ನ ಸೋಮವಾರ ಪ್ರಕಟವಾದ ಪುಸ್ತಕ ವಿಮರ್ಶೆಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

ಆರೋಪ ನಿರಾಕರಿಸಿದ ಮೆಟಾ ಪ್ರತಿನಿಧಿ
ಖಾಸಗಿ ಜೆಟ್ ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿನ ಏಕೈಕ ಹಾಸಿಗೆಯಲ್ಲಿ ಅವರ ಜೊತೆ ಮಲಗಲು ನಿರಾಕರಿಸಿದ್ದ ವೈನಿ ವಿಲಿಯಮ್ಸ್ ಬಗ್ಗೆ ಸಿಒಒ ಶೆರ್ಲಿ ಸ್ಯಾಂಡ್‌ಬರ್ಗ್ ಅವರು ತೀವ್ರ ಅಸಮಾಧಾನಗೊಂಡಿದ್ದರಂತೆ. ಆದರೆ ಈ ಎಲ್ಲಾ ಆರೋಪಗಳನ್ನು ಮೆಟಾ ಪ್ರತಿನಿಧಿಯೊಬ್ಬರು ತಳ್ಳಿಹಾಕಿದ್ದಾರೆ. ಅಲ್ಲದೇ ವೈನಿ ವಿಲಿಯಮ್ಸ್ ಅವರ ಈ ಆರೋಪಗಳು ಕಂಪನಿಯ ಬಗ್ಗೆ ಹಳೆಯ ಮತ್ತು ಹಿಂದೆ ವರದಿ ಮಾಡಲಾದ ಸುಳ್ಳು ಆರೋಪಗಳ ಮಿಶ್ರಣ ಎಂದು ಕರೆದಿದ್ದಾರೆ. ಕಳಪೆ ಕಾರ್ಯಕ್ಷಮತೆ ಮತ್ತು ಕೆಟ್ಟ ನಡವಳಿಕೆಯ ಕಾರಣಕ್ಕಾಗಿ ಎಂಟು ವರ್ಷಗಳ ಹಿಂದೆ ವಿನ್-ವಿಲಿಯಮ್ಸ್ ಅವರನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿತ್ತು. ಆ ಸಮಯದಲ್ಲಿ ನಡೆದ ಆಂತರಿಕ ವಿಚಾರಣೆಯು ವಿನ್ ವಿಲಿಯಮ್ಸ್ ಅವರ ಕಿರುಕುಳದ ಆರೋಪಗಳು ದಾರಿತಪ್ಪಿಸುವ ಮತ್ತು ಆಧಾರರಹಿತ ಎಂದು ತೀರ್ಪು ಬಂದಿತ್ತು ಎಂದು ಮೆಟಾ ಪ್ರತಿನಿಧಿ ಹೇಳಿದ್ದಾರೆ. 

ಮೆಟಾ, ಮಾರ್ಕ್‌ ಜುಕರ್‌ಬರ್ಗ್‌ಗೆ ಮಾನನಷ್ಟ ಮೊಕದ್ದಮೆ ನೋಟಿಸ್‌ ಕಳಿಸಲಿರುವ ಸಂಸದೀಯ ಸಮಿತಿ

ಫೇಸ್‌ಬುಕ್‌ ವಿರೋಧಿಗಳಿಂದ ಅಪಪ್ರಚಾರ
ಫೇಸ್‌ಬುಕ್ ವಿರೋಧಿಗಳಿಂದ ವಿನ್ ವಿಲಿಯಮ್ಸ್‌ಗೆ ಹಣ ಪಾವತಿಸಿ ಈ ಪುಸ್ತಕವನ್ನು ಬರೆಸಿದ್ದಾರೆ ಇದನ್ನೇ ತಮ್ಮ ಗುರಿಯ ಮುಂದುವರಿಕೆಯಾಗಿ ಬಿಂಬಿಸಿದ್ದಾರೆ ಎಂದು ಅವರು ಮೆಟಾ ಪ್ರತಿನಿಧಿ ಆರೋಪಿಸಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ವಿನ್-ವಿಲಿಯಮ್ಸ್, ಫೇಸ್‌ಬುಕ್‌ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನು ಎಂಜಿನಿಯರಿಂಗ್ ಮತ್ತು ಕೋಡಿಂಗ್‌ನ ಬಗ್ಗೆ ತೀವ್ರ ಗೀಳು ಹೊಂದಿದ್ದ ರಾಜಕೀಯ ಮತ್ತು ಜನಪ್ರಿಯತೆಯಿಂದ ಆಕರ್ಷಿತರಾದ ಕಾರ್ಯನಿರ್ವಾಹಕರಾಗಿ ಮಾರ್ಪಟ್ಟ ವ್ಯಕ್ತಿ ಎಂದು ದೂರಿದ್ದಾರೆ. ಅಲ್ಲದೇ ಸ್ಯಾಂಡ್‌ಬರ್ಗ್ ಮತ್ತು ಜುಕರ್‌ಬರ್ಗ್ ಅವರು 'ದಿ ಗ್ರೇಟ್ ಗ್ಯಾಟ್ಸ್‌ಬೈ'ಯ ಕೇರ್‌ಲೆಸ್ ವ್ಯಕ್ತಿಗಳು ಅವರು ತೊಂದರೆ ಉಂಟುಮಾಡುವುದಲ್ಲದೇ ಮತ್ತು ಅದರ ಪರಿಣಾಮಗಳನ್ನು ಇತರರು ಅನುಭವಿಸುವಂತೆ ಮಾಡುತ್ತಾರೆ ಎಂದು ಲೇಖಕಿ ವವೈನಿ ವಿಲಿಯಮ್ಸ್ ದೂರಿದ್ದಾರೆ.