ದೊಡ್ಡ ದೊಡ್ಡ ಉದ್ಯಮಿಗಳ ಜೀವನ ಸಿಕ್ಕಾಪಟ್ಟೆ ಐಷಾರಾಮಿಯಾಗಿರುತ್ತೆ. ಬೃಹತ್ ಬಂಗಲೆ, ಕಾರು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೊಂದಿರುತ್ತಾರೆ. ಆದರೆ ರತನ್ ಟಾಟಾ ತಮ್ಮ ಮಾತ್ರ ಹೀಗಿಲ್ಲ. ಸಿಕ್ಕಾಪಟ್ಟೆ ಆಸ್ತಿಯಿದ್ದರೂ 2 bhk ಮನೆಯಲ್ಲಿ ವಾಸಿಸುತ್ತಾರೆ. ಇಬ್ಬರ ಕೈಯಲ್ಲಿ ಯಾವುದೇ ಮೊಬೈಲ್ ಫೋನ್ ಸಹ ಇಲ್ಲ.
ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರೊಂದಿಗೆ ತೆಗೆದುಕೊಂಡಿರುವ ಬಾಲ್ಯದ ಪೋಟೋವನ್ನು ಹಂಚಿಕೊಂಡಿದ್ದಾರೆ. ತನ್ನ ಕಿರಿಯ ಸಹೋದರನೊಂದಿಗೆ 1945 ರಲ್ಲಿ ಕ್ಲಿಕ್ ಮಾಡಿದ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಶೇರ್ ಮಾಡಿದ್ದಾರೆ. ಆ ಫೋಟೋಗೆ 'ಅದು ತುಂಬಾ ಸಂತೋಷದ ದಿನಗಳು. ನಮ್ಮ ನಡುವೆ ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಬದಲಾವಣೆಯಾಗಿಲ್ಲ(1945 ನನ್ನ ಸಹೋದರ ಜಿಮ್ಮಿಯೊಂದಿಗೆ)' ಎಂದು ಶೀರ್ಷಿಕೆ ನೀಡಿದ್ದಾರೆ. ಉದ್ಯಮಿಯು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನ್ನ 7 ಮಿಲಿಯನ್ ಅನುಯಾಯಿಗಳೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
82 ವರ್ಷದ ಜಿಮ್ಮಿ, ಟಾಟಾ ಸನ್ಸ್ ಮತ್ತು ಇತರ ಟಾಟಾ ಗ್ರೂಪ್ ಕಂಪನಿಗಳಲ್ಲಿ ಷೇರುದಾರರಾಗಿದ್ದಾರೆ. ಆದರೆ ಅವರು ಐಷಾರಾಮಿ ಜೀವನ (Luxurious life) ನಡೆಸುತ್ತಿಲ್ಲ. ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ಇರುತ್ತಾರೆ ಮತ್ತು ಮೊಬೈಲ್ ಫೋನ್ ಕೂಡಾ ಹೊಂದಿಲ್ಲ. RPG ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಜನವರಿ 19, 2022ರಂದು ಹಂಚಿಕೊಂಡ ಟ್ವಿಟರ್ ಪೋಸ್ಟ್‌ನಲ್ಲಿ ಜಿಮ್ಮಿಯನ್ನು ಎಲ್ಲರಿಗೂ ಪರಿಚಯಿಸಿದರು. ಈ ಪೋಸ್ಟ್ ಭಾರಿ ವೈರಲ್ ಆಗಿತ್ತು.
ಟಾಟಾ ಇಂಡಿಕಾ ಕಾರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ; 25 ವರ್ಷಗಳ ಹಳೆಯ ನೆನಪು ಹಂಚಿಕೊಂಡ ರತನ್ ಟಾಟಾ
ರತನ್ ಟಾಟಾ ಅವರ ಕಿರಿಯ ಸಹೋದರ (Younger brother) ಜಿಮ್ಮಿ ಟಾಟಾ, ಮುಂಬೈನ ಕೊಲಾಬಾದಲ್ಲಿ 2 ಬಿಎಚ್‌ಕೆ ಫ್ಲಾಟ್‌ನಲ್ಲಿ ಜೀವನವನ್ನು ನಡೆಸುತ್ತಾರೆ. ಬಿಸಿನೆಸ್‌ನಲ್ಲಿ ಎಂದಿಗೂ ಆಸಕ್ತಿಯಿಲ್ಲದ ಅವರು ಉತ್ತಮ ಸ್ಕ್ವ್ಯಾಷ್ ಆಟಗಾರರಾಗಿದ್ದರು ಮತ್ತು ಪ್ರತಿ ಬಾರಿಯೂ ನನ್ನನ್ನು ಸೋಲಿಸುತ್ತಿದ್ದರು. ಪ್ರಚಾರ ಬಯಸದ ಅತ್ಯಂತ ವಿನಮ್ರ ವ್ಯಕ್ತಿ ಜಿಮ್ಮಿ ಟಾಟಾ' ಎಂದು ಹರ್ಷ ಗೋಯೆಂಕಾ ಟ್ವೀಟ್ ಮಾಡಿದ್ದಾರೆ. ಜಿಮ್ಮಿ ಟಾಟಾ ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಪವರ್‌ನಲ್ಲಿ ಷೇರುದಾರರಾಗಿದ್ದಾರೆ.
1989ರಲ್ಲಿ ತಂದೆ ನವಲ್ ಟಾಟಾ ನಿಧನ (Death) ಹೊಂದುವಾಗ ಬರೆದಿದ್ದ ಉಯಿಲಿನ ಅನುಸಾರ, ಜಿಮ್ಮಿ ಟಾಟಾ ಅವರು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಜಿಮ್ಮಿ ಹಾಗೂ ರತನ್ ಸಹೋದರರಿಗೆ ನೊಯೆಲ್ ಎಂಬ ಇನ್ನೊಬ್ಬ ಸಹೋದರನೂ ಇದ್ದಾರೆ. ನೊಯೆಲ್ ಟಾಟಾ ಅವರು ರತನ್ ಮತ್ತು ಜಿಮ್ಮಿ ಟಾಟಾ ಅವರ ಮಲ ಸಹೋದರರಾಗಿದ್ದಾರೆ (ತಂದೆ ಒಬ್ಬರೇ, ತಾಯಿ ಬೇರೆ ಬೇರೆ; ನೋಯೆಲ್ ಎರಡನೇ ತಾಯಿ ಮಗ). ಅವರು ಟಾಟಾ ಇಂಟರ್ ನ್ಯಾಷನಲ್‌ನ ಎಂಡಿ ಹಾಗೂ ಟ್ರೆಂಟ್‌ನ ಚೇರ್‌ಮನ್ ಆಗಿದ್ದಾರೆ.
BMTC ಗುಡ್ ನ್ಯೂಸ್, 921 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಟಾಟಾ ಮೋಟಾರ್ಸ್ ಜೊತೆ ಒಪ್ಪಂದ!
