ಕಾಲೇಜ್ ಡ್ರಾಪ್ ಔಟ್ ವಿದ್ಯಾರ್ಥಿ ಈಗ ಕೋಟ್ಯಂತರ ರೂ. ಬೆಲೆಬಾಳೋ ಕಂಪನಿ ಒಡೆಯ;ತೆರೆ ಮೇಲೆ ಬರಲಿದೆ ಈತನ ಕಥೆ

ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣವೊಂದೇ ಮಾನದಂಡವಲ್ಲ ಎಂಬುದಕ್ಕೆ ಅರುಣ್ ಅಗರ್ವಾಲ್ ಅತ್ಯುತ್ತಮ ನಿದರ್ಶನ. ಕಾಲೇಜ್ ಡ್ರಾಪ್ ಔಟ್ ಆದರೂ 22ನೇ ವಯಸ್ಸಿನಲ್ಲಿ ಕಂಪನಿ ಸ್ಥಾಪಿಸಿ ಯಶಸ್ಸು ಕಂಡವರು ಅರುಣ್ ಅಗರ್ವಾಲ್. 
 

Meet man who dropped out of engineering college to built million dollar company at 22 anu

Business Desk: ಶಿಕ್ಷಣ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ನೆರವು ನೀಡಬಲ್ಲದು ಎಂದು ನಮ್ಮ ಸಮಾಜ ನಂಬಿದೆ. ಇದೇ ಕಾರಣಕ್ಕೆ ಬಹುತೇಕ ಹೆತ್ತವರು ಹಾಗೂ ಶಿಕ್ಷಕರು ಮಕ್ಕಳು ಪುಸ್ತಕದಲ್ಲಿರುವ ಜ್ಞಾನವನ್ನು ಕಲಿತರೆ ಸಾಕು ಎಂದು ಭಾವಿಸುತ್ತಾರೆ. ಆದರೆ, ಹಲವರು ಮಾತ್ರ ಶಿಕ್ಷಣವಷ್ಟೇ ಅಲ್ಲ, ಕಠಿಣ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಕೂಡ ಯಶಸ್ಸು ಗಳಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಾರೆ. ಇದಕ್ಕೆ ಸ್ಟೀವ್ ಜಾಬ್, ಮಾರ್ಕ್ ಜುಕರ್ ಬರ್ಗ್ ಅವರಂತಹ ಜನಪ್ರಿಯ ಉದ್ಯಮಿಗಳೇ ನಿದರ್ಶನ. ಭಾರತದಲ್ಲಿ ಕೂಡ ಹೆಚ್ಚಿನ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಉದ್ಯಮದಲ್ಲಿ ಯಶಸ್ಸು ಕಂಡವರು ಹಲವರಿದ್ದಾರೆ. ಅಂಥವರಲ್ಲಿ ವರುಣ್ ಅಗರ್ವಾಲ್ ಕೂಡ ಒಬ್ಬರು. ಶಿಕ್ಷಣದ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿರದ ವರುಣ್ ಗೆ ಬಾಲ್ಯದಿಂದಲೂ ಉದ್ಯಮ ಸ್ಥಾಪಿಸುವ ಕನಸಿತ್ತು. ಅದನ್ನು ಬೆನ್ನಟ್ಟಿ ಹೋದ ಅವರಿಗೆ ಯಶಸ್ಸು ಕೂಡ ಸಿಕ್ಕಿತು.

ಬೆಂಗಳೂರಿನ ಈ ಹುಡುಗ ಯಶಸ್ಸಿಗೆ ಶಿಕ್ಷಣವೊಂದೇ ಮಾನದಂಡವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಹಾಗೆಯೇ ಉದ್ಯಮದಲ್ಲಿ ಯಶಸ್ಸು ಗಳಿಸಲು ನೀವು ಐಐಟಿ, ಐಐಎಂಗಳಲ್ಲೇ ಓದಿರಬೇಕು ಅಥವಾ ಉನ್ನತ ಶಿಕ್ಷಣ ಪಡೆದಿರಬೇಕಾದ ಅಗತ್ಯವಿಲ್ಲ ಎಂಬುದನ್ನು ರುಜುವಾತು ಮಾಡಿದ್ದಾರೆ. ಬೆಂಗಳೂರಿನಲ್ಲಿ 1987ರಲ್ಲಿ ಜನಿಸಿದ ಅಗರ್ವಾಲ್, ಶಾಲೆಗೆ ಹೋಗುವ ಸಮಯದಲ್ಲಿ ಜಾಣ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಶಿಕ್ಷಣದಲ್ಲಿ ಅವರಿಗೆ ಅಷ್ಟೊಂದು ಆಸಕ್ತಿಯೂ ಇರಲಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಬದುಕು ಸುಖದ ಹಾದಿಯಂತೂ ಆಗಿರಲಿಲ್ಲ. ಆದರೆ, ಉದ್ಯಮ ಮಾಡಬೇಕು ಎಂಬ ಕನಸು ಮಾತ್ರ ವರುಣ್ ಅವರಿಗೆ ಮೊದಲಿನಿಂದಲೂ ಇತ್ತು.

ಐಟಿ ಉದ್ಯೋಗ ಬಿಟ್ಟು ಬರೀ 20,000 ಹೂಡಿಕೆಯೊಂದಿಗೆ ಬರ್ಗರ್ ಶಾಪ್ ಆರಂಭಿಸಿದ ಈತ, ಈಗ 100 ಕೋಟಿ ರೂ. ಕಂಪನಿ ಒಡೆಯ

ಹೇಗೋ ಕಷ್ಟಪಟ್ಟು ಓದಿ ಐಸಿಎಂಆರ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವರುಣ್ ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಕಾಲೇಜಿನಿಂದ ಅರ್ಧದಲ್ಲೇ ಡ್ರಾಪ್ ಔಟ್ ಆಗುತ್ತಾರೆ. ಹೀಗಾಗಿ 2009ರಲ್ಲಿ ಸ್ನೇಹಿತ ರೋಹನ್ ಮಲ್ಹೋತ್ರ ಜೊತೆಗೆ ಸೇರಿ 'ಅಲ್ಮ ಮ್ಯಾಟರ್' ಪ್ರಾರಂಭಿಸುತ್ತಾರೆ. ಇದು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಆನ್ ಲೈನ್ ಸ್ಟೋರ್. ವರುಣ್ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಸ್ಥಾಪನೆಗೊಂಡ ಮೂರು ವರ್ಷಗಳೊಳಗೆ ಈ ಕಂಪನಿ ಮಿಲಿಯನ್ ಡಾಲರ್ ಆದಾಯ ಗಳಿಸುವ ಸಂಸ್ಥೆಯಾಗಿ ಬೆಳೆಯಿತು. ಇಂಡಿಯನ್ ಏಂಜೆಲ್ ನೆಟ್ ವರ್ಕ್ ನಿಂದ ಎರಡು ಬಾರಿ ಹಣಕಾಸಿನ ನೆರವು ಕೂಡ ಪಡೆದಿತ್ತು.

200 ವಿವಿಧ ನಗರಗಳು ಹಾಗೂ ಪಟ್ಟಣಗಳಲ್ಲಿ 3000ಕ್ಕೂ ಅಧಿಕ ಶಾಲೆಗಳು ಹಾಗೂ ಕಾಲೇಜುಗಳ ಜೊತೆಗೆ ಅಲ್ಮ ಮ್ಯಾಟರ್ ಕಾರ್ಯನಿರ್ವಹಿಸಿದೆ. ಇನ್ನು ಉದ್ಯಮದಲ್ಲಿನ ಯಶಸ್ಸು ಇತರ ಉದ್ಯಮಗಳಲ್ಲಿ ಕೂಡ ತೊಡಗುವಂತೆ ಅಗರ್ವಾಲ್ ಗೆ ಪ್ರೇರಣೆ ನೀಡಿತು. ರೆಟಿಕ್ಯೂಲರ್ ಎಂಬ ಸೋಷಿಯಲ್ ಮೀಡಿಯಾ ಹಾಗೂ ಕಂಟೆಂಟ್ ಏಜೆನ್ಸಿಯನ್ನು ಕೂಡ ಸ್ಥಾಪಿಸಿರುವ ಅಗರ್ವಾಲ್, ಸಿನಿಮಾಗಳು ಹಾಗೂ ಡಾಕ್ಯುಮೆಂಟರಿಗಳ ತಯಾರಿಕೆಯಲ್ಲಿ ಕೂಡ ತೊಡಗಿದ್ದಾರೆ. 

ದಿನಕ್ಕೆ 10ರೂ. ಕೂಲಿ ಪಡೆಯುತ್ತಿದ್ದ ಕಾರ್ಮಿಕನ ಮಗ ಈಗ 3 ಸಾವಿರ ಕೋಟಿ ರೂ. ಕಂಪನಿ ಒಡೆಯ

ವರುಣ್ ಯುಟ್ಯೂಬ್ ಚಾನಲ್ ಒಂದನ್ನು ಕೂಡ ಹೊಂದಿದ್ದಾರೆ. ಇದಕ್ಕೆ 25 ಮಿಲಿಯನ್ ವೀಕ್ಷಕರಿದ್ದಾರೆ. ವರುಣ್ ಫಿಲ್ಮ್ ಮೇಕರ್ ಕೂಡ ಹೌದು. ಲೇಖಕನೂ ಆಗಿರುವ ವರುಣ್ ಬರೆದಿರುವ 'ಹೌ ಐ ಬ್ರೇವ್ಡ್ ಅನು ಆಂಟಿ ಆಂಡ್ ಕೋ ಫೌಂಡೆಡ್ ಎ ಮಿಲಿಯನ್ ಡಾಲ್ ಕಂಪನಿ' ಎಂಬ ಪುಸ್ತಕ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದು ಉದ್ಯಮಿಯಾಗುವ ಯುವಜನರಿಗೆ ಪ್ರೇರಣೆ ಕೂಡ ಆಗಿದೆ. ಈ ಕಾದಂಬರಿಯ 5,00,000 ಕಾಪಿಗಳು ಮಾರಾಟವಾಗಿವೆ. ಇನ್ನು ಈ ಪುಸ್ತಕ ಆಧರಿಸಿ ದಂಗಲ್ ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.  ವರುಣ್ ಅವರ ನಿವ್ವಳ ಸಂಪತ್ತು 387 ಕೋಟಿ ರೂ. 

Latest Videos
Follow Us:
Download App:
  • android
  • ios