ದಿನಕ್ಕೆ 10ರೂ. ಕೂಲಿ ಪಡೆಯುತ್ತಿದ್ದ ಕಾರ್ಮಿಕನ ಮಗ ಈಗ 3 ಸಾವಿರ ಕೋಟಿ ರೂ. ಕಂಪನಿ ಒಡೆಯ
ಬಡತನ ಸಾಧನೆಗೆ ಅಡ್ಡಿಯಲ್ಲ, ಪ್ರೇರಣೆ ಎಂಬುದನ್ನು ತೋರಿಸಿ ಕೊಟ್ಟವರು ಐಡಿ ಫ್ರೆಶ್ ಫುಡ್ ಸಿಇಒ ಪಿ.ಸಿ.ಮುಸ್ತಫಾ. ಬಡ ಕುಟುಂಬದಲ್ಲಿ ಜನಿಸಿದ ಇವರು ಸ್ವಂತ ದುಡಿಮೆಯಿಂದಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಐಡಿ ಫ್ರೆಶ್ ಫುಡ್ ಎಂಬ ಕಂಪನಿ ಸ್ಥಾಪಿಸುವ ಮೂಲಕ ಇಂದು ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರೆ.
Business Desk: ಸ್ವಂತ ಪರಿಶ್ರಮದಿಂದ ಮೇಲೇರಿದವರ ಕಥೆಗಳು ಯಾವಾಗಲೂ ವಿಶೇಷವಾಗಿರುವ ಜೊತೆಗೆ ಪ್ರೇರಣೆ ಕೂಡ ನೀಡುತ್ತವೆ. ಇಂಥ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿರುತ್ತಾರೆ. ಆದರೆ, ಏನಾದರೂ ಸಾಧಿಸಬೇಕೆಂಬ ಛಲವನ್ನು ಮಾತ್ರ ಇವರು ಬಿಡೋದಿಲ್ಲ. ಕೊನೆಗೆ ಇವರ ಇದೇ ನಿಲುವು ಯಶಸ್ಸನ್ನು ಧಕ್ಕಿಸಿಕೊಡುತ್ತದೆ. ಹೀಗೆ ಬಾಲ್ಯದಿಂದಲೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತ ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತ ಇಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರೋರಲ್ಲಿ ಐಡಿ ಫ್ರೆಶ್ ಫುಡ್ ಸಿಇಒ ಪಿ.ಸಿ.ಮುಸ್ತಫಾ ಕೂಡ ಒಬ್ಬರು. ಯಾವುದೇ ಉದ್ಯಮ ಹಿನ್ನೆಲೆಯಿಲ್ಲದೆ, ಹಣಕಾಸಿನ ಬೆಂಬಲವೂ ಇಲ್ಲದೆ ಇಂದು 3,000 ಕೋಟಿ ರೂ. ಮೌಲ್ಯದ ಕಂಪನಿಯನ್ನು ಮುಸ್ತಫಾಕಟ್ಟಿದ್ದಾರೆ. ಕೇರಳದ ವೈನಾಡಿನ ಬಡ ಕುಟುಂಬದಲ್ಲಿ ಜನಿಸಿ ಇಂದು ಕೋಟ್ಯಾಧಿಪತಿಯಾಗಿರುವ ಬೆಳೆದಿರುವ ಮುಸ್ತಫಾ ಅವರ ಕಥೆ ಯುವಜನರಿಗೆ ನಿಜಕ್ಕೂ ಪ್ರೇರಣೆ ನೀಡುವಂಥದ್ದು.
ದಿನಕ್ಕೆ 10ರೂ. ಸಂಪಾದಿಸುತ್ತಿದ್ದ ತಂದೆ
ಕೇರಳದ ವೈನಾಡಿನ ಬಡ ಕುಟುಂಬದಲ್ಲಿ ಜನಿಸಿದ ಮುಸ್ತಫಾಗೆ, ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಿತ್ತು. ಅವರ ತಂದೆ ಶುಂಠಿ ತೋಟದಲ್ಲಿ ದಿನಗೂಲಿ ನೌಕರರಾಗಿದ್ದರು. ಅವರ ಕೂಲಿ ದಿನಕ್ಕೆ ಕೇವಲ 10ರೂ. ಈ ಹಣದಲ್ಲೇ ಇಡೀ ಕುಟುಂಬದ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ಮುಸ್ತಫಾ ಹಾಗೂ ಅವರ ಸಹೋದರರು ಕೂಡ ಕಟ್ಟಿಗೆ ಮಾರಾಟ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡೋದು ಅನಿವಾರ್ಯವಾಗಿತ್ತು. ಮುಸ್ತಫಾಕೂಡ ಶಾಲೆಯ ಅವಧಿ ಮುಗಿದ ಬಳಿಕ ಇಂಥ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಅಲ್ಲದೆ, ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುತ್ತಿದ್ದರು. ಹೀಗೆ ಉಳಿತಾಯ ಮಾಡಿದ ಹಣದಲ್ಲಿ ಮುಸ್ತಫಾ ಒಂದು ಮೇಕೆ ಖರೀದಿಸಿದರು. ಇದು ಅವರ ಕುಟುಂಬದ ಮೊದಲ ಆಸ್ತಿಯಾಗಿತ್ತು. ಆ ಬಳಿಕ ಮೇಕೆ ಮಾರಿ ಹಸುವನ್ನು ಖರೀದಿಸಿದರು. ಈ ಹಸುವಿನ ಹಾಲನ್ನು ಮಾರಿ ಬಂದ ಹಣದಿಂದ ಅವರ ಕುಟುಂಬ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಲು ಸಾಧ್ಯವಾಯಿತು.
ಕೇವಲ 50 ರೂ. ಇಟ್ಕೊಂಡು ಭಾರತ ತೊರೆದ ವ್ಯಕ್ತಿಯೀಗ 15,000 ಕೋಟಿಯ ಮಾಲೀಕ!
ಎನ್ ಐಟಿಯಲ್ಲಿ ಪದವಿ
ಪಾರ್ಟ್ ಟೈಂ ಉದ್ಯೋಗ ಕೂಡ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ್ದ ಮುಸ್ತಫಾ, ಒಂದಿಷ್ಟು ಹಣವನ್ನು ಉಳಿತಾಯ ಹಾಗೂ ಸಣ್ಣ ಹೂಡಿಕೆ ಮಾಡಿದ್ದರು. ಈ ಹಣವೇ ಅವರಿಗೆ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದಲ್ಲಿ (ಎನ್ ಐಟಿ) ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆಯಲು ನೆರವು ನೀಡಿತು. ಪದವಿ ಬಳಿಕ ಮುಸ್ತಫಾ ಮೋಟೋರೋಲಾದಲ್ಲಿ ಐಟಿ ಉದ್ಯೋಗ ಗಿಟ್ಟಿಸಿಕೊಂಡರು. ನಂತರ ದುಬೈನಲ್ಲಿ ಸಿಟಿಬ್ಯಾಂಕ್ ನಲ್ಲಿ ಉದ್ಯೋಗ ದೊರಕಿತು
ಉದ್ಯೋಗ ತೊರೆದು ಐಐಎಂನಲ್ಲಿ ಎಂಬಿಎ
ದುಬೈನಲ್ಲಿನ ಉದ್ಯೋಗ ತೊರೆದು ಭಾರತಕ್ಕೆ ಹಿಂತಿರುಗಿದ ಮುಸ್ತಫಾ, ಬೆಂಗಳೂರು ಐಐಎಂನಲ್ಲಿ ಎಂಬಿಎ ಪದವಿ ಪಡೆಯುತ್ತಾರೆ. ಎಂಬಿಎ ಮಾಡುತ್ತಿರುವ ಸಂದರ್ಭದಲ್ಲೇ ಸಹೋದರ ಸಂಬಂಧಿಗಳ ಜೊತೆಗೆ ಸೇರಿ ದೋಸೆ ಹಾಗೂ ಇಡ್ಲಿ ಹಿಟ್ಟು ಉತ್ಪಾದಿಸುವ ಉದ್ಯಮಕ್ಕೆ ಕೈಹಾಕುತ್ತಾರೆ.
14ನೇ ವಯಸ್ಸಿಗೆ ಕಂಪನಿ ಸ್ಥಾಪನೆ,17ಕ್ಕೆ ವಿಶ್ವದ ಅತೀ ಕಿರಿಯ ಸಿಇಒ ಪಟ್ಟ;ಬೆಂಗಳೂರಿನ ಈ ಹುಡುಗ ಹಲವರಿಗೆ ಪ್ರೇರಣೆ
ಬ್ರೇಕ್ ಫಾಸ್ಟ್ ಫುಡ್ ಕಂಪನಿ
ಸಂಬಂಧಿಗಳ ಜೊತೆಗೆ ಸೇರಿ ರೆಡಿ-ಟು-ಈಟ್ ಪ್ಯಾಕೇಜ್ಡ್ ಫುಡ್ ಗಳನ್ನು ಪೂರೈಕೆ ಮಾಡುವ 'ಐಡಿ ಫ್ರೆಶ್ ಫುಡ್ಸ್' ಎಂಬ ಬ್ರೇಕ್ ಫಾಸ್ಟ್ ಫುಡ್ ಕಂಪನಿ ಪ್ರಾರಂಭಿಸುತ್ತಾರೆ. ಈ ಕಂಪನಿಯನ್ನು ಕೇವಲ 50 ಸಾವಿರ ರೂ. ಬಂಡವಾಳದೊಂದಿಗೆ ಪ್ರಾರಂಭಿಸುತ್ತಾರೆ. ಆ ಬಳಿಕ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಕೂಡ ಈ ಕಂಪನಿ ಪೂರೈಕೆ ಮಾಡಲು ಪ್ರಾರಂಭಿಸುತ್ತದೆ. ಪ್ರಾರಂಭದಲ್ಲಿ ಈ ಪ್ಯಾಕ್ಡ್ ಫುಡ್ ತಿನಿಸುಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿಲ್ಲ. ಪ್ಯಾಕ್ ನಲ್ಲಿರುವ ಆಹಾರ ಆರೋಗ್ಯಕರವಲ್ಲ ಎಂಬ ಭಾವನೆ ಭಾರತೀಯರಲ್ಲಿ ಹೆಚ್ಚಾಗಿರುವ ಕಾರಣ ಯಾರೂ ಕೂಡ ಅದನ್ನು ಖರೀದಿಸುತ್ತಿರಲಿಲ್ಲ. ಮಾರುಕಟ್ಟೆಗೆ 10 ಪ್ಯಾಕೇಟ್ ಕಳುಹಿಸಿದರೆ, 90 ಹಿಂತಿರುಗಿ ಬರುತ್ತಿತ್ತು ಎನ್ನುತ್ತಾರೆ ಮುಸ್ತಫಾ.
ನಿಧಾನವಾಗಿ ನಗರ ಪ್ರದೇಶಗಳಲ್ಲಿ ಐಡಿ ಫ್ರೆಶ್ ಫುಡ್ಸ್ ಮಾರಾಟ ಹೆಚ್ಚಳಗೊಳ್ಳಲು ಪ್ರಾರಂಭವಾಯಿತು. ಬ್ರೇಕ್ ಫಾಸ್ಟ್ ಫುಡ್ಸ್ ನಲ್ಲಿ ಐಡಿ ಫ್ರೆಶ್ ಸಾಕಷ್ಟು ಜನಪ್ರಿಯತೆ ಗಳಿಸಿತು.