ಕೆಲಸಕ್ಕಿಂತ ಭಿಕ್ಷೆ ಬೇಡೋದು ಬೆಸ್ಟಾ? ಭಿಕ್ಷೆ ಬೇಡಿ ಕೋಟ್ಯಧಿಪತಿಯಾಗಿದ್ದಾಳೆ ಈಕೆ!

ಶ್ರೀಮಂತರಾಗಲು ಜನರು ಹಗಲಿರುಳು ದುಡಿಯುತ್ತಾರೆ. ಏಷ್ಟೇ ಕಷ್ಟಪಟ್ರೂ ಒಂದು ಸ್ಥಾನಕ್ಕೆ ಹೋಗೋದು ಸುಲಭವಲ್ಲ. ಆದ್ರೆ ಕೆಲವೊಬ್ಬರು ಅಚ್ಚರಿ ರೀತಿಯಲ್ಲಿ ಕೋಟ್ಯಾಧಿಪತಿಯಾಗಿರ್ತಾರೆ. ಅದ್ರಲ್ಲಿ ಈ ಹುಡುಗಿ ಕೂಡ ಸೇರಿದ್ದಾಳೆ. 

Pakistani Girl Video Viral Girl Became Rich Begging Bought Flat roo

ಸೋಷಿಯಲ್ ಮೀಡಿಯಾದಲ್ಲಿ ನಾವು ದಿನೇ ದಿನೇ ಅನೇಕ ರೀತಿಯ ವಿಚಿತ್ರ ಘಟನೆಗಳನ್ನು ನೋಡುತ್ತಿರುತ್ತೇವೆ. ಅನೇಕ ಮಂದಿ ಸೋಷಿಯಲ್ ಮೀಡಿಯಾಗಳಿಂದಲೇ ಫೇಮಸ್ ಆಗಿದ್ದಾರೆ. ಇಂತಹ ಸಾಮಾಜಿಕ ತಾಣಗಳು ಅನೇಕರ ಪ್ರತಿಭೆಯನ್ನು ಹೊರಹಾಕುತ್ತಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಘಟನೆಗಳು ಸೋಷಿಯಲ್ ಮೀಡಿಯಾಗಳ ಮೂಲಕ ಎಲ್ಲರನ್ನೂ ತಲುಪುತ್ತದೆ.

ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುವ ವಿಡಿಯೋಗಳು ನಂಬಬೇಕೋ ಬೇಡವೋ ಎಂಬ ಪ್ರಶ್ನೆಯೂ ಏಳುತ್ತದೆ. ಏಕೆಂದರೆ ಕೆಲವು ನಂಬಲಸಾಧ್ಯವಾದ ವಿಡಿಯೋ (Video) ಗಳನ್ನು ನಾವು ಅವುಗಳಲ್ಲಿ ಕಾಣುತ್ತೇವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಬ್ಬ ಯುವತಿಯ ವಿಡಿಯೋ ಕೂಡ ಅಷ್ಟೇ ಆಶ್ಚರ್ಯಕರವಾಗಿದೆ. ಈ ವಿಡಿಯೋವನ್ನು ನೋಡಿದ ಜನರು ಹೀಗೂ ಹಣ ಸಂಪಾದಿಸಬಹುದಾ ಎಂದು ಹುಬ್ಬೇರಿಸಿದ್ದಾರೆ. ಕೆಲವರಿಗೆ ಎಷ್ಟೇ ಪ್ರತಿಭೆ ಇದ್ದರೂ ಅದೃಷ್ಟ ಕೈಕೊಡುತ್ತದೆ. ಕಷ್ಟಪಟ್ಟು ದುಡಿಯುವ ಎಷ್ಟೋ ಮಂದಿಗೆ ಬ್ಯುಸಿನೆಸ್ ನಲ್ಲಿ ಲಾಭವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಯುವತಿ ಭಿಕ್ಷೆ ಬೇಡಿ ಕೋಟ್ಯಾಧಿಪತಿಯಾಗಿರುವುದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.

35,000 ಕೋಟಿ ಆಸ್ತಿ ಇದ್ರೂ ಸರಳ ಜೀವನ ನಡೆಸ್ತಿದ್ದಾರೆ ಈ ಭಾರತೀಯ ಮಹಿಳೆ!

ಭಿಕ್ಷೆ ಬೇಡಿ ಶ್ರೀಮಂತರ ಪಟ್ಟಿಗೆ ಸೇರಿದ ಯುವತಿ : ರಸ್ತೆಯಲ್ಲಿ ಓಡಾಡುವಾಗ ಅಥವಾ ಮಂದಿರಗಳಿಗೆ ಹೋದಾಗ ನಾವು ಅಲ್ಲಿ ಭಿಕ್ಷುಕರನ್ನು ನೋಡುತ್ತೇವೆ. ದಾರಿಯಲ್ಲಿ ಹೋಗುವ ಅರ್ಧಕ್ಕಿಂತ ಹೆಚ್ಚಿನ ಮಂದಿ ಭಿಕ್ಷುಕರಿಗೆ ಕನಿಕರ ತೋರಿಸಿ ಹಣ ನೀಡುತ್ತಾರೆ. ನಾವು ಭಿಕ್ಷಕರೆಂದು ತಿಳಿದು ಕೊಡುವ ಚಿಲ್ಲರೆ ಕಾಸಿನಿಂದಲೇ ಅವರು ದಿನಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವು ಮಂದಿ ಸುಳ್ಳು ಹೇಳಿ ಹಣ ಪಡೆಯುತ್ತಾರೆ.

ತರಕಾರಿ ಮಾರೋ ಕುಟುಂಬದ ಹುಡುಗ ಈಗ ಜಗತ್ತಿನ ಅತೀ ಕಿರಿಯ ಬಿಲಿಯನೇರ್‌, ಆಸ್ತಿ ಮೌಲ್ಯ ಭರ್ತಿ 33 ಕೋಟಿ!

ಪಾಕಿಸ್ತಾನದ ಒಬ್ಬ ಯುವತಿ ಲೈಬಾ ಭಿಕ್ಷಕಿಯ ರೂಪದಲ್ಲಿ ಹಣ ಸಂಪಾದಿಸಿ ಕೋಟಿ ಕೋಟಿಯ ಒಡತಿಯಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಿಕ್ಷೆ ಬೇಡಿ ಹಣ ಸಂಪಾದಿಸಿದ ಈಕೆ ಈಗ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ. ನಂಬಲು ಅಸಾಧ್ಯವಾಗಿದ್ದರೂ ಇದು ನಿಜ. ಈ ಕಾರಣದಿಂದಲೇ ಈಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾಳೆ.  ಕಳೆದ ಐದು ವರ್ಷದಿಂದ ನಾನು ಪಾಕಿಸ್ತಾನದಲ್ಲಿ ನೆಲೆಸಿದ್ದೆ. ಅಲ್ಲಿ ಭಿಕ್ಷೆ ಬೇಡಿ ಸಾಕಷ್ಟು ಹಣ ಗಳಿಸಿದೆ. ನಂತರ ನಾನು ಪಾಕಿಸ್ತಾನ ಬಿಟ್ಟು ಮಲೇಶಿಯಾಕ್ಕೆ ಬಂದೆ. ಅಲ್ಲಿ ಕೂಡ ನಾನು ಭಿಕ್ಷೆ ಬೇಡಿ ಜನರನ್ನು ಮರುಳುಮಾಡಿ ಹಣ ಪಡೆಯುತ್ತಿದ್ದೆ. ಭಿಕ್ಷೆಯ ಹಣದಿಂದಲೇ ಮಲೇಶಿಯಾದಲ್ಲಿ ಎರಡು ಫ್ಲ್ಯಾಟ್ ಹಾಗೂ ಕಾರು ಖರೀದಿಸಿದೆ. ನನ್ನದೇ ಆದ ಬ್ಯುಸಿನೆಸ್ ಅನ್ನೂ ಹೊಂದಿದ್ದೇನೆ ಎಂದು ಲೈಬಾ ಹೇಳಿದ್ದಾಳೆ.

ಸುಳು ಹೇಳಿ ಹಣ ಸಂಪಾದಿಸುತ್ತಿದ್ದ ಲೈಬಾ :  ಹಣ ಸಂಪಾದನೆಗಾಗಿ ನಾನು ಹೆಚ್ಚು ಜನರಿರುವ ಕಡೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ಕೈಯಲ್ಲಿ ಪುಸ್ತಕ ಹಿಡಿದು ವಿದ್ಯಾಭ್ಯಾಸಕ್ಕೆ ಹಣ ಬೇಕೆಂದು ಭಿಕ್ಷೆ ಬೇಡುತ್ತಿದ್ದೆ. ಕೆಲವೊಮ್ಮೆ ಮನೆಯಲ್ಲಿ ಬಹಳ ಕಷ್ಟ ಇದೆ, ತಂದೆ ತಾಯಿಗೆ ಹುಷಾರಿಲ್ಲ ನಾನೇ ಮನೆ ನಡೆಸಬೇಕೆಂದು ಸುಳ್ಳು ಹೇಳುತ್ತಿದ್ದೆ ಎಂದು ತನ್ನ ಭಿಕ್ಷೆ ಬೇಡುವ ವಿಧಾನವನ್ನು ಹೇಳಿದ್ದಾಳೆ. ಲೈಬಾಳ ಈ ವಿಡಿಯೋವನ್ನು ಷಾ ಫೈಸಲ್ ಎಂಬ ಬಳಕೆದಾರ ಶೇರ್ ಮಾಡಿದ್ದಾನೆ. ಒಬ್ಬ ಭಿಕ್ಷುಕಿ ಶ್ರೀಮಂತೆಯಾದ ಈ ವಿಡಿಯೋವನ್ನು ಈಗಾಗಲೇ 2.5 ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ಅನೇಕ ಮಂದಿ ಇದಕ್ಕೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಪಾಕಿಸ್ತಾನ ಹುಡುಗನೊಬ್ಬ ಈ ವಿಡಿಯೋವನ್ನು ತನ್ನ ಪೇಜ್ ನಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ. ಈ ವಿಡೀಯೋ ನೋಡಿದ ಕೆಲವರಿಗೆ ಕಷ್ಟಪಟ್ಟು ದುಡಿಯೋದಕ್ಕಿಂತ ಭಿಕ್ಷೆ ಬೇಡುವುದೇ ಒಳ್ಳೆಯದು ಎಂದು ಅನಿಸಿದರೂ ಆಶ್ಚರ್ಯವಿಲ್ಲ. 

Latest Videos
Follow Us:
Download App:
  • android
  • ios