ನ್ಯೂಯಾರ್ಕ್(ನ.04):ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ನಿರ್ದಿಷ್ಟ ಕಂಪನಿಯ ನಿರ್ದಿಷ್ಟ ನಿಯಮಗಳನ್ನು ಪಾಲಿಸದಿದ್ದರೆ ಕಿಕ್ ಔಟ್ ಆಗುವುದು ಕಟ್ಟಿಟ್ಟ ಬುತ್ತಿ.

ಅದರಂತೆ ಕಂಪನಿಯ ನಿಯಮಗಳಿಗೆ ವಿರುದ್ಧವಾಗಿ ಮಹಿಳಾ ಸಹೋದ್ಯೋಗಿಯೊಂದಿಗೆ ಒಮ್ಮತದ ಸಂಬಂಧ ಹೊಂದಿದ ಆರೋಪದ ಮೇಲೆ, ಮೆಕ್'ಡೋನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿದೆ.

Zomato ಬೆನ್ನಲ್ಲೇ ವಿವಾದಕ್ಕೀಡಾದ ಮೆಕ್‌ಡಿ, ಟ್ವಿಟರ್‌ನಲ್ಲಿ #BoycottMcDonalds ಟ್ರೆಂಡ್!’

ಮೆಕ್'ಡೋನಾಲ್ಡ್ ಕಂಪನಿ ನಿಯಮಾನುಸಾರ ಉದ್ಯೋಗಿ ಮತ್ತೋರ್ವ ಉದ್ಯೋಗಿಯೊಂದಿಗೆ ನಿಯಮಬಾಹಿರ ಸಂಬಂಧ ಹೊಂದಿರಕೂಡದು. ಆದರೆ ಈ ನಿಯಮ ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿಯೊಂದಿಗೆ ಸಂಬಂದ ಹೊಂದಿದ್ದ ಬ್ರೂಕ್ ಅವರನ್ನು ಮೆಕ್'ಡೋನಾಲ್ಡ್ ವಜಾಗೊಳಿಸಿದೆ.

ಇನ್ನು ಮೆಕ್'ಡೊನಾಲ್ಡ್ ಅಮೆರಿಕದ ಅಧ್ಯಕ್ಷ ಕ್ರಿಸ್ ಕೆಂಪ್ಕಿನ್ಸ್ಕಿ ಅವರನ್ನು ಸಂಸ್ಥೆಯ ನೂತನ ಸಿಇಒ ಆಗಿ ನೇಮಿಸಲಾಗಿದೆ. ಅಲ್ಲದೇ ಕ್ರಿಸ್ ಅವರನ್ನು ನಿರ್ದೇಶಕರ ಮಂಡಳಿಗೂ ಆಯ್ಕೆ ಮಾಡಲಾಗಿದೆ.

ಮ್ಯಾಕ್ ಡೋನಾಲ್ಡ್ ಕೆಚಪ್‌ನಲ್ಲಿ ಹುಳ: ವಿಡಿಯೋ!