ಬಾಯಲ್ಲಿ ನೀರು ತರಿಸುವ ಮ್ಯಾಕ್ ಡೋನಾಲ್ಡ್ ಪಿಜ್ಜಾ! ಜೊತೆಗೆ ಕೆಚಪ್ ಇದ್ದರಂತೂ ಟೇಸ್ಟ್ ಕೇಳೊದೇ ಬೇಡ! ಆದರೆ ಕೆಚಪ್‌ನಲ್ಲೇನಿದೆ ಎಂದು ಒಮ್ಮೆ ತಪ್ಪದೇ ನೋಡಿ! ಮ್ಯಾಕ್ ಡೋನಾಲ್ಡ್ ಕೆಚಪ್‌ನಲ್ಲಿ ಸಿಕ್ತು ಹುಳ! ಇಂಗ್ಲೆಂಡ್ ನ ಕೇಂಬ್ರಿಡ್ಜ್ ಮ್ಯಾಕ್ ಡೋನಾಲ್ಡ್ ಮಳಿಗೆ! ಹುಳದ ಫೋಟೋ ಶೇರ್ ಮಾಡಿದ ಬೆಲ್ಲಾ ರಿಚಿ ಎಂಬ ಮಹಿಳೆ

ಕೇಂಬ್ರಿಡ್ಜ್(ಅ.8): ಮ್ಯಾಕ್ ಡೋನಾಲ್ಡ್ ಪಿಜ್ಜಾ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಶುದ್ಧ ಪರಿಸರದ ಮ್ಯಾಕ್ ಡೋನಾಲ್ಡ್ ಶಾಪ್‌ಗಳಿಗೆ ಕುಟುಂಬ ಸಮೇತ ಭೇಟಿ ನೀಡೊದು ಅಂದ್ರೆ ಎಲ್ಲಿರಗೂ ಇಷ್ಟ. ಆದ್ರೆ ಕೆಲವೊಮ್ಮೆ ಇಲ್ಲಿ ನಡೆಯುವ ಯಡವಟ್ಟುಗಳು ಜನರ ಗಮನಕ್ಕೆ ಬಾರದೇ ಹೋಗುತ್ತವೆ.

ಅದರಂತೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಮ್ಯಾಕ್ ಡೋನಾಲ್ಡ್ ಮಳಿಗೆಯಲ್ಲಿ ಪಿಜ್ಜಾ ಜೊತೆಗೆ ನೀಡಿದ್ದ ಕೆಚಪ್‌ನಲ್ಲಿ ಚಿಕ್ಕ ಗಾತ್ರದ ಹುಳವೊಂದು ಪತ್ತೆಯಾಗಿದ್ದು, ಅದರ ಫೋಟೋವನ್ನು ಬೆಲ್ಲಾ ರಿಚಿ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Scroll to load tweet…

ಬೆಲ್ಲಾ ರಿಚಿ ಕೊಂಡಿದ್ದ ಪಿಜ್ಜಾ ಮತ್ತು ಕೆಚಪ್ ನಲ್ಲಿ ಹುಳ ಸಿಕ್ಕಿದ್ದು, ಈ ಕುರಿತು ಸಿಬ್ಬಂದಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೆಲ್ಲಾ ಆರೋಪಿಸಿದ್ದಾಳೆ.

ತನ್ನ ದೂರನ್ನು ನಿರ್ಲಕ್ಷಿಸಿದ್ದಕ್ಕೆ ಹುಳದ ಕೆಚಪ್ ಫೋಟೋವನ್ನು ತಾನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬೇಕಾಯಿತು ಎಂದು ಬೆಲ್ಲಾ ಬರೆದುಕೊಂಡಿದ್ದಾಳೆ.