ಇಲ್ಲಿವರೆಗೆ ಬಾಡಿಗೆ ಗಂಡ ಬಾಡಿಗೆ ಹೆಂಡತಿ ಬಾಡಿಗೆ ಸ್ನೇಹಿತ ಎಂಬೆಲ್ಲಾ ಉದ್ಯಮಗಳಿರುವುದರ ಬಗ್ಗೆ ವರದಿಯಾಗಿದ್ದವು. ಆದರೆ ಈಗ ನಮ್ಮ ಭಾರತದಲ್ಲಿ ನಿಮ್ಮ ಕಷ್ಟ ಕೇಳುವ ಉದ್ಯಮವೊಂದನ್ನು ವ್ಯಕ್ತಿಯೊಬ್ಬರು ಸ್ಥಾಪಿಸಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕಷ್ಟ ಕೇಳೋರಿಲ್ಲಾ ಅಂತ ಗೋಳಾಡ್ಬೇಡಿ ಈ ಬೀಚ್‌ಗೆ ಹೋಗಿ

ಅಯ್ಯೋ ನಮ್ ಕಷ್ಟ ಕೇಳೋರು ಯಾರು ಇಲ್ಲ ಎಂದು ಅನೇಕರು ಗೋಳಾಡುವುದನ್ನು ನೀವು ಕೇಳಿರಬಹುದು. ಅವರ ಕಷ್ಟಕ್ಕೆ ನಾ ಕಿವಿಯಾಗುವೆ ಆದರೆ ನನ್ನ ಕಷ್ಟವನ್ನು ಕೇಳುವುದಕ್ಕೆ ಯಾರು ಇಲ್ಲ ಎಂದು ಅನೇಕ ಗೃಹಿಣಿಯರು, ಪುರುಷರು ಹೀಗೆ ಎಲ್ಲಾ ವಯೋಮಾನದವರು ಈ ರೀತಿ ಗೋಳಾಡುತ್ತಾರೆ. ಮಾತನಾಡುವ ಅನೇಕರಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇರುವುದಿಲ್ಲ ಅದುವೇ ಈ ಸಮಸ್ಯೆಗೆ ಕಾರಣ. ಸರಿಯಾಗಿ ಮಾತನ್ನು ಕೇಳಿಸಿಕೊಳ್ಳದೇ ಉತ್ತರಿಸೋರೆ ನಮ್ಮಲ್ಲಿ ಅನೇಕ. ಹೀಗಿರುವಾಗ ನಿಮಗೂ ನಿಮ್ಮ ಸಮಸ್ಯೆಯನ್ನು ಕೇಳಿಸಿಕೊಳ್ಳುವ ಒಬ್ಬರು ಬೇಕು ಎಂದು ಅನೇಕರಿಗೆ ಅನಿಸುವುದು ಸಹಜ. ಇದನ್ನೇ ಒಬ್ಬರು ಇಲ್ಲಿ ಉದ್ಯಮವಾಗಿಸಿಕೊಂಡಿದ್ದಾರೆ. ಇಲ್ಲಿವರೆಗೆ ಬಾಡಿಗೆ ಗಂಡ ಬಾಡಿಗೆ ಹೆಂಡತಿ ಬಾಡಿಗೆ ಸ್ನೇಹಿತ ಎಂಬೆಲ್ಲಾ ಉದ್ಯಮಗಳಿರುವುದರ ಬಗ್ಗೆ ವರದಿಯಾಗಿದ್ದವು. ಆದರೆ ಈಗ ನಮ್ಮ ಭಾರತದಲ್ಲಿ ನಿಮ್ಮ ಕಷ್ಟ ಕೇಳುವ ಉದ್ಯಮವೊಂದನ್ನು ವ್ಯಕ್ತಿಯೊಬ್ಬರು ಸ್ಥಾಪಿಸಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮುಂಬೈ ಬೀಚ್‌ನಲ್ಲಿ ವ್ಯಕ್ತಿಯ ಹೊಸ ಬ್ಯುಸಿನೆಸ್

ಹೌದು ಮುಂಬೈನ ಬೀಚ್‌ನಲ್ಲಿ ಶುಲ್ಕ ಪಾವತಿಸಿ ಜನರ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.. ಇಂದಿನ ಬ್ಯುಸಿ ಯುಗದಲ್ಲಿ ಒಂದೊಂದು ನಿಮಿಷವೂ ಹಣದಂತೆ ಅಮೂಲ್ಯವೇ ಹಣವಾದರೂ ವಾಪಸ್ ಗಳಿಸಬಹುದು. ಆದರೆ ಜೀವನದಲ್ಲಿ ಕಳೆದುಹೋದ ಸಮಯವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ, ಹೀಗಿರುವಾಗ ನಿಮ್ಮ ಮಾತನ್ನು ಯಾರಾದರೂ ಕೇಳಬೇಕಾದರೆ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ನಿಮಗಾಗಿ ಮೀಸಲಿಡಬೇಕು. ಹೀಗಾಗಿ ತಮ್ಮ ಸಮಯ ನೀಡಿ ನಿಮ್ಮ ಸಮಸ್ಯೆ ಕೇಳುವುದಕ್ಕೆ ಇಲ್ಲೊಬ್ಬರು ಸಿದ್ಧರಾಗಿದ್ದು, ಅವರ ಸಮಯಕ್ಕೆ ನೀವು ಹಣ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಕುದುರೆಮುಖ ಉದ್ಯಾನವನದ 25ಕ್ಕೂ ಹೆಚ್ಚು ಕಡೆ ಬೆಂಕಿ: ಹೊತ್ತಿ ಉರಿಯುತ್ತಿರುವ ಅಪರೂಪದ ಶೋಲಾ ಹುಲ್ಲುಗಾವಲು

ಪೃಥ್ವಿರಾಜ್ ಬೊಹ್ರಾ ಎಂಬುವವರು ಮುಂಬೈನ ಬೀಚ್‌ನಲ್ಲಿ ಈ ಹೊಸ ಉದ್ಯಮವನ್ನು ಆರಂಭಿಸಿದ್ದು, 'ಕಿಸಿ ಕೋ ಅಪ್ನಾ ದುಃಖ ಸುನಾನಾ ಹೈ ತೋ ಮೇನ್ ಸನ್ ಸಕ್ತಾ ಹು' ಎಂಬ ಫಲಕವನ್ನು ಹಿಡಿದುಕೊಂಡು ಅವರು ಬೀಚ್‌ನಲ್ಲಿ ನಿಂತಿದ್ದಾರೆ. ಅಂದರೆ ಯಾರಿಗಾದರೂ ನಿಮ್ಮ ಕಷ್ಟ ಹೇಳಿಕೊಳ್ಳಬೇಕು ಅನಿಸಿದರೆ ಕೇಳುವುದಕ್ಕೆ ನಾನು ಸಿದ್ಧನಿದ್ದೇನೆ ಎಂದು ಬರೆದಿರುವ ಫಲಕ ಇದಾಗಿದೆ. ಬೀಚ್‌ಗೆ ಬಂದವರು ಯಾರೋ ಇವರ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಈ ವೀಡಿಯೋಗೆ ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಡಿಯೋದಲ್ಲಿ ಅವರು ಮಾತುಗಳನ್ನು ಅಥವಾ ಸಮಸ್ಯೆಯನ್ನು ಕೇಳಿಸಿಕೊಳ್ಳುವುದಕ್ಕೆ ತಾವು ನಿಗದಿ ಮಾಡಿದ ಬೆಲೆಯನ್ನು ವಿವರಿಸಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಆಲಿಸಲು ಅವರು 250 ರೂ., ಹೆಚ್ಚು ಗಂಭೀರ ಸಮಸ್ಯೆಗಳಿಗೆ 500 ರೂ. ಮತ್ತು ಒಟ್ಟಿಗೆ ಕುಳಿತು ಅಳಬೇಕು ಎಂದು ಬಯಸಿದರೆ1,000 ರೂ. ವಿಧಿಸುತ್ತಾರೆ. ಇಂತಹ ಕೆಲಸಕ್ಕೆ ಯಾರಾದರೂ ಹಣ ನೀಡುತ್ತಾರೆಯೇ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು ಹೌದು ಜನರು ಬರುತ್ತಾರೆ ಹಣ ಪಾವತಿ ಮಾಡುತ್ತಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಹೀಗೆ ಹೊಸ ಉದ್ಯಮ ಆರಂಭಿಸಿದ ವ್ಯಕ್ತಿ ಹೆಸರು ಪೃಥ್ವಿರಾಜ್ ಬೊಹ್ರಾ, ಅವರು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ. ಇವರ ಈ ವಿಭಿನ್ನ ಉದ್ಯಮವು ಮಾನಸಿಕ ಆರೋಗ್ಯ ಮತ್ತು ಮುಂಬೈನಂತಹ ಜನನಿಬಿಡ ನಗಗಳಲ್ಲಿ ಹೆಚ್ಚುತ್ತಿರುವ ಭಾವನಾತ್ಮಕ ಬೆಂಬಲದ ಅಗತ್ಯತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂಟಿಯಾಗಿರುವಅನೇಕರಿಗೆ ಕೇಳುವ ಕಿವಿಯಾಗಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿದ್ದಾರೆ. ಆದರೆ ಇನ್ನೂ ಕೆಲವರು ಅಂತಹ ಸಂವಹನಗಳಿಗೆ ಹಣವನ್ನು ವಿಧಿಸುವ ಕಲ್ಪನೆಯನ್ನು ಪ್ರಶ್ನಿಸಿದರು. ಆದರೆ ಬೇರೆಯವರ ಮಾತನ್ನು ಹಣ ಪಡೆಯದೇ ಆತ ಕೇಳುತ್ತಾ ಕುಳಿತಾರೆ ಆತನೂ ಬದುಕಬೇಕಲ್ವಾ? ಯಾರು ಉಚಿತವಾಗಿ ಯಾರನ್ನು ಸಾಕುವುದಿಲ್ಲ. ಈ ಬಗ್ಗೆ ನೀವೇನಂತೀರಿ ಕಾಮೆಂಟ್ ಮಾಡಿ..

ಇದನ್ನೂ ಓದಿ: ಭಾರತ ಪಾಕಿಸ್ತಾನ ಎಲ್ಒಸಿ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿದ ಭಾರತೀಯ ಸೇನೆ

Scroll to load tweet…